ದೆಹಲಿ ಮಹಾನಗರಪಾಲಿಕೆಯಲ್ಲಿ ಸ್ಥಾಯಿ ಸಮಿತಿಯ ಚುನಾವಣೆಯಲ್ಲಿ ಘರ್ಷಣೆ !

ಇಡೀ ರಾತ್ರಿ ರಂಪಾಟ !

ಬೆಳಗ್ಗೆ ಮತ್ತೆ ರಂಪಾಟ ಆರಂಭವಾಗಿ ಕಾರ್ಯಕಲಾಪ ಸ್ಥಗಿತ !

ನವ ದೆಹಲಿ – ದೆಹಲಿ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿಯ ಚುನಾವಣೆಗೆ ಫೆಬ್ರವರಿ ೨೨ ರಂದು ಸಂಜೆ ಪ್ರಾರಂಭವಾದ ನಂತರ ಸಭಾಗೃಹದಲ್ಲಿ ರಂಪಾಟ ಶುರುವಾಯಿತು. ಈ ರಾಂಪಾಟ ತಡರಾತ್ರಿಯ ವರೆಗೆ ನಡೆಯುತ್ತಲೇ ಇತ್ತು. ಭಾಜಪ ಮತ್ತು ಆಮ್ ಆದ್ಮಿ ಪಕ್ಷದ ಪುರುಷ ಮತ್ತು ಮಹಿಳಾ ನಗರಸೇವಕರಲ್ಲಿ ಘರ್ಷಣೆ ನಡೆಯಿತು. ಗುದ್ದಾಟದ ಜೊತೆಗೆ ಪರಸ್ಪರರು ಹೊಡೆದಾಡಿದರು. ಹಾಗೂ ಈ ಸಮಯದಲ್ಲಿ ಕುರ್ಚಿಗಳು, ಸೇಬು, ಮೈಕ್, ಬಾಟಲಿಗಳು ಮುಂತಾದ ವಸ್ತುಗಳು ಪರಸ್ಪರರ ಮೇಲೆ ಎಸೆಯಲಾಯಿತು. ಚುನಾವಣೆಗಾಗಿ ಇಟ್ಟಿರುವ ಮತ ಪೆಟ್ಟಿಗೆ ಬಿಸಾಕಿದರು. ಈ ಘರ್ಷಣೆಯ ನಂತರ ಎರಡು ಪಕ್ಷದ ನಗರ ಸೇವಕರು ಸಭಾಗೃಹದಲ್ಲಿಯೆ ನಿದ್ದೆಗೆ ಜಾರಿದರು. ಈ ಘರ್ಷಣೆಯ ವಿಡಿಯೋ ಮತ್ತು ಛಾಯಾಚಿತ್ರಗಳು ಪ್ರಸಾರವಾಗಿದೆ. ಮರುದಿನ ಬೆಳಿಗ್ಗೆ ಮತ್ತೆ ಚುನಾವಣೆ ಪ್ರಕ್ರಿಯೆ ಮುಂದುವರೆದಾಗ ರಂಪಾಟವು ಮುಂದುವರೆದು ದಿನದಲ್ಲಿ ೬ ಸಲ ಕಾರ್ಯಕಲಾಪ ಸ್ಥಗಿತಗೊಳಿಸಲಾಯಿತು. ಆಮ್ ಆದ್ಮಿ ಪಕ್ಷದ ನಗರ ಸೇವಕಿ ಮತ್ತು ಆಯ್ಕೆಯಾಗಿರುವ ಮಹಾಪೌರ ಶೈಲಿ ಒಬೆರಾಯ್ ಇವರು, ಭಾಜಪದ ನಗರಸೇವಕರು ನನ್ನ ಮೇಲೆ ದಾಳಿಯ ಪ್ರಯತ್ನ ಮಾಡಿದರು. ಇದು ಭಾಜಪದ ಗುಂಡಾಗಿರಿಯ ನಿದರ್ಶನವಾಗಿದೆ ಎಂದು ಹೇಳಿದರು.

ಏನು ನಡೆಯಿತು ?

ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕೆಲವು ನಗರ ಸೇವಕರು ಸಭಾಗೃಹದಲ್ಲಿ ಸಂಚಾರವಾಣಿ ತಂದಿದ್ದರು. ಅದರ ಬಗ್ಗೆ ಭಾಜಪದ ನಗರಸೇವಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ರಂಪಾಟ ಆರಂಭವಾಯಿತು. ಮಹಾಪೌರ ಶೈಲಿ ಒಬೆರಾಯ್ ಅಧ್ಯಕ್ಷ ಸ್ಥಾನದಲ್ಲಿರುವಾಗ ಭಾಜಪದ ನಗರ ಸೇವಕರು ಅವರ ಬಳಿ ತಲುಪಿದರು ಮತ್ತು ಮತ ಪೆಟ್ಟಿಗೆಯನ್ನು ತಳ್ಳಿದರು. ಇದರ ನಂತರ ಆಮ್ ಆದ್ಮಿ ಪಕ್ಷ ಮತ್ತು ಭಾಜಪ ಇವರಿಬ್ಬರ ಪಕ್ಷದ ನಗರಸೇವಕರಲ್ಲಿ ಘರ್ಷಣೆ ಆರಂಭವಾಯಿತು. ನಗರ ಸೇವಕಿಯರು ಕೂಡ ಒಬ್ಬರಿಗೊಬ್ಬರು ಹೊಡೆದಾಡಿಕೊಂಡರು.

ಸಂಪಾದಕರ ನಿಲುವು

ಇಲ್ಲಿಯವರೆಗೆ ಸಂಸದ ಮತ್ತು ರಾಜ್ಯದ ವಿಧಾನಸಭೆಗಳಲ್ಲಿ ಈ ರೀತಿಯ ಘಟನೆಯಲ್ಲಿ ಹೆಚ್ಚು ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿತ್ತು ಮತ್ತು ಈಗ ಅದರ ಬಿಸಿ ಮಹಾನಗರ ಪಾಲಿಕೆಯಲ್ಲಿ ತಲುಪಿದ್ದು ನಾಳೆ ಇದು ಗ್ರಾಮ ಪಂಚಾಯಿತಿಗೆ ಕೂಡ ತಟ್ಟುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿ ಚಿಂತಾಜನಕವಾಗಿರುವುದು ಸ್ಪಷ್ಟವಾಗುತ್ತದೆ !