ನಾನು ಗೋಮಾಂಸ ತಿನ್ನುವುದರ ಬಗ್ಗೆ ಭಾಜಪಗೆ ಆಕ್ಷೇಪವಿಲ್ಲ !

  • ಮೇಘಾಲಯದ ಭಾಜಪದ ಪ್ರದೇಶಾಧ್ಯಕ್ಷ ಅರ್ನೆಸ್ಟ್ ಮಾವರಿ ಇವರ ಹೇಳಿಕೆ

  • ಭಾಜಪದಿಂದ ಗೋಮಾಂಸ ನಿಷೇಧಿಸದಿರುವುದು ಬಹಿರಂಗ !

ಶಿಲಾಂಗ್ (ಮೇಘಾಲಯ) – ನಾನು ಭಾಜಪದಲ್ಲಿದ್ದು ಗೋಮಾಂಸ ತಿನ್ನುತ್ತೇನೆ; ಆದರೆ ನನ್ನ ಪಕ್ಷ ಎಂದರೆ ಭಾಜಪ ಇದರ ಬಗ್ಗೆ ಯಾವುದೇ ಆಕ್ಷೇಪ ಮಾಡಿಲ್ಲ, ಎಂದು ಮೇಘಾಲಯದ ಭಾಜಪದ ಪ್ರದೇಶಾಧ್ಯಕ್ಷ ಅರ್ನೆಸ್ಟ್ ಮಾವರಿ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು. ಕೇಸರಿ ಪಕ್ಷ ಇರುವ ಭಾಜಪದಿಂದ ಗೋಮಾಂಸ ತಿನ್ನುವುದರ ಬಗ್ಗೆ ಎಲ್ಲಿಯೂ ನಿಷೇಧ ಹೇರಿಲ್ಲ, ಎಂದು ಕೂಡ ಅವರು ಸ್ಪಷ್ಟಪಡಿಸಿದರು.

ಮಾವರಿ ಮಾತು ಮುಂದುವರಿಸಿ, ಕೇಂದ್ರದಲ್ಲಿ ಭಾಜಪದ ಸರಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಚರ್ಚಗಳ ಮೇಲೆ ದಾಳಿ ನಡೆದಿಲ್ಲ. ಮೇಘಾಲಯದಲ್ಲಿ ಮುಖ್ಯವಾಗಿ ಕ್ರೈಸ್ತ ಪಂಥದ ಪಾಲನೆ ಮಾಡುವ ನಾಗರೀಕರು ಈಗ ಗೋಮಾಂಸ ನಿಷೇಧ, ಸಮಾನ ನಾಗರೀಕ ಕಾನೂನು ಮುಂತಾದರ ಆಧಾರದಲ್ಲಿ ಭಾಜಪಕ್ಕೆ ಬೆಂಬಲ ನೀಡಲು ಸಿದ್ದರಿದ್ದಾರೆ. ಈ ಸಲದ ಚುನಾವಣೆಯಲ್ಲಿ ಭಾಜಪದಿಂದ ರಾಜ್ಯದಲ್ಲಿನ ಎಲ್ಲಾ ೬೦ ಸ್ಥಾನದಲ್ಲಿ ಅಭ್ಯರ್ಥಿ ಸ್ಪರ್ಧಿಸುವರು ಮತ್ತು ಪಕ್ಷಕ್ಕೆ ಯಶಸ್ಸು ದೊರೆಯುವುದು ಎಂದು ಹೇಳಿದರು.