ಹರಿಯಾಣದಲ್ಲಿ ಕಾರಿನಲ್ಲೇ 2 ಮುಸಲ್ಮಾನರನ್ನು ಜೀವಂತ ಸುಟ್ಟರು

ಮೃತರ ಕುಟುಂಬದವರಿಂದ ಪೊಲೀಸರು ಮತ್ತು ಬಜರಂಗ ದಳದವರ ಮೇಲೆ ಆರೋಪ

ರೇವಡಿ (ಹರಿಯಾಣಾ) – ಹರಿಯಾಣದ ಭಿವಾನಿಯ ಲೊಹಾರೂ ನಗರದಲ್ಲಿ ಬೊಲೆರೋ ವಾಹನದಲ್ಲಿ ಜುನೈದ (ವಯಸ್ಸು 35 ವರ್ಷ) ಮತ್ತು ನಸೀರ( ವಯಸ್ಸು 28 ವರ್ಷ) ಇವರನ್ನು ಜೀವಂತ ಸುಟ್ಟಿರುವ ಘಟನೆ ಬೆಳಕಿಗೆ ಬಂದನಂತರ ವಿವಾದ ಪ್ರಾರಂಭವಾಗಿದೆ. ಜುನೈದ ಮತ್ತು ನಸೀರ ಇವರಿಬ್ಬರೂ ಹರಿಯಾಣಾ ಗಡಿಯಲ್ಲಿರುವ ರಾಜಸ್ಥಾನದ ಭರಪುರ ಜಿಲ್ಲೆಯ ಘಾಟಮಿಕಾ ಗ್ರಾಮದ ನಿವಾಸಿಯಾಗಿದ್ದಾರು.

ಮೃತರ ಕುಟುಂಬದವರು, ಹರಿಯಾಣದ ಫಿರೋಜಪುರ ಝಿರಕಾದ `ಕ್ರೈಮ್ ಇನ್ವೆಸ್ಟಿಗೇಶನ ಏಜನ್ಸಿ’ (‘ಸಿಐಎ’ನ) ಪೊಲೀಸ ದಳವು ಜುನೈದ ಮತ್ತು ನಸೀರ ಅವರ ಬೊಲೆರೊ ವಾಹನವನ್ನು ಹಿಡಿದಿದ್ದರು. ತದನಂತರ ಅವರನ್ನು ಗಾಯಗೊಂಡ ಅವಸ್ಥೆಯಲ್ಲಿ ಬಜರಂಗ ದಳದ ಕಾರ್ಯಕರ್ತರಿಗೆ ಒಪ್ಪಿಸಿದರು. ಅವರನ್ನು ಬಜರಂಗ ದಳದ ಜನರು ಗೋ ಕಳ್ಳಸಾಗಾಣಿಕೆಯ ಸಂದೇಹದಿಂದ ಅಮಾನುಷವಾಗಿ ಹಲ್ಲೆ ಮಾಡಿದರು. ತದನಂತರ ಅವರಿಗೆ ಬೊಲೆರೊದೊಂದಿಗೆ ಜೀವಂತವಾಗಿ ಸುಟ್ಟರು. ಸಂಪೂರ್ಣ ಘಟನೆಯ ಸಮಯದಲ್ಲಿ ಸಿ.ಐ.ಎ. ತಂಡ ಬಜರಂಗ ದಳದೊಂದಿಗೆ ಇತ್ತು. ಬಜರಂಗ ದಳದ ಸದಸ್ಯ ಮೊನು ಮಾನೆಸರ, ರಿಂಕೂ ಸೈನಿ ಫಿರೋಜಪುರ ಝಿರಕಾ ಮತ್ತು ಇತರ 7-8 ಜನರು ಇಬ್ಬರನ್ನೂ ಜೀವಂತ ಸುಟ್ಟರು ಎಂದು ಆರೋಪಿಸಿದ್ದಾರೆ.

ಆರೋಪವನ್ನು ತಳ್ಳಿ ಹಾಕಿದ ಪೊಲೀಸರು

ಫಿರೋಜಪುರ ಝಿರಕಾ ಸಿ.ಐ.ಎ. ಉಸ್ತುವಾರಿ ವೀರೇಂದ್ರ ಸಿಂಹ ಇವರು ಮಾತನಾಡುತ್ತಾ, ಈ ಪ್ರಕರಣದೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರು ಯಾವುದೇ ಆರೋಪಿಯನ್ನು ಬಂಧಿಸಿಲ್ಲ, ಬಜರಂಗ ದಳದ ವಶಕ್ಕೆ ಕೊಟ್ಟಿಲ್ಲ ಎಂದು ಹೇಳಿದರು.

ಈ ಘಟನೆಯೊಂದಿಗೆ ನನ್ನ ಸಂಬಂಧವಿಲ್ಲ – ಮೊನೂ ಮಾನೆಸರ ಇವರ ಸ್ಪಷ್ಟೀಕರಣ

ಈ ಪ್ರಕರಣದಲ್ಲಿ ಹೆಸರು ಕೇಳಿದ ಬಳಿಕ ಮೊನೂ ಮಾನೆಸರ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಅವನು ಹರಿಯಾಣದ ಗುರುಗ್ರಾಮ ಜಿಲ್ಲೆಯ ಮಾನೆಸರ ನಿವಾಸಿಯಾಗಿದ್ದಾನೆ. ಅವನು ಹರಿಯಾಣಾ ಬಜರಂಗ ದಳದ ಗೋಸಂರಕ್ಷಣೆಯ ಮುಖಂಡನಾಗಿದ್ದಾನೆ. ಅವನು `ಭಿವಾನಿಯ ಘಟನೆಯೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನನಗೆ ಬಲವಂತವಾಗಿ ಸಿಲುಕಿಸಲಾಗುತ್ತಿದೆ. ಘಟನೆಯ ಸಮಯದಲ್ಲಿ ನಾನು ಒಂದು ಹೊಟೆಲನಲ್ಲಿ ಇದ್ದೆನು’ ಎಂದು ಮೋನು ಒಂದು ವಿಡಿಯೋ ಪ್ರಸಾರ ಮಾಡಿ ಹೇಳಿದ್ದಾನೆ.