2019 ರಿಂದ 2021 ರ ಕಾಲಾವಧಿಯಲ್ಲಿ 1 ಲಕ್ಷ 12 ಸಾವಿರ ಕಾರ್ಮಿಕರ ಆತ್ಮಹತ್ಯೆ !

ನವ ದೆಹಲಿ – ರಾಷ್ಟ್ರೀಯ ಅಪರಾಧ ನೊಂದಣಿ ವರದಿಯನ್ವಯ ಕೇಂದ್ರೀಯ ಕಾರ್ಮಿಕ ಮಂತ್ರಿ ಭೂಪೇಂದ್ರ ಯಾದವ ಇವರು ಲೋಕಸಭೆಯಲ್ಲಿ ಮಾಹಿತಿ ನೀಡುವಾಗ, ‘2019 ರಿಂದ 2021 ವರೆಗೆ ಈ 3 ವರ್ಷಗಳಲ್ಲಿ ದಿನಗೂಲಿ ಮಾಡುವ ಒಟ್ಟು 1 ಲಕ್ಷ 12 ಸಾವಿರ ಕಾರ್ಮಿಕರು ಆತ್ಮಹತ್ಯೆಯನ್ನು ಮಾಡಿಕೊಂಡರು. ಇದೇ ಕಾಲಾವಧಿಯಲ್ಲಿ 66 ಸಾವಿರ 912 ಗೃಹಿಣಿಯರು, 53 ಸಾವಿರ 661 ಸ್ವ ಉದ್ಯೋಗ ಮಾಡುವ ಜನರು, 43 ಸಾವಿರ 420 ಸಂಬಳ ಪಡೆಯುವ ನೌಕರರು, 43 ಸಾವಿರ 385 ನಿರುದ್ಯೋಗಿಗಳು, 35 ಸಾವಿರ 950 ವಿದ್ಯಾರ್ಥಿಗಳು ಮತ್ತು 31 ಸಾವಿರ 839 ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವರ್ಗದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.’ ದೇಶದೊಂದಿಗೆ ಜಗತ್ತಿನಾದ್ಯಂತ ಈ 3 ವರ್ಷಗಳಲ್ಲಿ ಕೊರೊನಾ ಸಂಕಟವಿತ್ತು.

ಕೇಂದ್ರ ಸಚಿವ ಯಾದವ ಇವರು ಈ ಮಾಹಿತಿಯನ್ನು ನೀಡುವಾಗ ‘ಅಸಂಘಟಿತ ನೌಕರರು ಸಾಮಾಜಿಕ ಸುರಕ್ಷೆ ಅಧಿನಿಯಮ, 2008′ ರನುಸಾರ ಸರಕಾರ ಅಸಂಘಟಿತ ಕ್ಷೇತ್ರದ ನೌಕರರಿಗೆ ಸಾಮಾಜಿಕ ಸುರಕ್ಷೆಯನ್ನು ಒದಗಿಸಲು ಕಟಿಬದ್ಧವಾಗಿದೆ. ಇದರಲ್ಲಿ ದಿನಗೂಲಿ ಕೆಲಸ ಮಾಡುವ ನೌಕರರು ಸೇರಿದ್ದಾರೆ. ಈ ಕಾಯಿದೆಯನ್ವಯ ವಿಮಾ ಸಂರಕ್ಷಣೆ, ಆರೋಗ್ಯಕ್ಕೆ ಸಂಬಂಧಿಸಿದ ಕಲ್ಯಾಣಕಾರಿ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಮಾತೃತ್ವದ ಸಮಯದಲ್ಲಿ ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು, ವೃದ್ಧಾವಸ್ಥೆಯ ಸುರಕ್ಷೆ ಮತ್ತು ಕೇಂದ್ರ ಸರಕಾರದ ಇತರೆ ಅನೇಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿದೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಸ್ವಾತಂತ್ರ್ಯದ 85 ವರ್ಷಗಳಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು ಸಮಾಜಕ್ಕೆ ‘ಜೀವನವನ್ನು ಹೇಗೆ ಜೀವಿಸುವುದು ?’ ಮತ್ತು ಸಾಧನೆಯನ್ನು ಕಲಿಸದೇ ಇರುವುದರ ಪರಿಣಾಮವೇ ಇದಾಗಿದೆ ! ಹಿಂದೂ ರಾಷ್ಟ್ರದಲ್ಲಿ ಒಂದೇ ಒಂದು ಆತ್ಮಹತ್ಯೆಯಾಗದಂತೆ ಪ್ರಯತ್ನಿಸಲಾಗುವುದು !