ಕಾಂಗ್ರೆಸ್ ಮೋಸದ ಇತಿಹಾಸವನ್ನು ಒಳಗೊಂಡಿದೆ ! – ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ಆಗರ್ತಲಾ (ತ್ರಿಪುರಾ) – ಕಾಂಗ್ರೆಸ್ ಮೋಸದ ಇತಿಹಾಸ ಹೊಂದಿದ್ದು, ಅದೀಗ ಇಲ್ಲಿ ಕೋಮುವಾದಿಗಳೊಂದಿಗೆ ಚುನಾವಣೆಯಲ್ಲಿ ಭಾಗವಹಿಸಿದೆ. ಆದ್ದರಿಂದ ಈಗ ಜಾಗರೂಕತೆಯಿಂದಿರುವ ಆವಶ್ಯಕತೆಯಿದೆ. ಕಾಂಗ್ರೆಸ್ ಜನರ ಶ್ರದ್ಧೆಯೊಂದಿಗೆ ಆಟವಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ರಾಮಮಂದಿರವನ್ನು ವಿರೋಧಿಸುತ್ತಿತ್ತು, ರಾಮಸೇತುವನ್ನು ನಷ್ಟಗೊಳಿಸಲು ಇಚ್ಛಿಸುತ್ತಿತ್ತು, ಮಥುರಾದ ಶ್ರೀಕೃಷ್ಣಜನ್ಮ ಭೂಮಿಯನ್ನು ಪ್ರಶ್ನಿಸುತ್ತಿತ್ತು. ಕಲ್ಲಿದ್ದಲು ಹಗರಣಗಳಂತಹ ಅನೇಕ ಹಗರಣಗಳು ಕಾಂಗ್ರೆಸ್ಸಿನ ರಾಜ್ಯಗಳಲ್ಲಿ ನಡೆದಿದೆಯೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ತ್ರಿಪುರಾದ ಬೋರ್ದೊವಾಲಿ ರೋಡ ಪ್ರದೇಶದಲ್ಲಿ ಭಾಜಪ ಅಭ್ಯರ್ಥಿಯ ಪ್ರಸಾರ ಸಭೆಯಲ್ಲಿ ಹೇಳಿದರು.