ಧರ್ಮವನ್ನು ಮರೆಮಾಚಿ 7ನೇ ವಿವಾಹವಾಗುತಿದ್ದ ಅಸ್ಲಂ ಖಾನ್ ನ ಬಂಧನ !

ಬಡ ಹಿಂದೂ ಅಪ್ರಾಪ್ತ ಹುಡುಗಿಯರೊಂದಿಗೆ ವಿವಾಹವಾಗುತ್ತಿದ್ದ !

ರಾಂಚಿ (ಝಾರಖಂಡ) – ತಾನು ಹಿಂದೂ ಪೊಲೀಸ್ ಅಧೀಕ್ಷಕ ಎಂದು ಹೇಳಿಕೊಂಡು ಅಪ್ರಾಪ್ತ ಹಿಂದೂ ಹುಡುಗಿಯರರೊಂದಿಗೆ ವಿವಾಹವಾಗುವ ಮತ್ತು ತದನಂತರ ಹೊರರಾಜ್ಯಗಳಲ್ಲಿ ಅವರನ್ನು ಮಾರಾಟ ಮಾಡುವ ಅಸ್ಲಂಖಾನ ಹೆಸರಿನ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜನರನ್ನು ಮೋಸಗೊಳಿಸಿ ಅವನು ಈ ಮೊದಲು ೬ ಮದುವೆ ಮಾಡಿಕೊಂಡಿದ್ದನು. ಧರ್ಮವನ್ನು ಮರೆಮಾಚಿ ೭ ನೇ ಬಾರಿ ಮದುವೆಯಾಗಲು ಹೋದಾಗ ಅವನ ಬಣ್ಣ ಬಯಲಾಗಿದೆ. ಅಸ್ಲಂ ಖಾನ ತಾನು ಪೊಲೀಸ್ ಅಧೀಕ್ಷಕ ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದನು. ಮತ್ತು ಅವರಿಗೆ ಸಾಲ ಕೊಡಿಸುವ ಆಶ್ವಾಸನೆ ನೀಡಿ ಅಪ್ರಾಪ್ತ ಹುಡುಗಿಯರೊಂದಿಗೆ ವಿವಾಹ ಆಗುತ್ತಿದ್ದನು. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಅಸ್ಲಂ ಖಾನ ಮಾನವ ಕಳ್ಳಸಾಗಾಣಿಕೆಯ ಗುಂಪಿನೊಂದಿಗೆ ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಗುಂಪಿನ ಹೇಳಿಕೆಯ ಮೇರೆಗೆ ಅವನು ವಿಶಿಷ್ಟ ಸಮಾಜದ ಬಡ ಹಿಡಿಗಿಯರೊಂದಿಗೆ ತನ್ನ ಧರ್ಮ ಮತ್ತು ಗುರುತನ್ನು ಮುಚ್ಚಿಟ್ಟು ವಿವಾಹವಾಗುತ್ತಿದ್ದನು. ಬಳಿಕ ಬೇರೆ ರಾಜ್ಯಕ್ಕೆ ಬಾಲಕಿಯರನ್ನು ಮಾರಾಟ ಮಾಡುವತ್ತಿರುವುದು ಕಂಡು ಬಂದಿದೆ.

ಸಂಪಾದಕೀಯ ನಿಲುವು

ಇಂತಹ ಘಟನೆಗಳ ವಿಷಯದಲ್ಲಿ ಕಪಟ ಜಾತ್ಯತೀತವಾದಿಗಳು ಬಾಯಿ ಬಿಡುವುದಿಲ್ಲ !