ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಪರ್ಫ್ಯೂಮ್ ಬಾಂಬ್ ವಶ !

ಮುಚ್ಚಳ ತೆರೆಯುತ್ತಲೇ ಸ್ಪೋಟ !

(ಪರ್ಫ್ಯೂಮ್ ಎಂದರೆ ಸುಗಂಧ ದ್ರವ್ಯ)

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದಲ್ಲಿ ಬಂಧಿಸಿರುವ ಆರಿಫ್ ಈ ಭಯೋತ್ಪಾದಕನಿಂದ ಪರ್ಫ್ಯೂಮ್ ಬಾಂಬ್ ವಶಪಡಿಸಿಕೊಳ್ಳಲಾಗಿ. ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ. ವಿಶೇಷ ಎಂದರೆ ಕಾಶ್ಮೀರದಲ್ಲಿ ಭದ್ರತಾ ಪಡೆಯವರಿಗೆ ಇದೇ ಮೊದಲ ಬಾರಿಗೆ ಈ ರೀತಿಯ ಪರ್ಫ್ಯೂಮ್ ಬಾಂಬ್ ವಶಪಡಿಸಿಕೊಂಡಿದ್ದಾರೆ.

ಜನವರಿ ೨೧ ರಂದು ಜಮ್ಮು-ಕಾಶ್ಮೀರದ ನರವಾಲದಲ್ಲಿ ೨ ಬಾಂಬ್ ಸ್ಪೋಟಗೊಂಡು 9 ಜನರು ಗಾಯಗೊಂಡಿದ್ದರು. ಸ್ಫೋಟ ಮಾಡುವ ಆರೀಫನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಗೆ ಆದೇಶ ನೀಡುವ ಪಾಕಿಸ್ತಾನದಲ್ಲಿನ ಲಷ್ಕರೇ-ಏ-ತೊಯ್ಬಾದ ಭಯೋತ್ಪಾದಕರ ಸಂಪರ್ಕದಲ್ಲಿ ಇದ್ದನು. ಅವನು ರಿಯಸಿಯಲ್ಲಿಯ ನಿವಾಸಿಯಾಗಿದ್ದನು. ಆರಿಫ್ ಇವನು ಸರಕಾರಿ ಶಿಕ್ಷಕನಾಗಿದ್ದಾನೆ. ಅವನು ಕಳೆದ ೩ ವರ್ಷಗಳಿಂದ ಲಷ್ಕರ್-ಎ-ತೊಯ್ಬಾದ ಮಧ್ಯವರ್ತಿಗಳ ಸಂಪರ್ಕದಲ್ಲಿ ಇದ್ದನು.