ಮಣಿಪುರದಲ್ಲಿ ಭಾಜಪದ ಮುಖಂಡನ ಗುಂಡು ಹಾರಿಸಿ ಹತ್ಯೆ

ಲೈಶರಾಮ ರಾಮೇಶ್ವರ ಸಿಂಹ

ಇಂಪಾಲ (ಮಣಿಪುರ) – ಮಣಿಪುರದಲ್ಲಿನ ಥೌಬಲ್ ಜಿಲ್ಲೆಯಲ್ಲಿ ಜನವರಿ ೨೪ ರಂದು ಭಾಜಪದ ರಾಜ್ಯ ಯುನಿಟಿಯ ಮಾಜಿ ಸೈನಿಕ ಸೇಲ್ ನ ಸಂಯೋಜಕ ಲೈಶರಾಮ ರಾಮೇಶ್ವರ ಸಿಂಹ ಇವರನ್ನು ಅವರ ನಿವಾಸ ಸ್ಥಳದ ಪ್ರವೇಶ ದ್ವಾರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ನಂತರ ಮುಖ್ಯ ಆರೋಪಿ ಪೊಲೀಸರೆದುರು ಸೆರೆಂಡರ್ ಆದನು. ಈ ಪ್ರಕರಣದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತೌಬಲ್ ಪೊಲೀಸ ಅಧಿಕಾರಿ ಹಾಬಿಜಮ ಜೋಗೇಶಚಂದ್ರ ಇವರು, ಬೆಳಿಗ್ಗೆ ೧೧ ಗಂಟೆಗೆ ನೋಂದಣಿ ಸಂಖ್ಯೆ ಇಲ್ಲದಿರುವ ಕಾರ್ ನಿಂದ ಇಬ್ಬರು ಬಂದಿದ್ದರು ಮತ್ತು ಅವರು ಸಿಂಹ ಇವರ ಮೇಲೆ ಗುಂಡಿನ ದಾಳಿ ನಡೆಸಿದರು. ಸಿಂಹ ಇವರ ಎದೆಗೆ ಗುಂಡು ತಾಗಿದ್ದರಿಂದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ವಾಹನ ಚಾಲಕ ನೌರೇಮ್ ರಿಕಿ ಪಾಯಿಂಟಿಂಗ್ ಸಿಂಹ ಮತ್ತು ಗುಂಡಿನ ದಾಳಿ ಮಾಡಿದ ಆಯೇಕಪಮ ಕೇಶೋರಜಿತ ಇವರನ್ನು ಬಂಧಿಸಿದರು. ಕೇಶೋರಜಿತನಿಂದ ಒಂದು ಅನುಮತಿ ಇಲ್ಲದ ಪಿಸ್ತುಲ್, ೨ ಮ್ಯಾಗಝಿನ್ ಮತ್ತು ೯ ಕಾಟ್ರೇಜ್ ವಶ ಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಹತ್ಯೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.