ಶಾಹರುಖ್ ಜೊತೆ ವಿವಾಹ ಮಾಡಿಕೊಂಡಿರುವ ಟ್ವಿಂಕಲ್ ಯಾದವ್ ಇಸ್ಲಾಂ ಸ್ವೀಕರಿಸದೆ ಇದ್ದರಿಂದ ಹತ್ಯೆ !

ಫರಿದಾಬಾದ್ – ಇಲ್ಲಿಯ ಟ್ವಿಂಕಲ್ ಯಾದವ್ ಎಂಬ ಯುವತಿಯು ಶಾಹರುಖ್ ಎಂಬ ಮುಸಲ್ಮಾನ ಯುವಕನ ಜೊತೆ ವಿವಾಹ ಮಾಡಿಕೊಂಡಿದ್ದಳು. ನಂತರ ಹಿಂದೂ ಯುವತಿಗೆ ಮಾಂಸ ತಿನ್ನಲು ಮತ್ತು ಇಸ್ಲಾಂ ಸ್ವೀಕರಿಸಲು ಒತ್ತಡ ಹೇರುತ್ತಿದ್ದರು. ಟ್ವಿಂಕಲ್ ಇವಳು ಇಸ್ಲಾಂ ಸ್ವೀಕರಿಸಲು ನಿರಾಕರಿಸಿದ್ದರಿಂದ ಆಕೆಯ ಹತ್ಯೆ ಮಾಡಲಾಯಿತು, ಎಂದು ಮೃತ ಯುವತಿಯ ಕುಟುಂಬದವರು ಆರೋಪಿಸಿದ್ದಾರೆ.

೨೪ ವರ್ಷದ ಟ್ವಿಂಕಲ್ ಯಾದವ್ ಮೂಲತಃ ಉತ್ತರ ಪ್ರದೇಶದ ಆಮೆಠಿಯವಳಾಗಿದ್ದಾಳೆ. ಟ್ವಿಂಕಲ್ ೩ ವರ್ಷಗಳ ಹಿಂದೆ ಮೇವಾತನ ಶಾಹರುಖ್ ನ ಜೊತೆಗೆ ತನ್ನ ಪರಿವಾರದ ಇಚ್ಛೆಯ ವಿರುದ್ಧ ವಿವಾಹ ಮಾಡಿಕೊಂಡಿದ್ದಳು. ‘ಶಾಹರುಖ್ ಮತ್ತು ಅವನ ಕುಟುಂಬದವರು ಟ್ವಿಂಕಲ್ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದರು. ಶಾಹರುಖ್ ತಾಯಿ ಟ್ವಿಂಕಲ್ಅನ್ನು ‘ಹಿಂದೂ’ ಎಂದು ಕರೆಯುತ್ತಾ ಆಕೆಯ ಕೈಯಿಂದ ನೀರು ಕೂಡ ಕುಡಿಯುತ್ತಿರಲಿಲ್ಲ ಮತ್ತು ಮತಾಂತರಕ್ಕಾಗಿ ಆಕೆಗೆ ಕಿರುಕುಳ ನೀಡುತ್ತಿದ್ದಳು. ಜನವರಿ ೨೦ ರಂದು ಶಾಹರುಖ್ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿರುವದರಿಂದ ಟ್ವಿಂಕಲ್ ಮೃತಪಟ್ಟಳು, ಎಂದು ಟ್ವಿಂಕಲ್ ನ ಸಹೋದರ ಸುಮಿತ ಯಾದವ ಇವನು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನನ ಜೊತೆ ವಿವಾಹ ಮಾಡಿಕೊಳ್ಳುವುದು; ಎಂದರೆ ತಮ್ಮ ಜೀವನ ಮುಗಿಸುವುದು, ಇದು ಹಿಂದೂ ಯುವತಿಯರ ಅರಿವಿಗೆ ಬಂದ ದಿನವೇ ಸುದಿನ !