ಗುಜರಾತನಲ್ಲಿ ಜೈನ ಧರ್ಮದ ವಜ್ರದ ವ್ಯಾಪಾರಿಯ ೮ ವರ್ಷದ ಹುಡುಗಿಯಿಂದ ಸನ್ಯಾಸ ದೀಕ್ಷೆ !

ಸೂರತ (ಗುಜರಾತ) – ವಜ್ರದ ವ್ಯಾಪಾರಿಯ ಕೇವಲ ೮ ವರ್ಷದ ಹುಡುಗಿ ದೆವಾಂಶಿಯು ಜೈನ ಧರ್ಮದ ದೀಕ್ಷೆ ಪಡೆದಳು. ಆಕೆ ವೈಭವದ ಜೀವನ ಬಿಟ್ಟು ಬಿಕ್ಷುಕಿ ಆಗುವ ನಿರ್ಣಯ ತೆಗೆದುಕೊಂಡಳು. ದೆವಾಂಶಿ ದೊಡ್ಡವಳಾದ ನಂತರ ಕೋಟ್ಯಂತರ ರೂಪಾಯಿಯ ವಜ್ರದ ಕಂಪನಿಯ ಒಡತಿ ಆಗಬಹುದಾಗಿತ್ತು; ಆದರೆ ಆಕೆ ಎಲ್ಲಾ ವೈಭೋಗ ಬಿಟ್ಟು ಸನ್ಯಾಸ ಜೀವನ ಸ್ವೀಕರಿಸಿದಳು. ವಜ್ರದ ವ್ಯಾಪಾರಿ ಧನೇಶ ಮತ್ತು ಆಮಿ ಸಂಘವಿ ದಂಪತಿಗಳ ಹಿರಿಯ ಕನ್ಯೆ ಆಗಿದ್ದಾಳೆ. ದೆವಾಂಶಿಯ ತಂದೆ ‘ಸಂಘವಿ ಅಂಡ್ ಸನ್ಸ್’ ಈ ಕಂಪನಿಯ ಮಾಲೀಕರಾಗಿದ್ದು ಕಳೆದ ೩೦ ವರ್ಷಗಳಿಂದ ಅವರ ವಜ್ರ ಕೆತ್ತನೆ ಮತ್ತು ಅದನ್ನು ರಫ್ತು ಮಾಡುವ ವ್ಯವಸಾಯ ಮಾಡುತ್ತಿದ್ದಾರೆ. ಹಿಂದಿನಿಂದಲೂ ಅವರ ಮನೆತನ ಧಾರ್ಮಿಕವಾಗಿದೆ. ೮ ವರ್ಷದ ದೆವಾಂಶಿಗೆ ಹಿಂದಿ, ಇಂಗ್ಲೀಷ್ ಸಹಿತ ಅನೇಕ ಭಾಷೆ ತಿಳಿದಿದೆ. ಅಷ್ಟೇ ಅಲ್ಲದೆ ದೆವಾಂಶಿ ಸಂಗೀತ, ನೃತ್ಯ ಮತ್ತು ಯೋಗದಲ್ಲಿಯೂ ಕೂಡ ಪ್ರಾವಿಣ್ಯತೆ ಪಡೆದಿದ್ದಾಳೆ. ದೆವಾಂಶಿಗೆ ಬಾಲ್ಯದಿಂದಲೇ ಆಧ್ಯಾತ್ಮದ ಕಡೆಗೆ ಸೆಳೆತ ಇತ್ತು. ಇಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಆಚಾರ್ಯ ಕೀರ್ತಿಯಶಸೂರಿ ಇವರು ದೆವಾಂಶಿಗೆ ಸನ್ಯಾಸ ದೀಕ್ಷೆ ನೀಡಿದರು ಎಂದು ಕುಟುಂಬದವರು ಹೇಳಿದರು.

ಜೈನ ಧರ್ಮದಲ್ಲಿ ದೀಕ್ಷೆ ಎಂದರೆ ಏನು !

ಜೈನ ಧರ್ಮದಲ್ಲಿ ದೀಕ್ಷೆ ಪಡೆಯುವುದು ಎಂದರೆ ಎಲ್ಲಾ ಭೌತಿಕ ಸುಖ ಸೌಲಭ್ಯಗಳನ್ನು ತ್ಯಾಗ ಮಾಡುವುದಾಗಿದೆ. ದೀಕ್ಷೆ ಪಡೆಯುವವರು ತಪಸ್ವಿಯ ಜೀವನ ನಡೆಸ ಬೇಕಾಗುತ್ತದೆ. ಜೈನ ಧರ್ಮದಲ್ಲಿ ಇದಕ್ಕೆ ‘ಚರಿತ್ರ’ ಅಥವಾ ‘ಮಹಾನಿಬೀಶ್ರಮಣ’ ಎಂದು ಕೂಡ ಹೇಳುತ್ತಾರೆ. ದೀಕ್ಷೆ ಪಡೆದ ನಂತರ ಅಹಿಂಸ, ಸತ್ಯ ವಚನ, ಬ್ರಹ್ಮಚರ್ಯ ಪಾಲನೆ, ಅಸ್ತೆಯ ಎಂದರೆ ಆಸೆ ಪಡದಿರುವುದು , ಅಪರಿಗ್ರಹ ಎಂದರೆ ಅವಶ್ಯಕತೆ ಇರುವಷ್ಟು ಸಂಗ್ರಹಿಸುವುದು ಇವುಗಳ ಪಾಲನೆ ಮಾಡಬೇಕಾಗುತ್ತದೆ. ಭಿಕ್ಷೆ ಕೇಳಿ ಜೀವನ ನಡೆಸಬೇಕಾಗುತ್ತದೆ. ನೂಲಿನ ಬಟ್ಟೆ ಧರಿಸಬೇಕಾಗುತ್ತದೆ. ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ದೀಕ್ಷೆ ಪಡೆಯುವಾಗ ತಮ್ಮ ತಲೆಯ ಮೇಲಿನ ಕೂದಲನ್ನು ತಮ್ಮ ಕೈಯಿಂದ ಕಿತ್ತಿ ತೆಗೆಯಬೇಕಾಗುತ್ತದೆ, ಅದರ ನಂತರ ದೀಕ್ಷೆ ಪಡೆಯುವ ಕ್ರಮ ಪೂರ್ಣವಾಗುತ್ತದೆ.

ಮಕ್ಕಳು ಏಕೆ ದೀಕ್ಷೆ ಪಡೆಯುತ್ತಾರೆ !

೧. ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ ಹುಡುಗರು ಮತ್ತು ಯುವಕರು ಜೈನ ಧರ್ಮದ ದೀಕ್ಷೆ ಪಡೆಯುತ್ತಿದ್ದಾರೆ. ಭೌತಿಕ ಸುಖ ಸೌಲಭ್ಯ ಅವರಿಗೆ ಆನಂದ ನೀಡಲು ಸಾಧ್ಯವಾಗಿಲ್ಲ; ಆದ್ದರಿಂದ ಸಾಮಾನ್ಯ ಜೀವನ ನಡೆಸುವುದಕ್ಕೆ ಮತ್ತು ತಮ್ಮನ್ನು ದೇವರ ಉಪಾಸನೆಗಾಗಿ ಅರ್ಪಿಸಿಕೊಳ್ಳುವ ನಿರ್ಣಯವನ್ನು ಮಕ್ಕಳು ತೆಗೆದುಕೊಳ್ಳುತ್ತಿದ್ದಾರೆ.

೨. ಜೈನ ಮುನಿಗಳ ಕಠಿಣ ಜೀವನ ಶೈಲಿ ಅವರಿಗೆ ವಾಸ್ತವ ಜೀವನದ ಸಾರ ಅನಿಸುತ್ತದೆ.

೩. ಮನೆಯಲ್ಲಿನ ಪೋಷಕರ ಸಂಬಂಧ ಧರ್ಮದ ಜೊತೆಗೆ ದೃಢವಾಗಿ ಇರುವುದರಿಂದ ಅವರು ದೀಕ್ಷೆಯ ದಿಕ್ಕಿನತ್ತ ಸಾಗುತ್ತಾರೆ.

ಸಂಪಾದಕೀಯ ನಿಲುವು

ಜೈನರ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಪಡೆಯುತ್ತಾರೆ, ಇದರ ಮುಖ್ಯ ಕಾರಣವೆಂದರೆ ಪೋಷಕರಿಂದ ಅವರಿಗೆ ನೀಡಿದ ಧಾರ್ಮಿಕ ಸಂಸ್ಕಾರವೇ ಆಗಿದೆ ! ಹಿಂದೂ ಪೋಷಕರು ಮಾತ್ರ ಅವರ ಮಕ್ಕಳಿಗೆ ಸಾಧನೆ ಕಲಿಸುತ್ತಿಲ್ಲ. ಆದ್ದರಿಂದ ಮಕ್ಕಳು ನಿಜವಾದ ಆನಂದದಿಂದ ವಂಚಿತರಾಗುತ್ತಾರೆ !