ದೆಹಲಿಯ ವಿಧಾನಸಭೆಯಲ್ಲಿ ‘ಆಪ’ ಶಾಸಕರಿಂದ ನೋಟುಗಳ ಪ್ರದರ್ಶನ !

  • ಹಣ ಪಡೆದು ಕೆಲಸ ನೀಡುತ್ತಾರೆಂದು ಆರೋಪ !

  • ಮೌನವಾಗಿರಲು ಲಂಚ ನೀಡಲಾಗಿರುವ ದಾವೆ !

ನವದೆಹಲಿ – ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷದ ಶಾಸಕ ಮೋಹಿಂದರ್ ಗೋಯಲ್ ಇವರು ವಿಧಾನಸಭೆಯಲ್ಲಿ ನೋಟಿನ ಕಂತೆ ತೋರಿಸಿ, ಅವರಿಗೆ ಲಂಚ ನೀಡುವ ಪ್ರಯತ್ನ ಮಾಡಲಾಗಿತ್ತು. ಇದರ ಬಗ್ಗೆ ಅವರು ಉಪರಾಜ್ಯಪಾಲರ ಬಳಿ ಅಂಶವನ್ನು ಮಂಡಿಸಿದ್ದಾರೆ ಎಂದು ಹೇಳಿದರು.

೧. ಗೋಯಲ್ ಇವರ ಕೈಚೀಲದಲ್ಲಿ ೧೫ ಲಕ್ಷ ರೂಪಾಯ ನೋಟಿನ ಕಂತೆಯೊಂದಿಗೆ ವಿಧಾನಸಭೆಗೆ ಬಂದಿದ್ದರು. ವಿಧಾನಸಭೆಯ ಭಾಷಣದ ಸಮಯದಲ್ಲಿ ನೋಟುಗಳನ್ನು ತೆಗೆದು, ”ಇದು ಟೋಕನ್ ಮನಿ” (ಮುಂಗಡ ಹಣ) ಇದೆ, ಇದು ನನಗೆ ಲಂಚ ಎಂದು ನೀಡಲಾಗಿದೆ. ನಾನು ಮುಖ್ಯ ಸಚಿವ ಮತ್ತು ಉಪರಾಜಪಾಲರಿಗೆ ಹಣದ ಬದಲು ನೌಕರಿ ನೀಡುವುದರ ಬಗ್ಗೆ ದೂರು ನೀಡಿದ್ದೇನೆ. ಈ ಅಪಾಯ ಎದುರಿಸಿ ನಾನು ಕೆಲಸ ಮಾಡುತ್ತಿದ್ದೇನೆ. ಈ ಜನರು ಎಷ್ಟು ಅಪಾಯಕಾರಿ ಇದ್ದಾರೆ ಎಂದರೆ ನನ್ನ ಜೊತೆಗೆ ಏನು ಬೇಕಾದರೂ ಘಟಿಸಬಹುದು. ಧ್ವನಿಯೆತ್ತಬಾರದೆಂದು ನನಗೆ ಹಣದ ರೂಪದಲ್ಲಿ ಲಂಚ ನೀಡಲಾಗಿದೆ.” ಎಂದು ಅವರು ಹೇಳಿದರು.

೨. ಶಾಸಕ ಗೋಯಲ್ ಇವರು ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿನ ನೇಮಕಾತಿಯ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದರು. ಅವರು, ಅಲ್ಲಿಯ ನಿಯಮದ ಪ್ರಕಾರ ಯಾವ ಜನರಿಗೆ ನೌಕರಿ ನೀಡಬೇಕು, ಅವರಿಗೆ ನೀಡಲಾಗುತ್ತಿಲ್ಲ. ಅಲ್ಲಿ ನರ್ಸಿಂಗ್ ಮತ್ತು ಇತರ ಸ್ಥಾನಗಳಿಗಾಗಿ ಟೆಂಡರ್ ಕರೆಯಲಾಗಿದೆ. ಸರಕಾರಿ ನಿಯಮದ ಪ್ರಕಾರ ಶೇಕಡ ೮೦ ರಷ್ಟು ಹಳೆಯ ಕಾರ್ಮಿಕರ ನೇಮಕ ಇರಬೇಕು; ಆದರೆ ಹೀಗೆ ನಡೆಯುವುದಿಲ್ಲ. ನೌಕರಿ ನೀಡುವ ಕಾರ್ಮಿಕರ ವೇತನದಿಂದ ದಲ್ಲಾಳಿಗಳು ತಮ್ಮ ಪಾಲು ಪಡೆಯುತ್ತಾರೆ. ಮಾಫಿಯಾ ಮತ್ತು ಗುತ್ತಿಗೆದಾರರ ಜೊತೆ ಹೊಂದಾಣಿಕೆಯ ಮೂಲಕ ಹಣ ಪಡೆದು ನೌಕರಿ ನೀಡಲಾಗುತ್ತದೆ. ಅದರ ದೂರು ಎಲ್ಲಾ ಕಡೆ ನೀಡಲಾಗಿದೆ; ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿ ಸತ್ಯವನ್ನು ಜನರೆದರು ಬಹಿರಂಗಪಡಿಸಬೇಕು !