ಶಂಕರಾಚಾರ್ಯ ಮಾಧವ ಆಶ್ರಮ ದೇವಸ್ಥಾನದಲ್ಲಿನ ಶಿವಲಿಂಗ ಬಗ್ನ !
ಡೆಹರಾಡೂನ್ (ಉತ್ತರಖಂಡ) – ಇಲ್ಲಿಯ ಜೋಶಿಮಠದ ಕ್ಷೇತ್ರದಲ್ಲಿ ಭೂಕುಸಿತ ಉಂಟಾಗಿರುವುದರಿಂದ ೬೦೦ ಕುಟುಂಬಗಳನ್ನು ಸ್ಥಳಾಂತರಿತಗೊಳಿಸಲಾಗಿದೆ. ಇಲ್ಲಿನ ಪ್ರಾಚೀನ ಜ್ಯೋತಿರ್ಮಠ ಪರಿಸರದಲ್ಲಿನ ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟ ನಂತರ ಇಲ್ಲಿಯ ಶಂಕರಾಚಾರ್ಯ ಮಾಧವ ಆಶ್ರಮ ದೇವಸ್ಥಾನದ ಶಿವಲಿಂಗದಲ್ಲಿ ಕೂಡ ಬಿರುಕು ಮೂಡಿದೆ. ಜ್ಯೋತಿರ್ಮಠದ ಪ್ರಮುಖ ಬ್ರಹ್ಮಚಾರಿ ಮುಕುಂದಾನಂದ ಇವರು, `ಮಠದ ಪ್ರವೇಶ ದ್ವಾರ, ಲಕ್ಷ್ಮೀನಾರಾಯಣ ದೇವಸ್ಥಾನ ಮತ್ತು ಅದರ ಸಭಾಗೃಹದಲ್ಲಿ ಬಿರುಕು ಕಾಣಿಸಿದೆ.’ ಈ ಪರಿಸರದಲ್ಲಿಯೇ ತೋಟಕಾಚಾರ್ಯ ಗುಹೆ, ತ್ರಿಪುರ ಸುಂದರಿ ರಾಜರಾಜೇಶ್ವರಿ ದೇವಸ್ಥಾನ ಮತ್ತು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಇವರ ಗದ್ದುಗೆ ಇದೆ ಎಂದು ಹೇಳಿದರು.
ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅಭಿಮಕ್ತೇಶ್ವರಾನಂದ ಸರಸ್ವತಿ ಇವರು ಜೋಶಿ ಮಠದಲ್ಲಿನ ಈ ಭೂಕುಸಿತದ ಕುರಿತು ಚಿಂತೆ ವ್ಯಕ್ತಪಡಿಸಿದ್ದಾರೆ. ಶಂಕರಾಚಾರ್ಯ ಇವರು, ಜೋತಿರ್ಮಠ ಇದು ಭೂಕುಸಿತದ ಸಂಕಷ್ಟಕ್ಕೆ ಸಿಲುಕಿದೆ. ಸರಕಾರದಿಂದ ಭೂಕುಸಿತದಿಂದ ಅಪಾಯಕ್ಕೆ ಸಿಲುಕಿರುವವರಿಗೆ ತಕ್ಷಣ ಸಹಾಯ ಮಾಡುವುದರ ಜೊತೆಗೆ ಅವರ ಪುನರ್ವಸತಿಯ ವ್ಯವಸ್ಥೆ ಮಾಡಬೇಕು. ಕಳೆದ ವರ್ಷಗಳಿಂದ ಭೂಕುಸಿತದ ಮುನ್ಸೂಚನೆ ದೊರೆತಿದ್ದರೂ ಆಗಲೇ ಅದರ ಕಡೆಗೆ ಗಮನ ನೀಡಿಲ್ಲ, ಎಂದು ಹೇಳಿದರು.
#WATCH | Uttarakhand: Due to a landslide in the Marwari area of Joshimath, a temple got damaged and fell on top of a residential building. The building was damaged. pic.twitter.com/MwIo34dyav
— ANI UP/Uttarakhand (@ANINewsUP) January 6, 2023
ಭೂಕುಸಿತಕ್ಕೆ ಜವಾಬ್ದಾರ ಆಗಿರುವ ಸುರಂಗದ ಕೆಲಸ ನಿಲ್ಲಿಸಲು ಆದೇಶ ಇದ್ದರೂ ಕೆಲಸ ಮುಂದುವರೆದಿದೆ !
ಜೋಶಿಮಠದ ಪ್ರದೇಶದಲ್ಲಿ ಭೂಕುಸಿತದಿಂದ ೫೬೧ ಮನೆಗಳಿಗೆ ಬಿರುಕು ಬಿಟ್ಟಿದೆ. ಅವರ ಸ್ಥಳಾಂತರ ಮಾಡಲಾಗುವುದು. ಈ ಭೂಕುಸಿತಕ್ಕೆ ಅನೇಕ ಕಾರಣಗಳಿವೆ ಅದರಲ್ಲಿ ಒಂದು ಕಾರಣ ಇಲ್ಲಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ನ ಜಲವಿದ್ಯುತ್ ಪ್ರಕಲ್ಪದ ಸುರಂಗದ ಮತ್ತು `ಚಾರ ಧಾಮ ಆಲ್ ವೆದರ್ ರೋಡ್ ನ(ಹೇಲಂಗ-ಮಾರವಾಡಿ ಬೈಪಾಸ್ ) ಕಾಮಗಾರಿ ನಿಲ್ಲಿಸುವ ಆದೇಶ ನೀಡಿದ್ದರೂ, ಆ ಕಾಮಗಾರಿ ಇನ್ನುವರೆಗೂ ನಿಲ್ಲಿಸಿಲ್ಲ. ದೊಡ್ಡ ದೊಡ್ಡ ಯಂತ್ರಗಳು ನಿರಂತರವಾಗಿ ಬೆಟ್ಟ ಕೊರೆಯುವ ಕೆಲಸ ಮಾಡುತ್ತಿರುತ್ತವೆ. ಇಲ್ಲಿಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಸುಮಾರು ೫೦ ಸಾವಿರ ಜನಸಂಖ್ಯೆ ಇರುವ ಈ ನಗರದಲ್ಲಿ ಭಯದಿಂದ ರಾತ್ರಿಯ ಸಮಯದಲ್ಲಿ ಕೊರೆಯುವ ಚಳಿಯಲ್ಲಿ ಕೂಡ ಜನರು ಮನೆ ಕುಸಿಯುವ ಭಯದಲ್ಲಿ ಹೊರಗೆ ಉಳಿಯುತ್ತಿದ್ದಾರೆ. ಸರಕಾರ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳ ಜೊತೆ ತಜ್ಞರ ತಂಡದಿಂದ ಜೋಶಿ ಮಠದ ಬಿರುಕು ಬಿಟ್ಟಿರುವ ಪ್ರದೇಶದ ಮನೆ ಮನೆಗೆ ಹೋಗಿ ಸಮೀಕ್ಷೆ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರಧಾಮಿ ಇವರಿಂದ ಜೋಶಿ ಮಠಕ್ಕೆ ಭೇಟಿ !
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಧಾಮಿ ಇವರು ಜನವರಿ ೭ ರಂದು ಜೋಶಿಮಠಕ್ಕೆ ಭೇಟಿ ನೀಡಿದರು. ಅವರು ಈ ಮೊದಲು ಅಪಾಯ ಕ್ಷೇತ್ರ ತುರ್ತು ತೆರವುಗೊಳಿಸುವುದು ಮತ್ತು ತೊಂದರೆಗಿಡಾಗಿರುವ ಕುಟುಂಬಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳದಲ್ಲಿ ದೊಡ್ಡ ಪುನರ್ವಸತಿ ಕೇಂದ್ರ ಕಟ್ಟುವ ಆದೇಶ ನೀಡಿದ್ದಾರೆ. ಯಾವ ಕುಟುಂಬದ ಮನೆಗಳು ವಾಸಿಸಲು ಯೋಗ್ಯವಾಗಿಲ್ಲ ಅಂತಹ ಕುಟುಂಬಕ್ಕೆ ಸರಕಾರ ಬಾಡಿಗೆ ಮನೆಗೆ ಹೋಗಲು ಹೇಳಿದ್ದಾರೆ. ಸರಕಾರ ಅವರಿಗೆ ಪ್ರತಿ ತಿಂಗಳು ೪ ಸಾವಿರ ರೂಪಾಯಿ ಬಾಡಿಗೆ ನೀಡಲಿದೆ.
ಕಾರ್ಣಪ್ರಯಾಗ ಇಲ್ಲಿಯೂ ಕೂಡ ಭೂಕುಸಿತ
ರಾಜ್ಯದ ಕರ್ಣಪ್ರಯಾಣಗ ಇಲ್ಲಿಯ ಮನೆಗಳು ಕೂಡ ಬಿರುಕು ಬಿಟ್ಟಿರುವುದು ಬೆಳಕಿಗೆ ಬಂದಿದೆ. ಇಲ್ಲಿಯ ಬಹುಗುಣನಗರ, ಸಿಎಮ್‌ಪಿ ಬ್ಯಾಂಡ್ ಮತ್ತು ಸಬ್ಜಿ ಮಂಡಿ ಈ ಪ್ರದೇಶದಲ್ಲಿ ವಾಸಿಸುವ ೫೦ ಕ್ಕೂ ಹೆಚ್ಚಿನ ಮನೆಗಳಲ್ಲಿ ಬಿರುಕು ಬಿಟ್ಟಿದೆ. ಈ ಹಿಂದೆ ಮಳೆಗಾಲದಲ್ಲಿ ಭೂಕುಸಿತದ ಘಟನೆ ನಡೆಯುತ್ತಿತ್ತು.
ಇಲ್ಲಿಯ ೨೫ ಮನೆಗಳಿಗೆ ೨ ಅಡಿಗಳಷ್ಟು ಬಿರುಕು ಬಿಟ್ಟಿದೆ. ಆದ್ದರಿಂದ ಅನೇಕರು ಮನೆ ಬಿಟ್ಟು ಸ್ಥಳಾಂತರಗೊಂಡಿದ್ದಾರೆ; ಆದರೆ ಕೆಲವು ಜನರಿಗೆ ಪರ್ಯಾಯ ಇಲ್ಲದಿದ್ದರಿಂದ ಭಯದ ನೆರಳಿನಲ್ಲಿ ವಾಸಿಸುತ್ತಿದ್ದಾರೆ. ತಜ್ಞರಿಂದ ಈ ಪ್ರದೇಶದ ಸಮೀಕ್ಷೆ ಮಾಡಲಾಗುತ್ತಿದೆ ಇದರ ಮೇಲೆ ಉಪಾಯ ಯೋಜನೆ ಮಾಡುವ ಪ್ರಸ್ತಾವ ಕೂಡ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಅನುದಾನ ಮಂಜೂರಾದ ನಂತರ ಕೆಲಸ ಆರಂಭವಾಗಬಹುದು.