ಮಹಿಳಾ ಪ್ರಶಿಕ್ಷಕಿ ಬಲಾತ್ಕಾರದ ದೂರು ನೀಡಿದ ನಂತರ ಹರಿಯಾಣದ ಕ್ರೀಡಾ ಸಚಿವರಿಂದ ರಾಜೀನಾಮೆ

ಹರಿಯಾಣದ ಕ್ರೀಡಾ ಸಚಿವ ಮತ್ತು ರಾಷ್ಟ್ರೀಯ ಹಾಕಿ ಸಂಘದ ಮಾಜಿ ನಾಯಕ ಸಂದೀಪ ಸಿಂಹ

ಚಂಡಿಗಡ – ಹರಿಯಾಣದ ಕ್ರೀಡಾ ಸಚಿವ ಮತ್ತು ರಾಷ್ಟ್ರೀಯ ಹಾಕಿ ಸಂಘದ ಮಾಜಿ ನಾಯಕ ಸಂದೀಪ ಸಿಂಹ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ವಿರುದ್ಧ ಓರ್ವ ಮಹಿಳಾ ಪ್ರಶಿಕ್ಷಕಿಯು ಬಲಾತ್ಕಾರದ ಆರೋಪ ಮಾಡಿ ಪೊಲೀಸರಲ್ಲಿ ದೂರು ದಾಖಲಿಸಿದರು. ಸಂದೀಪ ಸಿಂಹ ಇವರು, `ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ’, ಎಂದು ಆರೋಪಿಸಿದ್ದಾರೆ. ರಾಜ್ಯದ ಪೊಲೀಸ ಮಹಾ ಸಂಚಾಲಕರು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ದಳವನ್ನು ಸ್ಥಾಪಿಸಿದೆ. ಇದರಲ್ಲಿ ಮಮತಾ ಸಿಂಹ ಇವರ ನೇತೃತ್ವದಲ್ಲಿ ಸಮರ ಪ್ರತಾಪ ಸಿಂಹ ಮತ್ತು ರಾಜಕುಮಾರ ಕೌಶಿಕ ಇವರ ಸಮಾವೇಶವಿದೆ.