ಪಿ.ಎಫ್.ಐ.ಯು ಕರಾಟೆ ಕಲಿಸುವ ನೆಪದಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸುತ್ತಿತ್ತು !

ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಲ್ಲಿರುವ ಉಲ್ಲೇಖ !

ನಿಷೇಧಿಸಿದ ನಂತರವೂ ಕೇರಳದಲ್ಲಿ ಪಿ.ಎಫ್.ಐ. ಗುಪ್ತವಾಗಿ ಸಕ್ರಿಯ

ಭಾಗ್ಯನಗರ (ತೇಲಂಗಾಣಾ) – ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ.ಯು) ಪಾಪ್ಯುಲರ ಫ್ರಂಟ ಆಫ್ ಇಂಡಿಯಾದ (ಪಿ.ಎಫ್.ಐ.ಯ) ಭಯೋತ್ಪಾದನೆಯ ವಿರೋಧದಲ್ಲಿ ಇಲ್ಲಿಯ ನ್ಯಾಯಾಲಯದಲ್ಲಿ ಆರೋಪಪತ್ರವನ್ನು ದಾಖಲಿಸಲಾಗಿದೆ. ಇದರಲ್ಲಿ, ಬಂಧಿಸಲಾಗಿರುವ 11 ಜನರು ಭಯೋತ್ಪಾದನೆ ಕೇಂದ್ರವನ್ನು ನಡೆಸುತ್ತಿದ್ದರು. ಇಲ್ಲಿ ಅವರು ಕರಾಟೆ ಕಲಿಸುವ ಹೆಸರಿನಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಪ್ರಶಿಕ್ಷಣವನ್ನು ನೀಡುತ್ತಿದ್ದರು ಎಂದು ಹೇಳಿದೆ.

1. ಆರೋಪಪತ್ರದಲ್ಲಿ, ರಾಜ್ಯದ ನಿಜಾಮಾಬಾದನಲ್ಲಿ ಅಬ್ದುಲ ಕಾದಿರನು ಕರಾಟೆ ಕಲಿಸುವ ಹೆಸರಿನಡಿಯಲ್ಲಿ ಭಯೋತ್ಪಾದಕ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದನು. ಬಂಧಿತ 11 ಜನರು ಈ ಕೇಂದ್ರದಲ್ಲಿ ಮುಸಲ್ಮಾನರನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು. ಮತ್ತು ದೇಶವಿರೋಧಿ ವಿಷಯಗಳನ್ನು ಕಲಿಸುತ್ತಿದ್ದರು. ಈ ತರಬೇತಿಗಾಗಿ ಪಿ.ಎಫ್.ಐ.ಯು ವಿದೇಶಗಳಿಂದ ಹಣವನ್ನು ಪಡೆಯುತ್ತಿತ್ತು. ಈ ಕೇಂದ್ರದಲ್ಲಿ ವ್ಯಕ್ತಿಯ ಗಂಟಲು, ಹೊಟ್ಟೆ ಮತ್ತು ತಲೆಯ ಮೇಲೆ ಚೂರಿ, ಕಬ್ಬಿಣದ ಸಲಾಕೆ ಇತ್ಯಾದಿಗಳಿಂದ ಯಾವ ರೀತಿ ಹಲ್ಲೆ ನಡೆಸಬೇಕು, ಎಂದು ಕಲಿಸುತ್ತಿದ್ದರು. ಅಲ್ಲದೇ ಶಿರಚ್ಛೇದ ಮಾಡುವುದು ಮತ್ತು ಶರೀರದ ಅವಯವಗಳನ್ನು ಕತ್ತರಿಸುವ ಬಗ್ಗೆ ಕೂಡ ಪ್ರಶಿಕ್ಷಣ ನೀಡಲಾಗುತ್ತಿತ್ತು. ಜೊತೆಗೆ ಭಯೋತ್ಪಾದಕ ಕೃತ್ಯ ಯಾವ ರೀತಿ ಮಾಡಬೇಕು ಎಂದೂ ಕೂಡ ಕಲಿಸಲಾಗುತ್ತಿತ್ತು.

2. ಎನ್.ಐ.ಎ.ಯು ಡಿಸೆಂಬರ 30 ರಂದು ಬಂಧಿಸಿದ ಪಿ.ಎಫ್.ಐ. ನ ನ್ಯಾಯವಾದಿ ಮಹಮ್ಮದ ಮುಬಾರಕ ಈತ ಮಾರ್ಶಲ ಆರ್ಟ್ಸನ ಶಿಕ್ಷಕನಾಗಿದ್ದನು. ಆತ ವಿವಿಧ ರಾಜ್ಯಗಳಲ್ಲಿ ಆಕ್ರಮಣಕಾರಿ ದಳವನ್ನು ಸಿದ್ಧಪಡಿಸುತ್ತಿದ್ದನು.

3. ಡಿಸೆಂಬರ 29 ರಂದು ಎನ್.ಐ.ಎ.ಯು ಕೇರಳದಲ್ಲಿ ಪಿ.ಎಫ್.ಐ. ನ 56 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ಸಂಘಟನೆಯ ಎರಡನೆ ಸರಣಿಯ ನಾಯಕರು ಮತ್ತು ಕಾರ್ಯಕರ್ತರ ನೆಲೆಗಳ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಕೆಲವು ಜನರು ನೇರವಾಗಿ ಕಾರ್ಯಕರ್ತರಾಗಿಲ್ಲದಿದ್ದರೂ, ಈ ಸಂಘಟನೆಗಾಗಿ ಕಾರ್ಯ ಮಾಡುತ್ತಿದ್ದರು.

4. ಪಿ.ಎಫ್.ಐ. ಮೇಲೆ ಸಪ್ಟೆಂಬರ 2022 ರಲ್ಲಿಯೇ ನಿಷೇಧಿಸಲಾಗಿತ್ತು. ಮಾಹಿತಿಯನುಸಾರ ಈಗಲೂ ಈ ಸಂಘಟನೆ ಕೇರಳದಲ್ಲಿ ಸಕ್ರಿಯವಾಗಿದೆ. ಇಲ್ಲಿಯವರೆಗೆ ಕೇರಳದಲ್ಲಿ 5 ಸಲ ದಾಳಿ ನಡೆಸಲಾಗಿದೆ. ನಿಷೇಧಿಸಿದ ಬಳಿಕವೂ ಈ ಸಂಘಟನೆಯ ಅಡಿಯಲ್ಲಿ ಚಟುವಟಿಕೆ ನಡೆಸುತ್ತಿದೆಯೆಂದು ಹೇಳಲಾಗುತ್ತಿದೆ.

5. ಎನ್.ಐ.ಎ.ಯು ಕೊಚ್ಚಿಯ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯನುಸಾರ ಪಿ.ಎಫ್.ಐ.ಯು ಭಯೋತ್ಪಾದಕ ಇಸ್ಲಾಮಿಕ ಸ್ಟೇಟ ಮತ್ತು ಅಲ್ ಕಾಯ್ದಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರೊಂದಿಗೆ ಸಂಬಂಧ ಹೊಂದಿದೆ. ಪಿ.ಎಫ್.ಐ. ಮೇಲೆ ನಿಷೇಧ ಹೇರಿದ ಬಳಿಕವೂ ಗುಪ್ತರೂಪದಲ್ಲಿ ಅದರ ಶಾಖೆಗಳು ಕಾರ್ಯನಿರತವಾಗಿದೆ ಎಂದು ಹೇಳಿದೆ.

ಒಂದು ಸಂಘಟನೆಯನ್ನು ನಿಷೇಧಿಸಿದ ಮಾತ್ರಕ್ಕೆ ಆ ಸಂಘಟನೆ ನಷ್ಟವಾಗುವುದಿಲ್ಲ, ಅದನ್ನು ಬುಡಸಹಿತ, ಅವುಗಳ ವಿಚಾರಗಳಸಹಿತ ನಷ್ಟಗೊಳಿಸುವ ಆವಶ್ಯಕತೆಯಿರುತ್ತದೆ ಮತ್ತು ಅದಕ್ಕಾಗಿ ಜಾಗರೂಕತೆಯಿಂದ ಪ್ರಯತ್ನಿಸುವ ಆವಶ್ಯಕತೆಯಿರುತ್ತದೆ ಎನ್ನುವುದೇ ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು