ಝಾರಖಂಡನ ಉನ್ನತ ಶಿಕ್ಷಣ ಪಡೆದ ಪ್ರಿಯಾ ಭಾವಪೂರ್ಣ ಸ್ಥಿತಿಯಲ್ಲಿ ಶ್ರೀಕೃಷ್ಣನೊಂದಿಗೆ ವಿವಾಹವಾದಳು !

(ಪ್ರಾತಿನಿಧಿಕ ಚಿತ್ರ)

ಝಾರಖಂಡ – ಇಲ್ಲಿಯ ಉನ್ನತ ಶಿಕ್ಷಣ ಪಡೆದ ಪ್ರಿಯಾ ಇವರು ಶ್ರೀಕೃಷ್ಣನೊಂದಿಗೆ ವಿವಾಹವಾಗಿದ್ದಾಳೆ. ಇದಕ್ಕಾಗಿ ಅವಳು 14 ವರ್ಷಗಳ ಕಾಲ ಆಕೆಯ ಆರ್ಯ ಸಮಾಜ ಕುಟುಂಬದವರೊಂದಿಗೆ ಹೋರಾಟ ಮಾಡಿದಳು. ಆಕೆಗೆ ಜೀವ ಬೆದರಿಕೆಯನ್ನು ಕೂಡ ಹಾಕಲಾಗಿತ್ತು. ಆಕೆಯ ಗುರು ಆಚಾರ್ಯ ಶ್ರೀ ಗೌರವಕೃಷ್ಣ ಗೋಸ್ವಾಮಿ ಇವರು ಆಕೆಗೆ ಶ್ರೀಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಪರಮ ಗುರು ಸ್ವಾಮಿ ಶ್ರೀ ಹರಿದಾಸಜಿ ಮಹಾರಾಜರು ಆಕೆಗೆ ಶ್ರೀಕೃಷ್ಣ ನಿನ್ನ ಸರ್ವಸ್ವ ಆಗಿದ್ದಾನೆಂದು ತಿಳಿಸಿದರು. ಪ್ರಿಯಾಳು ಗುಡಗಾಂವನ ಭಾರತದ ಮೊದಲ 10 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ವಿಶ್ವವಿದ್ಯಾಲಯದಲ್ಲಿ `ಎಂ.ಬಿ.ಎ.” ಪದವಿಯನ್ನು ಪಡೆದಿದ್ದಳು ಮತ್ತು ಚಂಡೀಗಢನಲ್ಲಿ ಅವಳು ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಳು. ಪ್ರಿಯಾ ತನ್ನ ಸಂಪೂರ್ಣ ಆಯುಷ್ಯವನ್ನು ಶ್ರೀಕೃಷ್ಣನ ಚರಣಗಳಿಗೆ ಅರ್ಪಿಸಲು ಅತ್ಯಂತ ಭಾವಪೂರ್ಣ ಸ್ಥಿತಿಯಲ್ಲಿ ಈ ವಿವಾಹ ಆಗಿದ್ದಾಳೆ.

ಈಗ ಪ್ರಗತಿಪರರು ಈ ವಿಷಯದ ಬಗ್ಗೆ ಅಸೂಯೆಯಿಂದ ಟೀಕಿಸದರೆ ಆಶ್ಚರ್ಯ ಪಡಬಾರದು !- ಸಂಪಾದಕರು