ಆಸ್ಸಾಂನಲ್ಲಿ 10 ತಿಂಗಳಿನಲ್ಲಿ 53 ಜಿಹಾದಿಗಳ ಬಂಧನ.

ಗೌಹತ್ತಿ(ಆಸ್ಸಾಂ)- ಆಸ್ಸಾಂನಲ್ಲಿ ಮಾರ್ಚ 2022 ರಿಂದ ಇಲ್ಲಿಯವರೆಗೆ 53 ಜಿಹಾದಿಗಳನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ವಿಧಾನಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರ ನೀಡುವಾಗ ನೀಡಿದರು. ರಾಜ್ಯದಲ್ಲಿ ಜಿಹಾದಿಗಳ ಕಾರ್ಯಾಚರಣೆಯಲ್ಲಿ `ವಿದೇಶಿ’ಯರು ಭಾಗವಹಿಸಿರುವರೆಂದು ಸರಮಾ ಹೇಳಿದರು. ಈ ವಿಷಯದಲ್ಲಿ ಭಾಜಪ ಶಾಸಕ ಟೆರೋಸ ಗ್ವಾಲ ಇವರು ಪ್ರಶ್ನೆ ಕೇಳಿದ್ದರು.

ಮುಖ್ಯಮಂತ್ರಿ ಸರಮಾ ತಮ್ಮ ಮಾತನ್ನು ಮುಂದುವರಿಸುತ್ತಾ,

೧. ಬಂಧಿಸಿರುವ ಜಿಹಾದಿಗಳಲ್ಲಿ ಸೈಫುಲ ಇಸ್ಲಾಂ ಉರ್ಫ ಹಾರೂನ ರಾಶಿದ ಉರ್ಫ ಸುಮನ ಈ ಬಂಗ್ಲಾದೇಶಿ ಜಿಹಾದಿಗಳು ಸೇರಿದ್ದಾರೆ. ಅವರನ್ನು ಬಾರಪೇಟಾದಿಂದ ಬಂಧಿಸಲಾಯಿತು. ಅವರು ಬಾರಪೇಟಾದ ಒಂದು ಮಶೀದಿಯಲ್ಲಿ ಇಮಾಮ(ಮಶೀದಿಯಲ್ಲಿ ಪ್ರಾರ್ಥನೆ ಮಾಡಿಸಿ ಕೊಳ್ಳುವ ಪ್ರಮುಖ) ಎಂದು ಕಾರ್ಯನಿರತವಾಗಿದ್ದರು. ಅವನು ಅಲ್ಲಿ ವಿದ್ಯಾರ್ಥಿಗಳಿಗೆ ಅರಬ್ಬಿ ಭಾಷೆಯನ್ನು ಕಲಿಸುತ್ತಿದ್ದನು ಮತ್ತು ಅವರಿಗೆ ಜಿಹಾದಿ ಚಟುವಟಿಕೆಗೆ ಸಂಬಂಧಿಸಿದ ಪುಸ್ತಕಗಳನ್ನು ಹಂಚಿ ಅವರನ್ನು ಜಿಹಾದಿ ಕೃತ್ಯಗಳಿಗೆ ಸೆಳೆದುಕೊಳ್ಳುತ್ತಿದ್ದನು.

೨. ಇದೇ ರೀತಿ ಇತರೆ 5 ಬಾಂಗ್ಲಾದೇಶಿ ಜಿಹಾದಿಗಳು ಕೂಡ ಜನರಲ್ಲಿ ಜಿಹಾದಿ ಸಾಹಿತ್ಯವನ್ನು ಹಂಚಿ ಅವರನ್ನು ಈ ಕೃತ್ಯಗಳಿಗೆ ಸೆಳೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಆ ಐದೂ ಜನರೂ ಓಡಿ ಹೋಗುವಲ್ಲಿ ಯಶಸ್ವಿಯಾದರು. ಅವರು ಕೂಡ ಮಶೀದಿಯಲ್ಲಿ ಕೆಲಸ ಮಾಡುತ್ತಿದ್ದರು.

೩. ಬಂಧನದಲ್ಲಿರುವ ಜಿಹಾದಿಗಳಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅವರಿಗೆ ರಾಜ್ಯದ ಘುಬರಿ ಮತ್ತು ಮೋರಿಗಾವದಿಂದ ಬಂಧಿಸಲಾಗಿದೆ.

೪. ಮಾರ್ಚ 2022 ರಿಂದ ಇಲ್ಲಿಯವರೆಗೆ ಬಾರಪೇಟಾ, ಬೋಗಾಯಿಗಾವ, ಮೋರಿಗಾವ, ಘುಬರಿ, ಗೋಲಪಾಡಾ, ತಮುಲಪೂ ಮತ್ತು ನಲಬಾಡಿ ಈ 7 ಜಿಲ್ಲೆಗಳಲ್ಲಿ ಜಿಹಾದಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಟ್ಟು 9 ಅಪರಾಧಗಳು ನೊಂದಾಯಿಸಲಾಗಿದೆ.

ಸಂಪಾದಕೀಯ ನಿಲುವು

ಇದನ್ನು ನೋಡಿದಾಗ ಆಸ್ಸಾಂ ರಾಜ್ಯವನ್ನು ಜಿಹಾದಿಗಳು ಎಷ್ಟು ಪೊಳ್ಳು ಮಾಡಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಸರಕಾರವು ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಿದರೆ ಮಾತ್ರ ಇತರೆ ಜಿಹಾದಿಗಳಿಗೆ ತಕ್ಕ ಪಾಠ ಸಿಗುವುದು.