ಬಾಂಗ್ಲಾದೇಶದಲ್ಲಿ ಚರ್ಚಿನಲ್ಲಿ ಕುರಾನ ಇಟ್ಟಿರುವ ಮುಸಲ್ಮಾನ ಯುವಕನ ಬಂಧನ

ಢಾಕಾ – ಬಾಂಗ್ಲಾದೇಶದಲ್ಲಿನ ರಾಜಶಾಹಿಯಲ್ಲಿನ ಒಂದು ಚರ್ಚಿನಲ್ಲಿ ಮಹಂಮದ ಗೊಲಾಮ ಚೌಧರಿ ಎಂಬ ಹೆಸರಿನ ಮುಸಲ್ಮಾನ ಯುವಕನು ಕುರಾನನ್ನು ಇಟ್ಟಿರುವ ಆರೋಪವಿದೆ. ಚರ್ಚಿನಲ್ಲಿ ಕುರಾನನ್ನು ನೋಡಿದ ನಂತರ ಅಲ್ಲಿನ ಜನರು ಪೊಲೀಸರಿಗೆ ತಿಳಿಸಿದರು. ಅನಂತರ ಪೊಲೀಸರು ‘ಸಿಸಿಟಿವಿ’ಯ ಆಧಾರದಲ್ಲಿ ಚೌಧರಿಯನ್ನು ಬಂಧಿಸಿದ್ದಾರೆ. ಈ ಮಾಹಿತಿಯನ್ನು ‘ವೈಸ ಆಫ್‌ ಬಾಂಗ್ಲಾದೇಶಿ ಹಿಂದೂಜ’ ಎಂಬ ಟ್ವಿಟ್ಟರಿನ ಖಾತೆಯಿಂದ ತಿಳಿಸಲಾಗಿದೆ.