ಕಾನೂನು ಉಲ್ಲಂಘಿಸಿದರೆ 10 ವರ್ಷಗಳ ವರೆಗೆ ಕಾರಾಗೃಹವಾಸ
ಚಂಡಿಗಢ- ಹರಿಯಾಣದ ಭಾಜಪ ಸರಕಾರವು ವಿಧಾನಸಭೆಯಲ್ಲಿ ಸಮ್ಮತಿಸಲಾಗಿರುವ ವಿವಾಹಕ್ಕಾಗಿ ಮತಾಂತರಗೊಳಿಸುವುದನ್ನು ನಿರ್ಬಂಧಿಸುವ ಮಸೂದೆಗೆ ರಾಜ್ಯಪಾಲರು ಒಪ್ಪಿಗೆಯನ್ನು ನೀಡಿದ್ದಾರೆ. ಇದರಿಂದ ಈಗ ರಾಜ್ಯದಲ್ಲಿ ವಿವಾಹಕ್ಕೆ ಮತಾಂತರಗೊಳಿಸಲು ಅನುಮತಿ ಸಿಗುವುದಿಲ್ಲ. ಈ ಮಸೂದೆಯ ಉಲ್ಲಂಘಿಸಿದವರಿಗೆ 3 ರಿಂದ 10 ವರ್ಷಗಳ ವರೆಗೆ ಕಾರಾಗೃಹ ಅನುಭವಿಸಬೇಕಾಗುತ್ತದೆ. ರಾಜ್ಯದಲ್ಲಿ ಕಳೆದ 4 ವರ್ಷಗಳಲ್ಲಿ ಒತ್ತಾಯದಿಂದ ಮತಾಂತರದ 127 ಪ್ರಕರಣಗಳು ಜರುಗಿದ ಬಳಿಕ ಸರಕಾರ ಈ ಕಾನೂನು ಜಾರಿಗೊಳಿಸಿದೆ.
हरियाणा में शादी के लिए धर्मपरिवर्तन की नहीं होगी इजाजत, कानून को राज्यपाल की मंजूरी#HaryanaNews https://t.co/29NU7kNWNP
— TV9 Bharatvarsh (@TV9Bharatvarsh) December 20, 2022
ಯಾರಾದರೂ ಸ್ವ ಇಚ್ಛೆಯಿಂದ ಮತಾಂತರಗೊಂಡರೆ, ಅದರ ಮಾಹಿತಿಯನ್ನು ಕೂಡ ಜಿಲ್ಲಾಧಿಕಾರಿಗಳಿಗೆ ನೀಡಬೇಕಾಗುತ್ತದೆ. ಈ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಅಂಟಿಸಲಾಗುವುದು.ಈ ಮತಾಂತರಕ್ಕೆ ಯಾರದಾದರೂ ಆಕ್ಷೇಪಣೆಯಿದ್ದರೆ 30 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ದೂರು ನೀಡಬಹುದು. ಇದರ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸುವರು.
ಕಾನೂನು ಅನುಸಾರ ಆಗುವ ಶಿಕ್ಷೆ
೧. ಒತ್ತಾಯದ ಮತಾಂತರಕ್ಕಾಗಿ 1 ರಿಂದ 5 ವರ್ಷಗಳ ಕಾರಾಗೃಹ
೨. ಕಡಿಮೆಯೆಂದರೂ 1 ಲಕ್ಷ ರೂಪಾಯಿಗಳ ದಂಡ ವಿಧಿಸುವ ಅವಕಾಶ
೩. ಮದುವೆಗಾಗಿ ಧರ್ಮವನ್ನು ಮುಚ್ಚಿಟ್ಟರೆ 3 ರಿಂದ 10 ವರ್ಷಗಳ ವರೆಗೆ ಕಾರಾಗೃಹ
೪. ಕಡಿಮೆಯೆಂದರೂ 3 ಲಕ್ಷ ರೂಪಾಯಿಗಳ ದಂಡ
೫. ಸಾಮೂಹಿಕ ಮತಾಂತರಕ್ಕಾಗಿ 10 ವರ್ಷಗಳ ವರೆಗೆ ಕಾರಾಗೃಹ