ಕೇಂದ್ರ ದಲ್ಲಿ ಭಾಜಪ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪುರಾತತ್ವ ಇಲಾಖೆ ಪಾರ್ಶ್ವವಾಯು ವಿನಿಂದ ಪೀಡಿತ ವಾಗಿದೆ.

ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಕೆ.ಕೆ.ಮಹಮ್ಮದ್ ಇವರ ಆತ್ಮ ಚರಿತ್ರೆಯ ಲ್ಲಿ ಆರೋಪ

ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಕೆ.ಕೆ.ಮಹಮ್ಮದ್

ನವದೆಹಲಿ- ಅಯೋಧ್ಯೆ ಯ ಶ್ರೀ ರಾಮಜನ್ಮ ಭೂಮಿಯ ಉತ್ಖನನ ದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಮತ್ತು ಪುರಾತತ್ವ ತಜ್ಞ ಕೆ.ಕೆ.ಮಹಮ್ಮದ್ ಇವರ ಆತ್ಮ ಚರಿತ್ರೆ ‘ಆನ್ ಇಂಡಿಯನ್ ಆಯ್ ಆಮ್'(ನಾನು ಭಾರತೀಯ ನಾಗಿದ್ದೇನೆ’ ಹೆಸರಿನ ಪುಸ್ತಕ ಮುದ್ರಿತವಾಗಿದೆ.ಇದರಲ್ಲಿ ಅವರು ಕೇಂದ್ರ ಸರಕಾರ ದ ಆರೋಪ ಮಾಡಿ’ವರ್ಷ2೦214ರಲ್ಲಿ ಕೇಂದ್ರ ದಲ್ಲಿ ಭಾಜಪ ಸರಕಾರ ಬಂದಾಗಿನಿಂದ ಪುರಾತತ್ವ ಇಲಾಖೆ ಪಾರ್ಶ್ವವಾಯು ಪೀಡಿತ ವಾಗಿದೆ,’ಎಂದು ಟೀಕಿಸಿದ್ದಾರೆ. ಈ ಟೀಕೆಗೆ ಮಾಜಿ ಕೇಂದ್ರೀಯ ಮಂತ್ರಿ ಮಹೇಶ್ ಶರ್ಮಾ ಇವರು ಪ್ರತಿಕ್ರಿಯೆ ನೀಡಿ, ನಾನು ಈ ಪುಸ್ತಕ ವನ್ನು ಓದಿದ್ದೇನೆ. ನಾನು ಇದರ ಸಮೀಕ್ಷೆ ನಡೆಸುತ್ತಿದ್ದು ಆವಶ್ಯಕತೆ ಯೆನಿಸಿದರೆ ಈ ಪ್ರಕರಣದ ತನಿಖೆ ನಡೆಸುತ್ತೇನೆ ಎಂದು ಹೇಳಿದ್ದಾರೆ.

೧. ಕೆ.ಕೆ.ಮಹಮ್ಮದ್ ಇವರು ಪುಸ್ತಕದ ಲ್ಲಿ ‘ಭಾಜಪ ಸರಕಾರ ಬಂದ ಬಳಿಕ ಪುರಾತತ್ವ ತಜ್ಞರಿಗೆ ಇದ್ದ ನಿಯಮ ವನ್ನು ರೂ 25ಲಕ್ಷ ದಿಂದ 3ಲಕ್ಷ ರೂಪಾಯಿ ಮಾಡಲಾಗಿದೆ. ಇದರಿಂದ ಸ್ಮಾರಕ ಮತ್ತು ಮಂದಿರ ಗಳ ಸಂರಕ್ಷಣೆ ಕಾರ್ಯ ನಿರ್ವಹಿಸಲು ಆಗುವುದಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆ ದೆಹಲಿ ಸಚಿವಾಲಯದ ಕಡೆಗೆ ಮುಖ ನೋಡಬೇಕಾಗುತ್ತದೆ. ಎಂದು ತಿಳಿಸಿದ್ದಾರೆ.

೨. ಕೆ.ಕೆ.ಮಹಮ್ಮದ್ ಮುಂದುವರಿಸಿ,ಭಾಜಪ ಸರಕಾರ ಅಧಿಕಾರ ಕ್ಕೆ ಬಂದ ಬಳಿಕ ಜನರಿಗೆ ಸಂಸ್ಕೃತಿ ಕ್ಷೇತ್ರದಲ್ಲಿ ಪರಿವರ್ತನೆ ಯ ಅಪೇಕ್ಷೆ ಇತ್ತು. ಕಾಂಗ್ರೆಸ್ ಸರಕಾರ ದ ಕಾಲದಲ್ಲಿ ಮಧ್ಯ ಪ್ರದೇಶದ ಚಂಬಲ ಪ್ರದೇಶದ ಬಟೇಶ್ವರದಲ್ಲಿ ರೂ.25.00ಲಕ್ಷ ಗಳ ಅನುದಾನವನ್ನು ಉಪಯೋಗಿಸಿ 80 ಮಂದಿರ ಗಳ ಪುನರ್ ನಿರ್ಮಾಣ ಮಾಡಲಾಗಿದೆ. ಆದರೆ ದುಃಖದ ವಿಷಯ ವೆಂದರೆ ಭಾಜಪ ಆಡಳಿತದ ಅವಧಿಯಲ್ಲಿ ಬಟೇಶ್ವರದಲ್ಲಿ ಒಂದೇ ಒಂದು ಮಂದಿ ರದ ನಿರ್ಮಾಣ ವಾಗಿಲ್ಲ ಎಂದು ಹೇಳಿದ್ದಾರೆ.