ಕರ್ಣಾವತಿ /ಶಿಮ್ಲಾ – ಗುಜರಾತ ಮತ್ತು ಹಿಮಾಚಲಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಯ ಮತಯಣಿಕೆಯ ತೀರ್ಪು ಹೆಚ್ಚು ಕಡಿಮೆ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಭಾಜಪ ಸೋತಿದ್ದು ಅಲ್ಲಿ ಕಾಂಗ್ರೆಸ್ ೬೪ ರಲ್ಲಿ ೪೦ ಸ್ಥಾನ ಪಡೆದು ಅಧಿಕಾರಕ್ಕೆ ಬಂದಿದೆ ಹಾಗೂ ಗುಜರಾತನಲ್ಲಿ ಭಾಜಪಗೆ ದೊಡ್ಡ ಗೆಲವು ಸಿಕ್ಕಿದೆ ಮತ್ತು ಅಧಿಕಾರ ಉಳಿಸಿಕೊಂಡಿದೆ. ಇಲ್ಲಿ ಭಾಜಪಗೆ ೧೮೨ ರಲ್ಲಿ ೧೫೭ ಸ್ಥಾನ ಪಡೆದುಕೊಂಡಿದೆ. ಮೊಟ್ಟಮೊದಲ ಬಾರಿಗೆ ಭಾಜಪಗೆ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳು ದೊರೆತಿದೆ.
#AssemblyElectionResults2022 PHOTOS
BJP’s celebratory dance in Gujarat, Congress exudes confidence in Himachalhttps://t.co/pMyWnObuZ4
— Financial Express (@FinancialXpress) December 8, 2022
೧. ಹಿಮಾಚಲ ಪ್ರದೇಶದಲ್ಲಿ ಭಾಜಪಾಗೆ ೨೫ ಸ್ಥಾನ ದೊರೆತಿದೆ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಯಾವುದೇ ಸ್ಥಾನ ಸಿಕ್ಕಿಲ್ಲ. ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ವರ್ಷದ ಅನುಭವ ನೋಡಿದರೆ ಜನರು ೫ ವರ್ಷಕ್ಕೆ ಒಮ್ಮೆ ಅಧಿಕಾರ ಬದಲಾಯಿಸುವುದು ಕಾಣುತ್ತದೆ. ಇಲ್ಲಿ ಹಿಂದೆ ಕಾಂಗ್ರೆಸ್ ಸರಕಾರ ಇತ್ತು, ಜನರು ಕಾಂಗ್ರೆಸ್ಸನ್ನು ತಿರಸ್ಕರಿಸಿ ಭಾಜಪಗೆ ಅಧಿಕಾರ ನೀಡಿತು. ಜನರು ಈಗ ಭಾಜಪವನ್ನು ತಿರಸ್ಕರಿಸಿ ಮತ್ತೆ ಕಾಂಗ್ರೆಸ್ಸಿನ ಕೈಗೆ ಅಧಿಕಾರ ನೀಡಿದೆ.
೨. ಗುಜರಾತನಲ್ಲಿ ಕಾಂಗ್ರೆಸ್ಸಿಗೆ ೧೭ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ೫ ಸ್ಥಾನ ದೊರೆತಿದೆ. ಆಮ್ ಆದ್ಮಿ ಪಕ್ಷ ಇಲ್ಲಿ ತನ್ನ ಖಾತೆ ತೆರೆದಿದೆ. ಆಮ್ ಆದ್ಮಿ- ಪಕ್ಷವು ಕಾಂಗ್ರೆಸ್ಸಿನ ಮತಗಳನ್ನು ಪಡೆದಿರುವುದರಿಂದ ಕಾಂಗ್ರೆಸ್ಸಿಗೆ ನಷ್ಟ ಆಗಿದೆ ಹಾಗೂ ಭಾಜಪಗೆ ಲಾಭ ಆಗಿದೆ ಎಂದು ಹೇಳಲಾಗುತ್ತಿದೆ.
ಭಾಜಪ ಕಾಂಗ್ರೆಸ್ಸಿನ ಶಾಸಕರನ್ನು ಒಡೆಯಬಹುದೆಂದು ಕಾಂಗ್ರೆಸ್ಸಿಗೆ ಭಯ
ಛತ್ತೀಸ್ಗಢ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಭೂಪೇಶ ಬಘೇಲ ಇವರು, ಹಿಮಾಚಲದಲ್ಲಿ ಮತ ಎಣಿಕೆ ನಡೆಯುತ್ತಿದೆ ಅಲ್ಲಿ ಕಾಂಗ್ರೆಸ್ಸಿನ ಸರಕಾರ ಬರುವ ಸಾಧ್ಯತೆ ಇದೆ, ಭಾಜಪದ ಮೇಲೆ ನಮಗೆ ವಿಶ್ವಾಸವಿಲ್ಲ ಆದ್ದರಿಂದ ನಾವು ನಮ್ಮ ಆರಿಸಿ ಬಂದಿರುವ ಶಾಸಕರನ್ನು ಜೋಪಾನ ಮಾಡುವೆವು. ಅವರನ್ನು ಎಲ್ಲಿ ಕರೆದುಕೊಂಡು ಹೋಗಬೇಕು ಇದನ್ನು ನಂತರ ನಿಶ್ಚಯ ಮಾಡುವೆವು ಎಂದು ಹೇಳಿದರು.