ಮಕ್ಕಳ ಸಂಖ್ಯೆಯಲ್ಲಿ ಸಮಾನತೆ ಇರಬೇಕು ! ಏಕರೂಪ ನಾಗರೀಕ ಕಾನೂನಿಗಾಗಿ ಉತ್ತರಾಖಂಡ ಸರಕಾರದ ಸಮಿತಿಯ ವರದಿ

ಡೆಹರಾಡೂನ (ಉತ್ತರಖಂಡ): ಉತ್ತರಾಖಂಡದಲ್ಲಿ ಭಾಜಪ ಸರಕಾರವು ಸಮಾನ ನಾಗರೀಕ ಕಾನೂನು ಜಾರಿ ಮಾಡುವುದಕ್ಕಾಗಿ ಸಮಿತಿ ಸ್ಥಾಪಿಸಿದೆ. ಈ ಸಮಿತಿಯ ವರದಿಯಲ್ಲಿ ಮಕ್ಕಳ ಸಂಖ್ಯೆಯಲ್ಲಿ ಸಮಾನತೆ ಇರುವ ಸಂದರ್ಭದಲ್ಲಿನ ಸೂಚನೆಯು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿದೆ. ಇದರ ಜೊತೆಗೆ ಈ ವರದಿಯಲ್ಲಿ  ಸ್ತ್ರೀ ಪುರುಷರ ಸಮಾನತೆಗೆ ಪ್ರಾಧಾನ್ಯತೆ, ಮಹಿಳೆಯರಿಗೆ ವಿವಾಹವಾಗುವ ವಯಸ್ಸು ೨೧ಕ್ಕೆ ಹೆಚ್ಚಿಸುವುದು , ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಅಧಿಕಾರ, ತೃತೀಯ ಪಂಥಿ ದಾಂಪತ್ಯಕ್ಕೇ ಕಾನೂನುರೀತ್ಯಾ  ಅಧಿಕಾರ ಇವುಗಳು ಸಹ ಒಳಗೊಂಡಿವೆ. ಹಾಗೂ ಲಿವ್ ಇನ್ ರಿಲೇಶನ್ ಶಿಪ್ (ವಿವಾಹ ಮಾಡಿಕೊಳ್ಳದೆ ಒಟ್ಟಾಗಿ ಇರುವುದು) ಇದಕ್ಕೆ ಸಂಬಂಧಿತ ಕಾನೂನಿನ ಪ್ರಕಾರ ನೋಂದಣಿ ಗೊಳಿಸುವ ಸೂಚನೆಗಳನ್ನು ಸೇರಿಸುವ ಸಾಧ್ಯತೆಯಿದೆ. (ಈ ರೀತಿ ಸೂಚನೆ ಬಂದರೆ ಆಗ ಅದಕ್ಕೆ ಕಾನೂನಿನಲ್ಲಿ ಯಾವುದೇ ಸ್ಥಾನ ನೀಡಬಾರದು, ಇದು ಭಾರತೀಯ ಕುಟುಂಬ ವ್ಯವಸ್ಥೆಗೆ ಧಕ್ಕೆ ಬರದ ಹಾಗೆ ಕಾಪಾಡಲು ಮಹತ್ವಪೂರ್ಣವಾಗಿದೆ !-ಸಂಪಾದಕರು)

೧. ಉತ್ತರಾಖಂಡದಲ್ಲಿನ ಪುಷ್ಕರ ಸಿಂಹ  ದಾಮಿ ಇವರ ನೇತೃತ್ವದಲ್ಲಿ ಭಾಜಪ  ಸರಕಾರ ಮತ್ತೆ ಅಧಿಕಾರಕ್ಕೆ ಬಂದ ತಕ್ಷಣ ೨೦೨೨ ರಲ್ಲಿ ತಕ್ಷಣ ತಜ್ಞ ಸಮಿತಿಯ ಸ್ಥಾಪನೆ ಮಾಡಿತ್ತು

೨. ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆ ಇವುಗಳ ಸಲಹೆಗಳನ್ನು ಪಡೆದ ನಂತರ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ ದೇಸಾಯಿ ಇವರ ನೇತೃತ್ವದಲ್ಲಿ ೫ ಸದಸ್ಯರ ತಜ್ಞ ಸಮಿತಿಗೆ ಅನೇಕರು ಸೂಚನೆ ಕಳುಹಿಸಿದ್ದಾರೆ.

೩. ಸಮಿತಿಯು ಅದರ ವರದಿಯನ್ನು ೩ ತಿಂಗಳಲ್ಲಿ ನೀಡುವುದು ಅಪೇಕ್ಷಿತವಾಗಿತ್ತು; ಆದರೆ ಉತ್ತರಾಖಂಡ ಸರಕಾರವು ತಜ್ಞ ಸಮಿತಿಯ ಕಾರ್ಯದ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿದೆ

ಸಂಪಾದಕೀಯ ನಿಲುವು

ಈ ರೀತಿ ಒಂದೊಂದು ರಾಜ್ಯಗಳಲ್ಲಿ ಸಮಾನ ನಾಗರಿಕ ಕಾನೂನು ಜಾರಿ ಮಾಡುವುದಕ್ಕಾಗಿ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವುದು, ಅವಶ್ಯಕ ವರದಿ ತಯಾರಿಸುವುದು ಮುಂತಾದವುಗಳಿಗೆ ಇಷ್ಟೊಂದು ಮನುಷ್ಯ ಬಲ ಖರ್ಚು ಮಾಡುವ ಬದಲು ಕೇಂದ್ರ ಸರಕಾರವೇ ಇದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನಿಸಬೇಕು, ಎಂಬುದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ !