(ಮಜಾರ ಎಂದರೆ ಇಸ್ಲಾಮಿ ಪೀರ ಅಥವಾ ಫಕೀರರ ಗೋರಿ )
ಪಾಟಲಿಪುತ್ರ – ರಾಜ್ಯದಲ್ಲಿರುವ ಐತಿಹಾಸಿಕ ಬೌದ್ಧ ಗುಹೆಯ ಮೇಲೆ ಭಾರತೀಯ ಪುರಾತತ್ವ ಇಲಾಖೆಯ ನಿಯಂತ್ರಣವಿದೆ; ಆದರೆ ಈ ಗುಹೆಯನ್ನು ಭೂಮಿ ಜಿಹಾದಿಗಳು ಕಬಳಿಸಿ ಅದನ್ನು ಮಜಾರ (ಗೋರಿಯ) ಎಂದು ಉಪಯೋಗಿಸುತ್ತಿದ್ದಾರೆ ಈ ಗುಹೆ ಈಗ ಮತಾಂಧ ಮುಸಲ್ಮಾನರ ವಶವಾಗಿದ್ದು ಅವರು ಈಗ ಅಲ್ಲಿ ನಮಾಜ ಪಠಣ ಮಾಡುತ್ತಿದ್ದಾರೆ. ಗೌತಮ ಬುದ್ಧ ಇವನು ಜ್ಞಾನಪ್ರಾಪ್ತಿಯ ನಂತರ ಒಂದು ರಾತ್ರಿ ಈ ಗುಹೆಯಲ್ಲಿ ವಾಸವಾಗಿರುವ ಉಲ್ಲೇಖ ಸಾಮ್ರಾಟ ಅಶೋಕನು ಬರೆದಿರುವ ಇಲ್ಲಿಯ ಶಿಲಾಶಾಸನದಲ್ಲಿ ಕಂಡಿದೆ. ಆದ್ದರಿಂದ ಈ ಗುಹೆಗೆ ಐತಿಹಾಸಿಕ ಮಹತ್ವವಿದೆ.
ASI reclaims 2300-year-old Ashoka edict that was illegally occupied and converted into ‘mazar’ in Sasaram, Bihar https://t.co/j8bJXCaMr2
— OpIndia.com (@OpIndia_com) November 30, 2022
೧. ೧೯೧೭ ರಲ್ಲಿ ಭಾರತೀಯ ಪುರಾತತ್ವ ಇಲಾಖೆಯಿಂದ ಈ ಗುಹೆಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿತ್ತು. ೨೦೦೫ ರಲ್ಲಿ ಮುಸಲ್ಮಾನರು ಈ ಗುಹೆಯನ್ನು ಅತಿಕ್ರಮಣ ಮಾಡಿದರು ಮತ್ತು ಪ್ರವೇಶದ್ವಾರ ನಿರ್ಮಿಸಿ ಇತರರಿಗೆ ಪ್ರವೇಶ ನಿಷೇಧಿಸಿದರು. ಇದು ಸೂಫಿ ಸಂತರ ಮಜಾರವಾಗಿದೆ ಎಂದು ಹೇಳುತ್ತಾ ಮುಸಲ್ಮಾನರು ಇದನ್ನು ಪ್ರಾರ್ಥನಾ ಸ್ಥಳಕವಾಗಿಪರಿವರ್ತಿಸಿದರು.
೨. ಮುಸಲ್ಮಾನರು ಗುಹೆಯ ಐತಿಹಾಸಿಕ ಮಹತ್ವ ಹೇಳುವ ಸಾಮ್ರಾಟ ಅಶೋಕನ ಶಿಲಾ ಶಾಸನಕ್ಕೆ ಬಿಳಿಯ ಬಣ್ಣ ಬಳೆದು ಅಳಿಸಿ ಹಾಕಿದರು. ಹಾಗೂ ಶಿಲಾ ಶಾಸನ ಧ್ವಂಸಗೊಳಿಸುವ ಪ್ರಯತ್ನ ಮಾಡಿದರು. ಗುಹೆಯಲ್ಲಿ ಬೌದ್ಧ ಧರ್ಮದ ಯಾವುದೇ ಚಿಹ್ನೆ ಉಳಿಯಬಾರದೆಂದು ಅದಕ್ಕಾಗಿ ಅವರು ಶಿಲಾಶಾಸನವನ್ನು ಹಸಿರು ಬಟ್ಟೆಯಿಂದ ಮುಚ್ಚಿದರು. ಮುಸಲ್ಮಾನರು ಇಲ್ಲಿ ಪ್ರತಿ ವರ್ಷ ಉರುಸು (ಯಾವುದಾದರೂ ಮುಸಲ್ಮಾನ ಧರ್ಮ ಗುರುಗಳ ಪುಣ್ಯತಿಥಿಯ ಕುರಿತು ಆಯೋಜಿಸಲಾದ ಉತ್ಸವ) ಆಚರಿಸಲು ಶುರು ಮಾಡಿದರು. ಆಗ ಅವರು ಗುಹೆಯ ಹತ್ತಿರದ ಜಾಗದಲ್ಲಿ ಅತಿಕ್ರಮಣ ನಡೆಸಿ ದರ್ಗಾ ಕಟ್ಟಿದ್ದಾರೆ.
೩. ೨೦೦೮ ರಲ್ಲಿ ಈ ಅತಿಕ್ರಮಣವನ್ನು ಭಾರತೀಯ ಪುರಾತತ್ವ ಇಲಾಖೆಯ ಗಮನಕ್ಕೆ ತಂದುಕೊಡಲಾಗಿತ್ತು. ೨೦೦೮ ರಿಂದ ೨೦೧೮ ವರೆಗೆ ಭಾರತೀಯ ಪುರಾತತ್ವ ಇಲಾಖೆ ರೋಹತಾಸ ಜಿಲ್ಲಾ ಆಡಳಿತಕ್ಕೆ ೨೦ ಪತ್ರ ಬರೆದು ಅತಿಕ್ರಮಣ ತೆರವುಗೊಳಿಸಲು ವಿನಂತಿಸಿತ್ತು ; ಆದರೆ ಜಿಲ್ಲಾ ಆಡಳಿತದಿಂದ ಅದರ ಕಡೆಗೆ ದುರ್ಲಕ್ಷ ಮಾಡಲಾಯಿತು. (ಇಂತಹ ಆಡಳಿತ ಭಾರತದ ಅಥವಾ ಪಾಕಿಸ್ತಾನದ?-ಸಂಪಾದಕರು)
Emperor Asokan’s Minor Rock Edict at Sasaram in Rohtas, Bihar was encroached for long.
The key of the site, which is a protected monument, was handed over to officials of @ASIGoI after intervention of district authorities. pic.twitter.com/mDS8MpyBO2
— Archaeological Survey of India (@ASIGoI) November 29, 2022
೪. ಭಾರತೀಯ ಪುರಾತತ್ವ ಇಲಾಖೆಯು ಈ ವಾಸ್ತುವಿನ ಐತಿಹಾಸಿಕ ಮಹತ್ವ ಮತ್ತು ಬೌದ್ಧಧರ್ಮಿಕ ಸ್ವರೂಪ ವರ್ಣನೆ ಮಾಡುವ ಮತ್ತು ಈ ವಾಸ್ತು ಒಂದು ಸಂರಕ್ಷಿತ ಸ್ಮಾರಕವಾಗಿದೆ ಎಂಬ ಉಲ್ಲೇಖವಿರುವ ಒಂದು ಫಲಕವನ್ನು ಸಹ ಹಾಕಿತು. ಆದರೆ ಭೂಮಿ ಜಿಹಾದಿಗಳಿಂದ ಈ ಫಲಕ ತೆಗೆದು ಹಾಕಲಾಯಿತು. ಮತ್ತು ಒಬ್ಬ ಸೂಫಿ ಸಂತರು ಗುಹೆಯಲ್ಲಿ ವಾಸವಾಗಿದ್ದರು, ಅವರು ಮೃತಪಟ್ಟಿರುವದರಿಂದ ಅವರನ್ನು ಗುಹೆಯಲ್ಲಿ ಮಣ್ಣು ಮಾಡಲಾಗಿದೆ, ಎಂದು ಕಟ್ಟುಕಥೆ ಪಸರಿಸಿದರು.
೫. ಸ್ಥಳೀಯ ಆಡಳಿತ ಮಾತ್ರ ಭೂಮಿ ಜಿಹಾದಿಗಳೆದರು ಮಂಡಿ ಊರಿಗೆ. ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ ಇವರು, ಈ ಐತಿಹಾಸಿಕ ಗುಹೆಯ ಪ್ರವೇಶ ದ್ವಾರದ ಒಂದು ಕೀಲಿ ಕೈ ಭಾರತೀಯ ಪುರಾತತ್ವ ಇಲಾಖೆಯ ಬಳಿ ಇರುವುದು ಮತ್ತು ಇನ್ನೊಂದು ಕೀಲಿ ಕೈ ಮುಸಲ್ಮಾನರ ಹತ್ತಿರ ಇದೆ. ಭಾರತೀಯ ಪುರಾತತ್ವ ಇಲಾಖೆ ಶಿಲಾಶಾಸನದ ಕಾಳಜಿ ವಹಿಸುವುದು, ಹಾಗೂ ಮುಸಲ್ಮಾನರು ಗುಹೆಯಲ್ಲಿ ಈಗ ನಿರ್ಮಿಸಿರುವ ಮಸೀದಿಯಲ್ಲಿ ಪ್ರಾರ್ಥನೆ ಮಾಡುವರು, ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|