ಚಲನಚಿತ್ರ ನಟ ಶಾರುಖ್ ಖಾನ್ ಇವರು ಮಕ್ಕಾದಲ್ಲಿ (ಉಮರಾಹ) ದರ್ಶನ ಪಡೆದರು

ಶಾರುಖ್ ಖಾನ್ ಮೂರ್ತಿ ಪೂಜೆ ಮಾಡುತ್ತಿರುವ ಆರೋಪ ಮಾಡುತ್ತ ಮತಾಂಧ ಮುಸಲ್ಮಾನರಿಂದ ಸಾಮಾಜಿಕ ಜಾಲತಾಣದ ಮೂಲಕ ಅವರಿಗೆ ವಿರೋಧ !

(ಉಮರಾಹ ಎಂದರೆ ದರ್ಶನ ಪಡೆಯುವುದು)

ನವ ದೆಹಲಿ – ಚಲನಚಿತ್ರ ನಟ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣ `ಇನ್ಸ್ಟಾಗ್ರಾಮ್’ ನಲ್ಲಿ ಮಕ್ಕಾದ ದರ್ಶನ್ ಪಡೆದಿರುವ ಛಾಯಾಚಿತ್ರ ಪ್ರಸಾರ ಮಾಡಿದ್ದಾರೆ. ಇದರಿಂದ ಕೆಲವು ಮುಸಲ್ಮಾನರು ಅವರನ್ನು ಟೀಕಿಸಿದ್ದಾರೆ. ಹಜ್ (ಯಾತ್ರೆ ) ವರ್ಷದಲ್ಲಿ ಒಂದು ವಿಶಿಷ್ಟ ಸಮಯದಲ್ಲಿ ಮಾಡಲಾಗುತ್ತದೆ; ಆದರೆ ದರ್ಶನ ಯಾವಾಗ ಬೇಕಿದ್ದರೂ ಮಾಡಬಹುದು.

೧. ಅಮಾಲ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಾ, ಶಾರುಖ್ ಖಾನ್ ಮೂರ್ತಿ ಪೂಜೆ ಮಾಡುತ್ತಾರೆ. ಮನೆಯಲ್ಲಿ ಹಿಂದೂ ದೇವತೆಗಳ ಮೂರ್ತಿ ಇಡುತ್ತಾರೆ. ಇಸ್ಲಾಂನಲ್ಲಿ ಇದು ಎಲ್ಲಕ್ಕಿಂತ ದೊಡ್ಡ ಪಾಪವಾಗಿದೆ ಎಂದು ಬರೆದಿದ್ದಾನೆ.

೨. ರಿಝ ವ್ಯಕ್ತಿಯ ಟ್ವಿಟರ್ ಖಾತೆಯಲ್ಲಿ, ಚಲನಚಿತ್ರದಿಂದ ಹಣ ಗಳಿಸುವುದು ಇಸ್ಲಾಂನ ಪ್ರಕಾರ ಹರಾಮ ಆಗಿದೆ, ಇಂತಹ ಸಮಯದಲ್ಲಿ ಅವರು ಉಮರಾಹ ಹೇಗೆ ಸ್ವೀಕರಿಸಲು ಸಾಧ್ಯ ? ಎಂದು ಬರೆದಿದ್ದಾರೆ.

೩. ಮಾರುಪ್ ಅಹಮದ್ ಇವನು, ಶಾರುಖ್ ಅರ್ಧ ಹಿಂದೂ ಮತ್ತು ಅರ್ಧ ಮುಸಲ್ಮಾನ ಇರುವನು. ಅವನು ಪೂರ್ಣವಾಗಿ ಮುಸಲ್ಮಾನವಲ್ಲ. ಆದ್ದರಿಂದ ಅವನು ಉಮರಾಹ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಾನೆ.

ಸಂಪಾದಕೀಯ ನಿಲುವು

ಹಿಂದೂಗಳು ಸರ್ವಧರ್ಮ ಸಮಭಾವದಿಂದ ವರ್ತಿಸುತ್ತಾರೆ ಮತ್ತು ಇತರ ಧರ್ಮದ ಧಾರ್ಮಿಕ ವಿಷಯಕ್ಕೆ ಗೌರವ ನೀಡುತ್ತಾರೆ; ಆದರೆ ಇತರ ಧರ್ಮೀಯರು ಹಾಗೆ ಮಾಡುವುದಿಲ್ಲ, ಇದು ಆಗಾಗ ಕಂಡು ಬರುತ್ತದೆ ಮತ್ತು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಮೌನವಾಗಿರುತ್ತಾರೆ !