‘ಎನ್.ಡಿ.ಟಿ.ವಿ.ಯ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಪ್ರವರ್ತಕ ಸ್ಥಾನಕ್ಕೆ ರಾಜೀನಾಮೆ

ನವದೆಹಲಿ – ‘ಎನ್.ಡಿ.ಟಿ.ವಿ.ಯ ವಾರ್ತಾ ವಾಹಿನಿಯ (ನವದೆಹಲಿ ಟೆಲಿವಿಷನ್ ಲಿಮಿಟೆಡ್) ಸಂಸ್ಥಾಪಕರು ಮತ್ತು ಪ್ರವರ್ತಕ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಪ್ರವರ್ತಕ ಸಂಸ್ಥೆ ’ಆರ್.ಆರ್.ಪಿ.ಆರ್. ’ಹೋಲ್ಡಿಂಗ್ಸ್’ನ ಪ್ರವರ್ತಕ ಹುದ್ದೆಗೆ ರಾಜೀನಾಮೆ ನೀಡಿದರು. ಈ ಸಂಸ್ಥೆಯು ಅದಾನಿ ಸಮೂಹಕ್ಕೆ ಮಾಲೀಕತ್ವದ ಒಂದು ಭಾಗವನ್ನು ಮಾರಾಟ ಮಾಡಿದೆ.

‘ಎನ್.ಡಿ.ಟಿ.ವಿ.ಯ ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಪತ್ರದಲ್ಲಿ, ’ಆರ್.ಆರ್.ಪಿ.ಆರ್. ’ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಸುದೀಪ ಭಟ್ಟಾಚಾರ್ಯ, ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಸಿನ್ಹಾ ಚೆಂಗಲ್ವರ್ಯಾನಾ ಅವರನ್ನು ‘ಆರ್.ಆರ್.ಪಿ.ಆರ್. ಎಚ್.’ನ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.