ಯುನೂಸ ಈತ ವಿಕಾಸ ಗಿರಿಯವರ ಹತ್ಯೆ ಮಾಡಿ ಅವರ ಮೃತದೇಹವನ್ನು ೮೦ ತುಂಡುಗಳನ್ನಾಗಿ ಮಾಡಿದ !

ಕ್ರೂರತೆಯ ಎಲ್ಲ ಸೀಮೆಯನ್ನು ದಾಟಿರುವ ಮತಾಂಧ !

ಸಹೋದರಿಯನ್ನು ಪ್ರೀತಿಸಿದ್ದ ಕಾರಣದಿಂದ ಹತ್ಯೆ ಮಾಡಿರುವುದಾಗಿ ಒಪ್ಪಿಗೆ

ರೀವಾ(ಮಧ್ಯಪ್ರದೇಶ) – ಇಲ್ಲಿಯ ವಿಕಾಸ ಗಿರಿ ಹೆಸರಿನ ಹಿಂದೂ ವ್ಯಕ್ತಿಯನ್ನು ಅವನ ಗುತ್ತಿಗೆದಾರ ಸಹೊದ್ಯೋಗಿ ಯುನೂಸ ಅನ್ಸಾರಿಯು ಹತ್ಯೆ ಮಾಡಿದ್ದಾನೆ. ಯುನೂಸ ಕೇವಲ ಹತ್ಯೆ ಮಾಡಿ ಇಷ್ಟಕ್ಕೇ ಸುಮ್ಮನಾಗಲಿಲ್ಲ, ಅವನು ಗಿರಿಯ ಶವವನ್ನು ೮೦ ತುಂಡುಗಳನ್ನಾಗಿ ಮಾಡಿ ನಗರದ ಹತ್ತಿರವಿರುವ ದೂಧಮುನಿಯಾ ಅರಣ್ಯದಲ್ಲಿ ಎಸೆದಿದ್ದಾನೆ. ಪೊಲೀಸರು ಅರಣ್ಯದಿಂದ ವಿಕಾಸನ ೮೦ ತುಂಡುಗಳನ್ನು ಜಪ್ತಿ ಮಾಡಿಕೊಂಡರು.

೧. ಕಳೆದ ವರ್ಷ ಅಕ್ಟೋಬರ ೩, ೨೦೨೧ ರಂದು ವಿಕಾಸ ಗಿರಿ ಅಕಸ್ಮಿಕವಾಗಿ ನಾಪತ್ತೆಯಾಗಿದ್ದರಿಂದ ಅವನ ತಂದೆಯವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು; ಆದರೆ ಬಹಳಷ್ಟು ಹುಡುಕಾತ ನಡೆಸಿದರೂ ಅವನ ವಿಷಯದಲ್ಲಿ ಏನೂ ಮಾಹಿತಿ ಸಿಕ್ಕಿರಲಿಲ್ಲ. ಒಂದು ದಿನ ಅರಣ್ಯದಿಂದ ಮಾನವನ
ಅವಶೇಷ ಮತ್ತು ಹತ್ತಿರದಲ್ಲಿ ವಿಕಾಸ ಗಿರಿಯ ಆಧಾರಕಾರ್ಡ ಸಿಕ್ಕಿದ್ದರಿಂದ ಈ ಪ್ರಕರಣ ಬಹಿರಂಗವಾಯಿತು.

೨. ವಿಕಾಸ ಗಿರಿಯವರ ಮೃತದೇಹ ಮತ್ತು ಅವರ ಆಧಾರಕಾರ್ಡ ದೊರಕಿದ ಬಳಿಕ ವಿಕಾಸನ ತಂದೆಯವರು ಅವರ ಪುತ್ರನ ಹತ್ಯೆಯಾಗಿರುವ ಬಗ್ಗೆ ದೂರನ್ನು ಪೊಲೀಸರಲ್ಲಿ ದಾಖಲಿಸಿದರು.

೩. ಪೊಲೀಸರು ಯುನೂಸನನ್ನು ೯ ತಿಂಗಳ ಬಳಿಕ ನವೆಂಬರ ೧೪, ೨೦೨೨ ರಂದು ಬಂಧಿಸಿದರು. ಯುನೂಸ ತನ್ನ ಅಳಿಯ ಸರತಾಜ ಮಹಮ್ಮದನ ಸಹಯೋಗದಿಂದ ಈ ಹತ್ಯೆಯನ್ನು ಮಾಡಿರುವುದಾಗಿ ತನಿಖೆಯಿಂದ ಬಯಲಾಗಿದೆ.

೪. ಆರೋಪಿ ಯುನೂಸ ಅನ್ಸಾರಿ, ‘ನಾನು ಮತ್ತು ವಿಕಾಸ ಇಬ್ಬರೂ ಸೇರಿ ಗಿಡನೆಡುವ ಗುತ್ತಿಗೆಯನ್ನು ತೆಗೆದುಕೊಳ್ಳುತ್ತಿದ್ದೆವು. ಈ ಕಾರಣದಿಂದ ವಿಕಾಸ ನನ್ನ ಮನೆಗೆ ಬರುತ್ತಿದ್ದನು. ಆಗ ನನ್ನ ಸಹೋದರಿಯೊಂದಿಗೆ ವಿಕಾಸನ ಪ್ರೇಮ ಸಂಬಂಧ ಬೆಳೆಯಿತು.

೫. ಅಕ್ಟೋಬರ ೩, ೨೦೨೧ ರಂದು ಯುನೂಸ ಮತ್ತು ಅವನ ಅಳಿಯ ಸರತಾಜ ಮನೆಗೆ ಬಂದಾಗ ವಿಕಾಸ ಅವರ ಸಹೋದರಿಯೊಂದಿಗೆ ಇರುವುದು ಅವರಿಗೆ ಕಂಡು ಬಂದಿತು. ಅವರು ವಿಕಾಸನ ತಲೆಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಅವನ ಹತ್ಯೆ ಮಾಡಿದರು. ತದನಂತರ ಮೃತದೇಹವನ್ನು ೮೦ ತುಂಡುಗಳನ್ನಾಗಿ ಮಾಡಿ ಅರಣ್ಯದಲ್ಲಿ ಎಸೆದ.

ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಜಾಲದಲ್ಲಿ ಸೆಳೆದು ಅದನ್ನು ‘ಪ್ರೀತಿ’ ಎಂದು ಸಂಬೋಧಿಸುವ ಮತ್ತು ಲವ್ ಜಿಹಾದ್ ವಿರೋಧಿಸುವವರನ್ನು ಬೆಪ್ಪರನ್ನಾಗಿರುವವರು ಮುಸಲ್ಮಾನರ ಈ ಈ ಕೃತ್ಯಗಳ ವಿಷಯದಲ್ಲಿ ಏನು ಹೇಳುವುದಿದೆ ?

ಹಿಂದೂಗಳನ್ನು ಈ ರೀತಿ ಬರ್ಬರವಾಗಿ ಹತ್ಯೆ ಮಾಡುವ ಮತಾಂಧರಿಗೆ ಗಲ್ಲು ಶಿಕ್ಷೆ ವಿಧಿಸಿರಿ !