ಗುರಿ ಮಾಡುವ ಸಾದ್ಯತೆಯಿಂದ ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನೀಡಲು ಹೆದರುತ್ತಾರೆ ! – ಮುಖ್ಯ ನ್ಯಾಯಾಧೀಶರು ಧನಂಜಯ ಚಂದ್ರಚೂಡ

ಹೊಸ ದೆಹಲಿ – ಅಪರಾಧಿಗಳಿಗೆ ಜಾಮೀನು ನೀಡಲು ನ್ಯಾಯಾಧೀಶರು ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಕಾರಣ ಹೀಗಿಲ್ಲ, ಅವರು ಅಪರಾಧ ಏನಿದೆ, ಇದನ್ನು ತಿಳಿದು ಕೊಳ್ಳುವುದಿಲ್ಲ. ‘ಗಂಭೀರ ಅಪರಾಧದ ಸಂದರ್ಭದಲ್ಲಿ ಅಪರಾಧಿಗೆ ಜಾಮೀನು ನೀಡಿದರೆ, ಅವರನ್ನು ಗುರಿಯಾಗಿಸಲಾಗುತ್ತದೆ’, ಎಂಬ ಭಯ ಅವರಿಗೆ ಇರುತ್ತದೆ, ಎಂದು ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಇವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿ ಬಾರ್ ಕೌನ್ಸಿಲ ಆಫ್ ಇಂಡಿಯಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಉಪಸ್ಥಿತರಿದ್ದರು.