ತಿಹಾರ್ ಜೈಲಿನಲ್ಲಿ ‘ಆಪ್’ನ ಸಚಿವರಿಗೆ ವಿಶೇಷ ಆರೈಕೆ !

  • ಜೈಲಿನಲ್ಲಿ ಸಚಿವರಿಗೆ ಮಸಾಜ್ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನು ಭಾಜಪದಿಂದ ಪ್ರಸಾರ

  • ‘ಆಪ್’ ನಿಂದ ಸ್ಪಷ್ಟನೆ

ನವದೆಹಲಿ – ಆರ್ಥಿಕ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಭಾಜಪ ಆರೋಪಿಸುತ್ತಿತ್ತು. ಜೈಲಿನಲ್ಲಿ ಆತನಿಗೆ ಮಸಾಜ್ ಮಾಡುತ್ತಿರುವ ಸಿಸಿಟಿವಿ ವಿಡಿಯೋವನ್ನು ಇದೀಗ ಭಾಜಪ ಪ್ರಸಾರ ಮಾಡಿದೆ. ಇದಾದ ಬಳಿಕ ಆಮ್ ಆದ್ಮಿ ಪಕ್ಷ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಆಮ್ ಆದ್ಮಿ ಪಕ್ಷದ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಮಾತನಾಡಿ, ಸತ್ಯೇಂದ್ರ ಜೈನ್ ಅವರ ಅನಾರೋಗ್ಯದ ಚಿಕಿತ್ಸೆಯಲ್ಲಿ ಮಸಾಜ್ ಒಂದು ಭಾಗವಾಗಿದೆ. ಅನಾರೋಗ್ಯ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಸಿಸಿಟಿವಿ ವಿಡಿಯೋವನ್ನು ಬಿತ್ತರಿಸುವುದು ಕೆಟ್ಟ ಹಾಸ್ಯ ಮಾಡುವ ಕೆಲಸವನ್ನು ಭಾಜಪಾದವರು ಮಾತ್ರ ಮಾಡಬಹುದು. ಜೈನ್ ಅವರ ಬೆನ್ನುಮೂಳೆಗೆ ಗಾಯವಾಗಿತ್ತು ಎಂದು ಹೇಳಿದರು.