ದೆಹಲಿಯಲ್ಲಿನ ಹಿಂದೂ ಪುರೋಹಿತರ ಅಸಹಾಯಕ ಸ್ಥಿತಿ ತೋರಿಸುವ ಸಾಕ್ಷ್ಯಚಿತ್ರದ ಪ್ರದರ್ಶನ

ನವದೆಹಲಿ – ರಾಜಧಾನಿ ದೆಹಲಿಯಲ್ಲಿನ ಹಿಂದೂ ಪುರೋಹಿತರ ಅಸಹಾಯಕ ಸ್ಥಿತಿ ತೋರಿಸುವ ‘ಈಕ್ವಲ್ ರೈಟ್ಸ್ ಫಾರ್ ಹಿಂದೂಸ್’ (‘ಇ.ಆರ್.ಎಫ್.ಹೇಚ್.’) ನಿರ್ಮಿಸಿರುವ ಮಾಹಿತಿ ಸಾಕ್ಷ್ಯಚಿತ್ರವನ್ನು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಇತ್ತಿಚೆಗೆ ಪ್ರದರ್ಶಿಸಲಾಗಿದೆ. ಈ ಮಾಹಿತಿ ಸಾಕ್ಷ್ಯಚಿತ್ರದಲ್ಲಿ ಹಿಂದೂ ಪುರೋಹಿತರು ಎದುರಿಸುತ್ತಿರುವ ಮೊಕದ್ದಮೆ ಮತ್ತು ಕಷ್ಟಗಳ ಚಿತ್ರಣ ಮಾಡಲಾಗಿದೆ. ಕೋವಿಡ್ ಮಹಾಮಾರಿ ಸಮಯದಲ್ಲಿ ಮುಚ್ಚಲಾಗಿರುವ ದೇವಸ್ಥಾನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ನಿಷೇಧ ಇರುವಾಗ ಪುರೋಹಿತರ ಮೇಲೆ ಕಷ್ಟಗಳು ಇನ್ನಷ್ಟು ಭಯಂಕರವಾಗಿರುವುದು ಅದರಲ್ಲಿ ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರದಲ್ಲಿ ಹಿಂದೂ ಪುರೋಹಿತರ ಕಡೆ ಹಿಂದೂ ಸಮಾಜ ಮತ್ತು ಸರಕಾರ ಇವರಿಂದ ಆಗುತ್ತಿರುವ ನಿರ್ಲಕ್ಷ ಇದರ ಮೇಲೆಯೂ ಬೆಳಕ ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಯಾವ ರೀತಿ ಮುಸಲ್ಮಾನ ಇಮಾಮರಿಗೆ ನೀಡಲಾಗುತ್ತದೆ ಆ ರೀತಿ ಹಿಂದೂ ಪುರೋಹಿತರಿಗೆ ಮತ್ತು ಅರ್ಚಕರಿಗೆ ತಿಂಗಳಿಗೆ ೨೫ ಸಾವಿರ ರೂಪಾಯಿ ಗೌರವಧನ ನೀಡುವಂತೆ ಈ ಮಾಹಿತಿ ಸಾಕ್ಷ್ಯಚಿತ್ರದ ಮೂಲಕ ಸರಕಾರದ ಬಳಿ ವಿನಂತಿಸಲಾಗಿದೆ.

ಸೌಜನ್ಯ : ಹಮ್ ಸಬ್ ಕಾ ಮಂಚ್

ಈ ಸಾಕ್ಷ್ಯಚಿತ್ರದ ವಿಶೇಷ ಪ್ರಸಾರದ ನಂತರ ‘ಇ.ಆರ್.ಎಫ್.ಹೆಚ್.’ನ ಸಂಸ್ಥಾಪಕರಾದ ಮತ್ತು ಕೇಂದ್ರ ತನಿಖಾ ದಳದ ಮಾಜಿ ಹೆಚ್ಚುವರಿ ಸಂಚಾಲಕರಾದ ಎಂ. ನಾಗೇಶ್ವರ ರಾವ್ ಇವರು ಹಿಂದುಗಳಿಗಾಗಿ ಸಮಾನ ಹಕ್ಕು ಚಳವಳಿ ವಿಷಯದ ಸಂಕಲ್ಪನೆ ಸ್ಪಷ್ಟಪಡಿಸಿದರು. ಈ ಸಮಯದಲ್ಲಿ ಸಂವಿಧಾನದ ಕಲಂ ೨೫ ರಿಂದ ೩೦ ಅಡಿಯಲ್ಲಿ ಹಿಂದೂಗಳಿಗೆ ಸಮಾನ ಅಧಿಕಾರ ಹೇಗೆ ನಿರಾಕರಿಸಲಾಗಿದೆ, ಈ ವಿಷಯವಾಗಿ ಕೂಡ ಅವರು ಹೇಳಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿ, ಹೆಸರಾಂತ ವಿದ್ವಾನ್ ಮತ್ತು ಭಾಷಾ ತಜ್ಞರಾದ ಪ್ರಾ. ಕಪಿಲ ಕಪೂರ ಇವರು ತಮ್ಮ ಭಾಷಣದಲ್ಲಿ ಇಸ್ಲಾಮಿ ದಾಳಿಕೊರರಿಂದ ಭಾರತದಲ್ಲಿ ದಂಗೆ ನಡೆಸುತ್ತಿರುವಾಗ ಹಿಂದೂ ಧರ್ಮಗುರುಗಳು ಮತ್ತು ಪುರೋಹಿತರು ಇವರು ಹಿಂದೂ ಧರ್ಮ ಮತ್ತು ಸಂಸ್ಕೃತಿ ಯಾವ ರೀತಿ ಕಾಪಾಡಿದ್ದಾರೆ, ಎಂಬುದನ್ನು ಹೇಳಿದರು.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಪುರೋಹಿತರ ಮೇಲೆ ಈ ಸ್ಥಿತಿ ಬರುವುದು ಮತ್ತು ಅದರ ಮೇಲೆ ಬೆಳಕು ಚೆಲ್ಲುವ ಮಾಹಿತಿ ನೀಡುವ ಚಲನಚಿತ್ರ ಪ್ರದರ್ಶಿಸಬೇಕಾಗುವುದು, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !