ಮಹಮ್ಮದ್ ಕಲಿಮ ಇವನು ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದ ಸ್ವಂತ ೧೬ ವರ್ಷದ ತಂಗಿಯ ಕತ್ತು ಕೊಯ್ದು ಹತ್ಯೆ

ಮುಸಲ್ಮಾನರ ಕಟ್ಟರವಾದ !

ಮಧ್ಯದಲ್ಲಿ ಆರೋಪಿ ಮಹಮ್ಮದ್ ಕಲೀಮ

ಗೊಂಡ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಗೊಂಡದಲ್ಲಿ ಮಹಮ್ಮದ್ ಕಲೀಮ ಎಂಬ ಮತಾಂಧನು ತನ್ನ ಸ್ವಂತ ೧೬ ವರ್ಷದ ತಂಗಿಯು ಅರುಣ ಎಂಬ ಹಿಂದೂ ಹುಡುಗನ ಪ್ರೀತಿಸಿದ ತಪ್ಪಿಗಾಗಿ ಮಾರಕಾಸ್ತ್ರದಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಈ ಘಟನೆಯ ನಂತರ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ ಹತ್ಯೆಗಾಗಿ ಬಳಸಿರುವ ಶಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಈ ವಿಷಯವಾಗಿ ಒಂದು ವಾರ್ತೆಯ ಪ್ರಕಾರ, ತಸ್ಲೀಮಾ ಎಂಬ ಮಹಿಳೆ ಆಕೆಯ ೧೬ ವರ್ಷದ ಹತ್ಯೆಗೀಡಾದ ಮಗಳು ಮತ್ತು ೨೨ ವರ್ಷದ ದೊಡ್ಡ ಮಗ ಮಹಮ್ಮದ್ ಕಲಿಮ ಇವರ ಜೊತೆ ಗೊಂಡಾದಲ್ಲಿ ಒಂದು ಮನೆಯಲ್ಲಿ ವಾಸವಾಗಿದ್ದರು. ನವಂಬರ್ ೨ ರ ಸಂಜೆ ತಸ್ಲಿಮ ಮನೆಗೆ ಹಿಂತಿರುಗಿದಾಗ ಆಕೆ ಮನೆಯ ಬಾಗಿಲು ಮುಚ್ಚಿರುವುದು ಕಂಡಳು. ಬಹಳ ಸಮಯದವರೆಗೆ ಬಾಗಿಲು ಬಡೆದ ನಂತರ ಬಾಗಿಲು ತೆರೆದಿರುವುದರಿಂದ ಆಕೆ ಮಗಳನ್ನು ವಿಚಾರಿಸಿದಳು. ಅದೇ ಸಮಯಕ್ಕೆ ಆದೆ ಗ್ರಾಮದ ಹುಡುಗ ಅರುಣ ಇವನು ಅವರ ಮನೆಯಲ್ಲಿರುವುದು ಕಾಣಿಸಿತು. ತಸ್ಲೀಮಾನನ್ನು ನೋಡಿದ ಕ್ಷಣ ಅವನು ಅಲ್ಲಿಂದ ಓಡಿ ಹೋದನು. ಅದರ ನಂತರ ತಸ್ಲೀಮಾಳು ಕರೆ ಮಾಡಿ ಮಹಮ್ಮದ್ ಕಲಿಮ ಇವನಿಗೆ ಘಟನೆಯ ಮಾಹಿತಿ ನೀಡಿದಳು. ಕೆಲವೇ ಸಮಯದಲ್ಲಿ ಕಲಿಮ ಮನೆಗೆ ಬಂದನು ಮತ್ತು ತಂಗಿಯ ಜೊತೆ ವಾದ ಮಾಡಿದನು. ಆ ಸಮಯದಲ್ಲಿ ಅವನ ತಂಗಿ ಪ್ರಶ್ನೆಗೆ ಪ್ರತ್ಯುತ್ತರ ನೀಡಿದಳು. ಇದರ ಬಗ್ಗೆ ಕೋಪ ಬಂದು ಕಲೀಮನು ಮಾರಕಾಸ್ತ್ರದಿಂದ ಆಕೆಯ ಕತ್ತಿನ ಮೇಲೆ ದಾಳಿ ಮಾಡಿದನು. ಆದ್ದರಿಂದ ಆಕೆಯ ರುಂಡ ಮುಂಡದಿಂದ ಬೇರೆ ಆಯಿತು.

ಈ ಘಟನೆಯ ನಂತರ ಮೃತನ ತಾಯಿ ತಸ್ಲಿಮ ಇವಳು ಕಟರಾ ಮಾರುಕಟ್ಟೆ ಪೊಲೀಸ ಠಾಣೆಗೆ ತನ್ನ ಮಗನ ವಿರುದ್ಧ ದೂರು ದಾಖಲಿಸಿದಳು. ಅದರ ನಂತರ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಮೃತ ದೇಹ ವಶಕ್ಕೆ ಪಡೆದು ಶವ ಪರೀಕ್ಷೆಗಾಗಿ ಕಳುಹಿಸಿದರು. ಪೊಲೀಸರು ಕ್ರಮ ಕೈಗೊಳ್ಳುತ್ತಾ ಆರೋಪಿ ಮಹಮ್ಮದ್ ಕಲಿಮ ಇವನನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ಪ್ರಕರಣದಲ್ಲಿ ಹಿಂದೂಗಳಿಗೆ ‘ಪ್ರೀತಿಗೆ ಧರ್ಮ ಇರುವುದಿಲ್ಲ’ ಎಂದು ಉಪದೇಶ ನೀಡುವವರು ಈಗ ಈ ಪ್ರಕರಣದಲ್ಲಿ ಮೌನವೇಕೆ ?