ಜ್ಞಾನವಾಪಿ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸೇರ್ಪಡೆ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ವಾರಣಾಸಿ (ಉತ್ತರಪ್ರದೇಶ) – ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಇಲ್ಲಿನ ಜ್ಞಾನವಾಪಿ ಪ್ರಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಪ್ರಕರಣದ ಕಕ್ಷಿದಾರರಲ್ಲಿ ಒಂದಾಗಿರುವ ‘ವಿಶ್ವ ವೈದಿಕ ಸನಾತನ ಸಂಘ’ವು ಯೋಗಿ ಆದಿತ್ಯನಾಥ ಅವರಿಗೆ ‘ಪವರ್ ಆಫ್ ಅಟಾರ್ನಿ’ (ನಿಯಮಗಳು ಮತ್ತು ಷರತ್ತುಗಳೊಂದಿಗೆ ಸಂಪೂರ್ಣ ಅಧಿಕಾರ) ನೀಡಲಿದೆ. ಜ್ಞಾನವಾಪಿಯಲ್ಲಿರುವ ಶಿವಲಿಂಗದ ‘ಕಾರ್ಬನ್ ಡೇಟಿಂಗ್’ ಮಾಡಬಾರದು ಎಂದು ಇದೇ ತಂಡ ನ್ಯಾಯಾಲಯದಲ್ಲಿ ಆಗ್ರಹಿಸಿತ್ತು.

ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ ವಿಸೇನ್ ಮಾತನಾಡಿ, ಜ್ಞಾನವಾಪಿ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳೂ ನಮ್ಮಿಂದಲೇ ದಾಖಲಾಗಿದ್ದವು; ಆದರೆ ಪ್ರಸ್ತುತ ನಾವು ಕೇವಲ ೫ ಪ್ರಕರಣಗಳನ್ನು ನೋಡುತ್ತಿದ್ದೇವೆ. ಈ ಐದೂ ಪ್ರಕರಣಗಳ ಎಲ್ಲಾ ಅಧಿಕಾರಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ನೀಡಲಾಗುವುದು. ಈ ಸಂಬಂಧ ಕಾನೂನು ಪ್ರಕ್ರಿಯೆ ಮುಂದುವರಿದಿದ್ದು, ಅದನ್ನು ನವೆಂಬರ್ ೧೫ ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.