ಭಾರತವೇ ಈಗ ಬ್ರಿಟನನ್ನು ವಸಾಹತು ಮಾಡಿಕೊಳ್ಳಬೇಕು!

ಬ್ರಿಟನ್‌ನ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಹಾಸ್ಯನಟ ಟ್ರೆವರ್ ನೋಹಾರವರ ಹೇಳಿಕೆ ಇರುವ 3 ವರ್ಷ ಹಿಂದಿನ ವೀಡಿಯೊ ಪ್ರಸಾರವಾಗುತ್ತಿದೆ !

ಲಂಡನ (ಬ್ರಿಟನ) – ಬ್ರಿಟನಿನ ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಸಾಧ್ಯತೆಯನ್ನು ಊಹಿಸಲಾಗಿತ್ತು. ಕಳೆದ 6 ವರ್ಷಗಳಲ್ಲಿ ಬ್ರಿಟನಿನಲ್ಲಿ 4 ಪ್ರಧಾನಿಗಳು ಆಗಿ ಹೋಗಿದ್ದಾರೆ. ಬ್ರಿಟನಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ‘ದಕ್ಷಿಣ ಆಫ್ರಿಕಾದ ಹಾಸ್ಯನಟ ಟ್ರೆವರ್ ನೋಹಾ ಅವರಿಗೆ ಈ ಪರಿಸ್ಥಿತಿಯ ಬಗ್ಗೆ ಮೊದಲೇ ತಿಳಿದಿತ್ತು’ ಎಂದು ಹೇಳಲಾಗುತ್ತಿದೆ; ಏಕೆಂದರೆ ಅವರ 2019 ರ ವೀಡಿಯೊ ಒಂದು ಈಗ ಪುನಃ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಅವರು ‘ಭಾರತವೇ ಈಗ ಬ್ರಿಟನ್‌ನ ವ್ಯವಹಾರಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಅದನ್ನು ಸರಿಪಡಿಸಬೇಕು’ ಎಂಬ ಹೇಳಿಕೆ ನೀಡುತ್ತಿರುವುದು ಕಾಣುತ್ತಿದೆ.

೧. 2019 ರಲ್ಲಿ, ಬ್ರಿಟನ್ ಯುರೋಪಿಯನ್ ಒಕ್ಕೂಟವನ್ನು ತೊರೆಯುವ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಬ್ರಿಟನ್‌ನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಟ್ರೆವರ್ ನೋಹಾರವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ನನಗೆ ಬ್ರಿಟನಿನ ವಸಾಹತು ಆಗಿದ್ದ ಯಾವುದಾದರೊಂದು ದೇಶವು ಅದನ್ನೇ ವಸಾಹತು ಮಾಡಿಕೊಳ್ಳಬೇಕು ಎಂದು ಅನಿಸುತ್ತದೆ; ಏಕೆಂದರೆ ಪರಿಸ್ಥಿತಿಯು ನಿಜವಾಗಿಯೂ ಕೈ ಮೀರಿದೆ. ಬ್ರಿಟಿಷರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದು ತಿಳಿಯುತ್ತಿಲ್ಲ. ಭಾರತವು ಬ್ರಿಟನ್‌ಗೆ ಬಂದು ‘ನೋಡಿ, ಇದನ್ನು ಮಾಡುವುದರಲ್ಲಿ ನಮಗೆ ಸ್ವಲ್ಪವೂ ಸಂತೋಷವಾಗುತ್ತಿಲ್ಲ; ಆದರೆ ನಿಮಗೆ ಕಾರುಭಾರನ್ನು ಹೇಗೆ ನಿರ್ವಹಿಸಬೇಕು ? ಎಂಬುದೇ ತಿಳಿದಿಲ್ಲ. ನಾವು ಇವೆಲ್ಲವನ್ನೂ ಕೈಗೆತ್ತಿಕೊಂಡು ಸರಿಪಡಿಸಬೇಕಾಗಿದೆ’ ಎಂದು ಅವರು ಹೇಳುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.

೨. ಬ್ರಿಟಿಷರು 150 ವರ್ಷಗಳ ಕಾಲ ಭಾರತವನ್ನು ಆಳಿದರು. ಅವರು ‘ಭಾರತದ ಜನರಿಗೆ ಕಾರುಭಾರನ್ನು ಸರಿಯಾಗಿ ನಿರ್ವಹಿಸಲು ಬರುವುದಿಲ್ಲ’ ಎಂದು ಹೇಳುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ನೀಡುವಾಗಲೂ ಬ್ರಿಟಿಷರು ‘ಇಲ್ಲಿನ ಪ್ರಜಾಪ್ರಭುತ್ವ ಹೆಚ್ಚು ಕಾಲ ಉಳಿಯಲಾರದು’ ಎಂದು ವ್ಯಂಗ್ಯವಾಡುವ ಮೂಲಕ ಭಾರತವನ್ನು ಕೆರಳಿಸಲು / ಪ್ರಚೋದಿಸಲು ಯತ್ನಿಸಿದ್ದರು.