ದಿಬ್ರುಗಢ (ಅಸ್ಸಾಮ) ನಲ್ಲಿ, ಅಪರಿಚಿತ ವ್ಯಕ್ತಿಗಳಿಂದ ಶಿವಾಲಯವನ್ನು ಧ್ವಂಸಗೊಳಿಸಿ ಸುಟ್ಟುಹಾಕುವ ಪ್ರಯತ್ನ !

ದಿಬ್ರುಗಢ್ (ಅಸ್ಸಾಮ) – ಅಕ್ಟೋಬರ್ 20 ರ ಮುಂಜಾನೆ, ಅಪರಿಚಿತ ವ್ಯಕ್ತಿಗಳು ಚಬುವಾ ಸ್ಮಶಾನದ ಬಳಿಯಿರುವ ಶಿವಾಲಯವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಹಿಂದೂಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸಿ ಕ್ರಮಕೈಗೊಳ್ಳಲು ಆಗ್ರಹಿಸಿದರು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರಗೊಂಡ ಕ್ರೈಸ್ತರು ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ‘ಲೀಗಲ್ ರೈಟ್ಸ್ ಆಬ್ಸರ್ವೇಟರಿ’ ಎಂಬ ಸಂಸ್ಥೆಯು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಪೊಲೀಸ್ ಮಹಾನಿರ್ದೇಶಕರಲ್ಲಿ ಟ್ವೀಟ್ ಮೂಲಕ ಮನವಿ ಮಾಡಿದೆ.