ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಜ್ಯೋತಿಷ್ಯ ಪೀಠದ ಶಂಕರಾಚಾರ್ಯರೆಂದು ಪಟ್ಟಾಭಿಷೇಕ ಮಾಡಿಕೊಳ್ಳುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆ

(ಪಟ್ಟಾಭಿಷೇಕ – ಪೀಠದ ಮೇಲೆ ಕುಳ್ಳಿರಿಸುವ ವಿಶಿಷ್ಟವಾದ ಪದ್ಧತಿ )


ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಉತ್ತರಾಖಂಡದಲ್ಲಿನ ಜ್ಯೋತಿಷ್ಯ ಪೀಠದ ಹೊಸ ಶಂಕರಚಾರ್ಯರೆಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ಪಟ್ಟಾಭಿಷೇಕಕ್ಕೆ ತಡೆ ನೀಡಿದೆ. ಈ ವಿಷಯವಾಗಿ ದಾಖಲಿಸಲಾಗಿರುವ ಮನವಿಯ ಮೇಲೆ ಈ ಆದೇಶ ನೀಡಲಾಗಿದೆ.

೧. ಮನವಿಯಲ್ಲಿ ಹೇಳಲಾಗಿದೆ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ದಿವಂಗತ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರಿಂದ ಜ್ಯೋತಿಷ್ಯ ಪೀಠದ ಉತ್ತರಾಧಿಕಾರಿ ಎಂದು ನೇಮಕಗೊಂಡಿರುವ ಸುಳ್ಳು ದಾವೆ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು (ಕಾಗದಪತ್ರಗಳು ) ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾಗಿದೆ.

೨. ಇದಕ್ಕೆ ಸಂಬಂಧಪಟ್ಟ ಪುರಿಯಲ್ಲಿನ ಗೋವರ್ಧನ ಪೀಠದ ಶಂಕರಾಚಾರ್ಯರಿಂದ ಒಂದು ಪ್ರತಿಜ್ಞಾಪತ್ರ ಪ್ರಸ್ತುತ ಪಡಿಸಲಾಗಿದೆ. ಇದರಲ್ಲಿ, ಸ್ವಾಮಿ ಅವಿಮುಕ್ತೇಶ್ವರಾನಂದ ಇವರು ಜ್ಯೋತಿಷ್ಯ ಪೀಠದ ಹೊಸ ಶಂಕರಾಚಾರ್ಯರೆಂದು ನೇಮಕಗೊಳಿಸಲು ನಾವು ಸಮರ್ಥನೆ ನೀಡಿಲ್ಲ ಎಂದು ಹೇಳಲಾಗಿದೆ.