ಭಾರತದಲ್ಲಿ ಇನ್ನು ಮುಂದೆ ೩ ಜಿ ಮತ್ತು ೪ ಜಿ ಸಂಚಾರವಾಣಿಗಳನ್ನು ತಯಾರಿಸುವುದಿಲ್ಲ !

ನವ ದೆಹಲಿ : ಸಂಚಾರವಾಣಿ ಉತ್ಪಾದನಾ ಸಂಸ್ಥೆಗಳು ೧೦,೦೦೦ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ೩ ಜಿ ಮತ್ತು ೪ ಜಿ ಇಂಟರ್ನೆಟ್ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಪೋನ್‌ಗಳನ್ನು ಉತ್ಪಾದನೆ ಮಾಡುವುದನ್ನು ನಿರ್ಧರಿಸಿದೆ. ಅವರು ಈಗ ೧೦ ಸಾವಿರಕ್ಕೂ ಹೆಚ್ಚು ಮೌಲ್ಯದ ೫ ಜಿ ಸ್ಮಾರ್ಟ್‌ಪೋನ್‌ಗಳನ್ನು ತಯಾರಿಸಲಿದ್ದಾರೆ. ದೂರಸಂಪರ್ಕ ಇಲಾಖೆ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೊಬೈಲ್ ಆಪರೇಟರ್‌ಗಳು ಮತ್ತು ಸ್ಮಾರ್ಟ್‌ಫೋನ್ ಉತ್ಪಾದನೆ ಮಾಡುವ ಸಂಸ್ಥೆಗಳೊಂದಿಗೆ ಸಭೆ ನಡೆಸಿತು. ಮುಂದಿನ ಮೂರು ತಿಂಗಳಲ್ಲಿ ೫ ಜಿ ಸೇವೆಗಳಿಗೆ ಬದಲಾಯಿಸುವಂತೆ ಈ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ. ಪ್ರಸ್ತುತ, ಭಾರತದಲ್ಲಿ ೭೫ ಕೋಟಿ ಜನರು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದಾರೆ. ಇವರಲ್ಲಿ ೧೦ ಕೋಟಿ ಜನರು ೫ ಜಿ ಮೊಬೈಲ್ ಬಳಸುತ್ತಿದ್ದಾರೆ. ಅದೇ ಸಮಯದಲ್ಲಿ ೩೫ ಕೋಟಿ ಜನರು ಇನ್ನೂ ೩ ಜಿ ಮತ್ತು ೪ ಜಿ ಸೆಟ್‌ಗಳನ್ನು ಬಳಸುತ್ತಾರೆ.