‘ಮಿಲಾದ-ಉನ-ನಬೀ’ಯ ಸಮಯದಲ್ಲಿ ಮತಾಂಧ ಮುಸಲ್ಮಾನರ ಸ್ವೇಚ್ಛಾಚಾರ !
(ಸರ ತನ ಸೆ ಜುದಾ ಅಂದರೆ ತಲೆಯನ್ನು ದೇಹದಿಂದ ಬೇರ್ಪಡಿಸುವುದು)
(’ಮಿಲಾದ-ಉನ-ನಬೀ’ ಅಂದರೆ ಮಹಂಮದ ಪೈಗಂಬರರ ಜನ್ಮೋತ್ಸವ)

ಲಕ್ಷ್ಮಣಪುರಿ (ಉತ್ತರಪ್ರದೇಶ) : ‘ಮಿಲಾದ-ಉನ-ನಬೀ’ಯ ಮುಸಲ್ಮಾನರ ಧಾರ್ಮಿಕ ಮಹೋತ್ಸವದ ದಿನ ಅಂದರೆ ಅಕ್ಟೋಬರ್ ೯ರಂದು ದೇಶದಲ್ಲಿನ ವಿವಿಧ ಭಾಗಗಳಲ್ಲಿ ‘ಸರ ತನ ಸೆ ಜುದಾ’ನ ಘೋಷಣೆಗಳು ಕೇಳಿಬಂದವು. ಇವುಗಳಲ್ಲಿ ರಾಜಸ್ಥಾನದ ಜೋಧಪುರ ಮತ್ತು ಉದಯಪುರ, ಉತ್ತರಪ್ರದೇಶದಲ್ಲಿನ ಅಮೇಠಿ ಹಾಗೂ ಆಝಮಗಡ, ಗುಜರಾತನ ಊನಾ, ಹಾಗೆಯೇ ಮಧ್ಯಪ್ರದೇಶದಲ್ಲಿನ ಖಂಡವಾ ಹಾಗೂ ಮಹಾರಾಷ್ಟ್ರದಲ್ಲಿನ ಅಮರಾವತಿಗಳು ಸೇರಿವೆ. ಹಿಂದುತ್ವನಿಷ್ಠ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸಿದ್ದಾರೆ. ಪೊಲೀಸರು ಈ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಉತ್ತರಪ್ರದೇಶ
ಉತ್ತರಪ್ರದೇಶದ ಆಝಮಗಡದಲ್ಲಿ ‘ಮಿಲಾದ-ಉನ-ನಬೀ’ಯ ಸಮಯದಲ್ಲಿ ನಡೆಸಲಾದ ಫೇರಿಯಲ್ಲಿ ‘ಸರ ತನ ಸೆ ಜುದಾ’ನ ಘೋಷಣೆ ನೀಡಲಾಯಿತು. ನಗರದಲ್ಲಿನ ಹಳೆಯ ಕೋತವಾಲಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಈ ಸಮಯದಲ್ಲಿ ‘ಅಲ್ಲಾ ಹು ಅಕಬರ’ ರಂಬ ಘೋಷಣೆ ನೀಡಲಾಗಿದೆ. ಈ ವಿಡಿಯೋ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿದೆ. ಈ ಘಟನೆಯ ವಿರುದ್ಧ ಪೊಲೀಸರು ೩ ಅಪ್ರಾಪ್ತ ಹುಡುಗರನ್ನು ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳನ್ನು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಧ್ಯಪ್ರದೇಶ
ಮಧ್ಯಪ್ರದೇಶದ ಖಂಡವಾದಲ್ಲಿಯೂ ಕೂಡ ‘ಸರ್ ತನ್ ಸೇ ಜೂದಾ’ ಈ ಘೋಷಣೆ ಕೂಗುವ ವಿಡಿಯೋ ಪ್ರಸಾರವಾಗಿದೆ. ಈ ಸಮಯದಲ್ಲಿ ರಸ್ತೆಯಲ್ಲಿ ಹಸಿರು ಬಾವುಟ ಹಾರಿಸಲಾಗಿದೆ. ಸ್ಥಳೀಯ ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಪೊಲೀಸರು ಘೋಷಣೆ ಕೂಗುವ ೪ ಯುವಕರನ್ನು ಅಕ್ಟೋಬರ್ ೯ ರ ರಾತ್ರಿ ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ವಿರೋಧ ವ್ಯಕ್ತಪಡಿಸುವುದಕ್ಕಾಗಿ ಅಸಂಖ್ಯ ಮುಸಲ್ಮಾನ ಮಹಿಳೆಯರು ಪೊಲೀಸ ಠಾಣೆ ಎದುರು ಧರಣೀ ಆಂದೋಲನ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ನಗರದ ಕಾಜಿ ಕೂಡ (ಮುಸಲ್ಮಾನ ಸಾಂಪ್ರದಾಯ ಶಾಸ್ತ್ರನುಸಾರ ತೀರ್ಪು ನೀಡುವ ನ್ಯಾಯಾಧೀಶ) ಇದರಲ್ಲಿ ಸಹ ಭಾಗಿಯಾಗಿದ್ದನು. ಆಂದೋಲನಕಾರರ ಒತ್ತಡಕ್ಕೆ ಮಣಿದು ತಡರಾತ್ರಿ ಪೊಲೀಸರು ನಾಲ್ಕು ಆರೋಪಿಗಳನ್ನು ಬಿಡುಗಡೆ ಮಾಡಬೇಕಾಯಿತು. ಈ ಆಂದೋಲನದ ವಿಡಿಯೋ ಎಲ್ಲೆಡೆ ಪ್ರಸಾರಗೊಳ್ಳುತ್ತಿದೆ. ಈ ಪ್ರಕರಣದಲ್ಲಿ ರಾಜ್ಯದ ಗೃಹ ಸಚಿವ ಡಾ. ನರೋತ್ತಮ ಮಿಶ್ರ ಇವರು, ದೂರು ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಗುಜರಾತ
ಗುಜರಾತನ ಊನಾದಲ್ಲಿ ನಡೆದಿರುವ ಆಂದೋಲನದ ಸಮಯದಲ್ಲಿ ‘ಸರ್ ತನ್ ಸೇ ಜೂದಾ’ ಈ ಘೋಷಣೆ ನೀಡುವವರಲ್ಲಿ ಕೆಲವು ಅಪ್ರಾಪ್ತ ಮಕ್ಕಳು ಇರುವ ವಿಡಿಯೋ ಬೆಳಕಿಗೆ ಬಂದಿದೆ. ಮತಾಂಧ ಮುಸಲ್ಮಾನರು ಇಲ್ಲಿಯ ಪೊಲೀಸ ಠಾಣೆಯ ಎದುರಿನಿಂದ ಹೋಗುತ್ತಿರುವ ಒಂದು ವಿಡಿಯೋ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿನ ಅಮರಾವತಿಯಲ್ಲಿ ಡಿಜೆ ಮೇಲೆ ‘ಸರ್ ತನ್ ಸೇ ಜೂದಾ’ ಈ ಹಾಡು ನುಡಿಸುತ್ತಿರುವುದು ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಮತಾಂಧ ಮುಸಲ್ಮಾನರು ಈ ಹಾಡಿನ ಜೊತೆ ತಾವು ಹಾಡುವುದು ವಿಡಿಯೋದಲ್ಲಿ ಕಾಣುತ್ತಿದೆ. ಇಲ್ಲಿಯೂ ಕೂಡ ಹಸಿರು ಬಾವುಟ ಕೈಯಲ್ಲಿ ಹಿಡಿದಿರುವ ಅನೇಕ ಅಪ್ರಾಪ್ತ ಮಕ್ಕಳು ಕಾಣುತ್ತಿವೆ. ಇಲ್ಲಿಯ ಭಾಜಪದ ರಾಜ್ಯಸಭೆಯಲ್ಲಿ ಶಾಸಕ ಡಾ. ಅನಿಲ ಬೋಂಡೇ ಇವರು, ಘೋಷಣೆ ಕೂಗುವ ಮುಸಲ್ಮಾನ್ ಇವರು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ಗೆ ಸಂಬಂಧ ಪಟ್ಟವರಾಗಿದ್ದಾರೆ ಎಂದು ಹೇಳಿದರು.
ಇದೆ ರೀತಿ ಉತ್ತರ ಪ್ರದೇಶದ ಅಮೇಠಿ ಮತ್ತು ರಾಜಸ್ಥಾನದ ಜೋಧಪುರದಲ್ಲಿಯೂ ‘ಸರ್ ತನ್ ಸೇ ಜೂದಾ’ದ ಘೋಷಣೆ ನೀಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ಸಂಪಾದಕೀಯ ನಿಲುವು
|
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!