ಛತ್ತೀಸ್ ಗಡನ ಮುಖ್ಯಮಂತ್ರಿ ಭೂಪೇಶ ಬಘೆಲ ಇವರ ಆಪ್ತ ಅಧಿಕಾರಿಗಳ ಮನೆಯ ಮೇಲೆ ಈಡಿಯಿಂದ ದಾಳಿ

ಛತ್ತೀಸ್ ಗಡ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ನಾಯಕ ಭೂತೇಶ ಬಘೆಲ

ರಾಯಪುರ (ಛತ್ತಿಸ್ ಗಡ) – ಆದಾಯಕ್ಕಿಂತ ಹೆಚ್ಚಿನ ಸಂಪತ್ತಿಯ ಪ್ರಕರಣದಲ್ಲಿ ಛತ್ತೀಸ್ ಗಡ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ಸಿನ ನಾಯಕ ಭೂತೇಶ ಬಘೆಲ ಇವರ ಕೆಲವು ಆಪ್ತ ಅಧಿಕಾರಿಗಳ ಮನೆಯ ಮೇಲೆ ಈಡಿ ಇಂದ ಅಕ್ಟೋಬರ್ ೧೧ ರಂದು ಬೆಳಗ್ಗಿನ ಜಾವ ೫ ಗಂಟೆಗೆ ದಾಳಿ ನಡೆಸಲಾಗಿದೆ. ಇದರಲ್ಲಿ ಹಿರಿಯ ಸರಕಾರಿ ಅಧಿಕಾರಿ ಸೌಮ್ಯಾ ಚೌರಾಸಿಯ, ರಾಯಗಡದ (ಛತ್ತೀಸ್‌ಗಡ) ಜಿಲ್ಲಾಧಿಕಾರಿ ರಾನು ಸಾಹು, ರಾಯಪುರದಲ್ಲಿನ ಕಲ್ಲಿದ್ದಲು ವ್ಯಾಪಾರಿ ಸೂರ್ಯಕಾಂತ ತಿವಾರಿ, ಮಹಾಸಮುಂದ ಇಲ್ಲಿಯ ಕಾಂಗ್ರೆಸ್ಸಿನ ಮಾಜಿ ಶಾಸಕ ಅಗ್ನಿ ಚಂದ್ರಾಕರ, ಗಣಿ ಇಲಾಖೆಯ ಪ್ರಮುಖ ಜೆ.ಪಿ. ಮೌರ್ಯ ಸಹಿತ ರಾಯಗಡನ ಗಾಂಜಾ ಚೌಕ ಇಲ್ಲಿಯ ನಿವಾಸಿ ನವನೀತ ತಿವಾರಿ, ಪ್ರಿನ್ಸ್ ಭಾಟಿಯಾ, ಲೆಕ್ಕ ಪರಿಶೋಧಕ ಸುನಿಲ್ ಅಗ್ರವಾಲ ಇವರ ಸಮಾವೇಶವಿದೆ. ಈ ಮೊದಲು ಇದರಲ್ಲಿನ ಅನೇಕರ ಮೇಲೆ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿತ್ತು.

‘ಭಾಜಪದಿಂದ ತನಿಖಾ ಇಲಾಖೆಯ ದುರುಪಯೋಗ !’ (ಅಂತೆ) – ಮುಖ್ಯಮಂತ್ರಿ ಬಘೇಲ

ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಮುಖ್ಯಮಂತ್ರಿ ಭೂಪೇಶ್ ಬಘೆಲ ಇವರು, ‘ಭಾಜಪ ನಮ್ಮ ಜೊತೆಗೆ ನೇರ ಹೋರಾಡಲು ಸಾಧ್ಯವಿಲ್ಲ; ಆದ್ದರಿಂದ ಅವರು ಒಮ್ಮೆ ಈಡಿ, ಮತ್ತೊಮ್ಮೆ ತೆರಿಗೆ ಇಲಾಖೆ ಇವರನ್ನು ಉಪಯೋಗಿಸಿ ನಮ್ಮ ಜೊತೆ ಹೋರಾಡಲು ಪ್ರಯತ್ನಿಸುತ್ತಾರೆ. ಚುನಾವಣೆ ಹೇಗೆ ಹತ್ತಿರ ಬರುತ್ತದೆ ಆ ಸಮಯದಲ್ಲಿ ತನಿಖಾ ಇಲಾಖೆ ಪದೇ ಪದೇ ಕ್ರಿಯಾಶೀಲವಾಗುತ್ತದೆ. ಭಾಜಪ ಇಲಾಖೆಯ ದುರುಪಯೋಗ ಮಾಡುತ್ತಿದೆ ಎಂದು ಹೇಳಿದರು.