ಕಾನಪುರದಲ್ಲಿ ಟ್ರ್ಯಾಕ್ಟರ್ ಕೆರೆಗೆ ಬಿದ್ದು ೨೬ ಜನರು ಸಾವನ್ನಪ್ಪಿದ್ದಾರೆ

ಟ್ರ್ಯಾಕ್ಟರ್‌ನ ಚಾಲಕ ಮಧ್ಯಪಾನ ಮಾಡಿದ್ದನು !

ಕಾನಪುರ (ಉತ್ತರಪ್ರದೇಶ) – ಇಲ್ಲಿ ಅಕ್ಟೋಬರ್ ೧ ರಂದು ರಾತ್ರಿ ಟ್ರ್ಯಾಕ್ಟರ್ ಕೆರೆಗೆ ಬಿದ್ದಿರುವುದರಿಂದ ೨೬ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ೧೩ ಮಹಿಳೆಯರು ಮತ್ತು ೧೩ ಮಕ್ಕಳಿದ್ದರೂ. ಇವರೆಲ್ಲರೂ ಕೋರಠಾ ಗ್ರಾಮದ ನಿವಾಸಿಗಳಾಗಿದ್ದರು. ಈ ಟ್ರ್ಯಾಕ್ಟರ್ ನಲ್ಲಿ ೪೫ ಜನರಿದ್ದರು. ಈ ಜನರು ಉನ್ನಾವದ ಚಂದ್ರಿಕಾ ದೇವಿ ದೇವಸ್ಥಾನದಿಂದ ಮುಂಡನ ವಿಧಿ(ಮೂಡಿ ಕೊಡುವುದು) ಮಾಡಿಕೊಂಡು ಕಾನುಪುರಕ್ಕೆ ಹಿಂತಿರುಗುತ್ತಿದ್ದರು. ಟ್ರ್ಯಾಕ್ಟರ್ ಚಾಲಕನು ಮಧ್ಯಪಾನ ಮಾಡಿದ್ದನು. ಅವನು ಮೊದಲು ವಾಹನ ಓಡಿಸಲು ನಿರಾಕರಿಸಿದ್ದನು. ಅವನ ಮಗನ ಮುಂಡನ ಕೂಡ ಇತ್ತು. ಅವನು ಈ ಅಪಘಾತದಿಂದ ಪಾರಾಗಿದ್ದೂ ಈಗ ಪರಾರಿಯಾಗಿದ್ದಾನೆ. ಕೇಂದ್ರ ಸಚಿವೆ ಸಾತ್ವಿ ನಿರಂಜನ ಜ್ಯೋತಿ ಇವರು ಕೊರಠಾ ಗ್ರಾಮಕ್ಕೆ ಹೋಗಿ ಜನರಿಗೆ ಸಾಂತ್ವನ ನೀಡಿದ್ದಾರೆ.

ಈ ಪ್ರಕರಣ ಹೆಚ್ಚುವರಿ ಪೊಲೀಸ ಮಹಾ ಸಂಚಾಲಕರು ನಿರ್ಲಕ್ಷ ತೋರಿದ ೪ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಈ ಅಪಘಾತದ ಕುರಿತು ದಂಡಾಧಿಕಾರಿಯ ಮೂಲಕ ತನಿಖೆ ನಡೆಸಲಾಗುವುದು. ಸ್ಥಳೀಯರ ಆರೋಪದ ಪ್ರಕಾರ ಪೊಲೀಸರು ಸರಿಯಾದ ಸಮಯಕ್ಕೆ ಘಟನಾ ಸ್ಥಳಕ್ಕೆ ತಲುಪಲಿಲ್ಲ ಮತ್ತು ಆಂಬುಲೆನ್ಸ್ ಕೂಡ ಸಮಯಕ್ಕೆ ಸರಿಯಾಗಿ ತಲುಪಲಿಲ್ಲ. ಅದು ಸಮಯಕ್ಕೆ ಸರಿಯಾಗಿ ಬರುತ್ತಿದ್ದರೆ ಕೆಲವು ಜನರ ಪ್ರಾಣ ಉಳಿಯುತ್ತಿತ್ತು ಎಂದು ಹೇಳಿದರು. ಪ್ರಧಾನಿ ಅವರು ಮೃತರ ಸಂಬಂಧಿಕರಿಗೆ ೨ ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ೫೦ ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.