ಕರಾಚಿಯಲ್ಲಿ ಹಲ್ಲಿನ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಚೀನಿ ಸಾವನ್ನಪ್ಪಿದರೇ ೩ ಚೀನಿ ನಾಗರಿಕರು ಗಾಯಗೊಂಡರು !

ಕರಾಚಿ (ಪಾಕಿಸ್ತಾನ) – ಇಲ್ಲಿ ಹಲ್ಲಿನ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯು ನಡೆಸಿದ ಗುಂಡಿನ ದಾಳಿಯಲ್ಲಿ ಚೀನಿ ನಾಗರೀಕನು ಸಾವನ್ನಪ್ಪಿದನು ಹಾಗೂ ಇತರ ಮೂವರು ಚೀನಿ ನಾಗರಿಕರು ಗಂಭೀರವಾಗಿ ಗಾಯಗೊಂಡರು. ಇಲ್ಲಿಯವರೆಗೆ ಈ ಘಟನೆಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಸ್ವೀಕರಿಸಿಲ್ಲ. ಗುಂಡಿನ ದಾಳಿ ನಡೆಸುವ ವ್ಯಕ್ತಿ ತಾನು ಒಬ್ಬ ರೋಗಿ ಎಂದು ಹೇಳಿ ಬಂದಿದ್ದನು.

ಈ ಆಸ್ಪತ್ರೆಯ ವೈದ್ಯ ರಿಚರ್ಡ್ ಹೂ ಇವರ ಪತ್ನಿ ಫೆನ್ ಟೆಪಿನ್ ಮತ್ತು ಕಾರ್ಮಿಕ ರೋನಾಲ್ಡ್ ಇವರ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಆ ಸಮಯದಲ್ಲಿ ರೇಮಂಡ್ ಚಾವು ಇಲ್ಲಿ ತಲುಪಿದ ನಂತರ ಅವರ ಮೇಲೆಯೂ ಕೂಡ ದಾಳಿ ನಡೆಸಲಾಯಿತು. ಅದರ ನಂತರ ಕೊಲೆಗಾರನು ಓಡಿ ಹೋದನು. ಈ ಗುಂಡಿನ ದಾಳಿಯಲ್ಲಿ ರೊನಾಲ್ಡ್ ಇವರು ಸಾವನ್ನಪ್ಪಿದರು.