ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ ! – ಸರಸಂಘಚಾಲಕ

ಸರಸಂಘಚಾಲಕ ಡಾ. ಮೋಹನ ಭಾಗವತ

ಶಿಲಾಂಗ್ (ಮೇಘಾಲಯ) – ಮೇಘಾಲಯದ ದಕ್ಷಿಣಕ್ಕೆ, ಹಿಂದೂ ಮಹಾಸಾಗರದ ಉತ್ತರಕ್ಕೆ ಮತ್ತು ಸಿಂಧು ನದಿಯ ತೀರದಲ್ಲಿ ವಾಸಿಸುವವರಿಗೆ ಪರಂಪರೆಯಿಂದ ‘ಹಿಂದೂ’ ಎನ್ನಲಾಗುತ್ತದೆ. ಮೊಘಲರು ಮತ್ತು ಕ್ರೈಸ್ತರ ಮೊದಲು ಹಿಂದೂಗಳು ಅಸ್ತಿತ್ವದಲ್ಲಿದ್ದರು. ನಿಜವೆಂದರೆ ಹಿಂದೂ ಧರ್ಮ ಇದು ಧರ್ಮವಾಗಿರದೇ ಜೀವನ ಶೈಲಿಯಾಗಿದೆ. ಹಿಂದೂ ಆಗಲು ಧರ್ಮ ಬದಲಾಯಿಸುವ ಅವಶ್ಯಕತೆ ಇಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಒಂದು ಜಾಹಿರ ಸಭೆಗೆ ಸಂಬೋಧಿಸುವಾಗ ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಭಾರತದ ಸರ್ವಾಂಗಣ ವಿಕಾಸ ಮತ್ತು ಸಾಮಾಜವನ್ನು ಸಂಘಟಿಸುವುದು, ಇದು ಸಂಘದ ಉದ್ದೇಶವಾಗಿದೆ.

೨. ಸಂಘ ವೈಯಕ್ತಿಕ ಸ್ವಾರ್ಥದ ತ್ಯಾಗ ಮಾಡಿ ದೇಶಕ್ಕಾಗಿ ತ್ಯಾಗ ಮಾಡಲು ಕಲಿಸುತ್ತದೆ.

೩. ‘ಹಿಂದೂ’ ಈ ಶಬ್ದದಲ್ಲಿ ಭಾರತ ಮಾತೆಯ ಪುತ್ರ ಆಗಿರುವ ಎಲ್ಲರ ಸಮಾವೇಶ ಇರುತ್ತದೆ. ಅವರು ಭಾರತದ ಪೂರ್ವಜರ ವಂಶಜರಾಗಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯ ಪ್ರಕಾರ ಬದುಕುವವರು, ಅವರು ಹಿಂದೂ ಆಗಿದ್ದಾರೆ.

೪.ಭಾರತದಲ್ಲಿ ವಾಸಿಸುವ ಪ್ರತಿ ಒಬ್ಬರು ಹಿಂದೂ ಆಗಿದ್ದಾರೆ. ಭಾರತ ಇದು ಈ ಪಶ್ಚಿಮಾತ್ಯರ ಸಂಕಲ್ಪನೆಯ ದೇಶವಲ್ಲ.

೫. ಆಧ್ಯಾತ್ಮದ ಮೇಲೆ ಆಧಾರಿತ ಪ್ರಾಚೀನ ಮೌಲ್ಯಗಳು ವಿಶ್ವಾಸ ಇದು ದೇಶದ ಜನರನ್ನು ಒಗ್ಗೂಡಿಸುವ ಶಕ್ತಿಯಾಗಿದೆ.

೬. ಭಾರತವು ಜಗತ್ತಿಗೆ ಮಾನವೀಯತೆಯ ಪಾಠ ಕಲಿಸಿದೆ.