ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ದೆಹಲಿಯಲ್ಲಿನ ಮಸೀದಿಗೆ ಹೋಗಿ ಮುಸಲ್ಮಾನ ನಾಯಕರನ್ನು ಭೇಟಿ ಮಾಡಿದರು!

ಸರಸಂಘ ಚಾಲಕರಾದ ಡಾ. ಮೋಹನ ಭಾಗವತ

ನವದೆಹಲಿ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾದ ಡಾ. ಮೋಹನ ಭಾಗವತ ಇವರು ದೆಹಲಿಯಲ್ಲಿನ ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಗೆ ಭೇಟಿ ನೀಡಿದರು. ‘ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್’ ನ ಪ್ರಮುಖ ಡಾ. ಉಮರ್ ಅಹಮದ್ ಇಲಿಯಾಸಿ ಇವರನ್ನು ಭೇಟಿ ಮಾಡಿದರು. ಈ ಸಭೆ ಸುಮಾರು ಒಂದು ಗಂಟೆ ನಡೆದಿದೆ. ಸರಸಂಘಚಾಲಕರ ಜೊತೆಗೆ ಸಂಘದ ಹಿರಿಯ ಪದಾಧಿಕಾರಿ ಕೃಷ್ಣ ಗೋಪಾಲ, ರಾಮಲಾಲ ಮತ್ತು ಇಂದ್ರೇಶ ಕುಮಾರ ಇವರು ಉಪಸ್ಥಿತರಿದ್ದರು. ಈ ವಿಷಯವಾಗಿ ಉಮರ್ ಇಲಿಯಾಸಿ ಇವರ ಮಗ ಸುಹೈಬ್ ಇಲಯಾಸಿ ಇವರು, ಈ ಭೇಟಿಯಿಂದ ದೇಶಾದ್ಯಂತ ಒಂದು ಒಳ್ಳೆಯ ಸಂದೇಶ ಹೋಗಿದೆ. ನಾವು ಒಂದು ಕುಟುಂಬದ ರೀತಿಯಲ್ಲಿ ಚರ್ಚೆ ನಡೆಸಿದ್ದೇವೆ. ನಮ್ಮ ಆಮಂತ್ರಣದ ನಂತರ ಅವರು ಭೇಟಿಗಾಗಿ ಬಂದರು ಎಂದು ಹೇಳಿದರು. ಸರಸಂಘಚಾಲಕರು ಈ ಮೊದಲು ಕೆಲವು ಮುಸಲ್ಮಾನ ನಾಯಕರನ್ನು ಭೇಟಿ ಮಾಡಿದ್ದರು. ಅದರಲ್ಲಿ ದೆಹಲಿಯ ಮಾಜಿ ಉಪರಾಜ್ಯಪಾಲ ನಜೀವ ಜಂಗ, ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಕುರೇಶಿ ಮುಂತಾದವರು ಒಳಗೊಂಡಿದ್ದಾರೆ.

ಇಲಿಯಾಸಿ ಇವರ ಭೇಟಿ ಒಂದು ಸಾಮಾನ್ಯ ಸಂವಾದ ಪ್ರಕ್ರಿಯೆ ! – ಸಂಘದ ಪ್ರಚಾರ ಪ್ರಮುಖರಾದ ಸುನಿಲ ಅಂಬೇಕರ

ಸಂಘದ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ ಇವರು ಈ ಭೇಟಿಯ ಬಗ್ಗೆ, ಸರಸಂಘಚಾಲಕ ಡಾ. ಮೋಹನ ಭಾಗವತ ಎಲ್ಲಾ ಕ್ಷೇತ್ರದಲ್ಲಿನ ಜನರನ್ನು ಭೇಟಿ ಮಾಡುತ್ತಾರೆ. ಈ ಭೇಟಿ ಒಂದು ಸತತ ನಡೆಯುವ ಸಾಮಾನ್ಯ ಸಂವಾದದ ಪ್ರಕ್ರಿಯೆಯ ಭಾಗವಾಗಿದೆ ಎಂದು ಹೇಳಿದರು.

ಸರಸಂಗಚಾಲಕ ಡಾ. ಮೋಹನ್ ಭಾಗವತ ಅವರು ‘ರಾಷ್ಟ್ರಪಿತಾ’ ಮತ್ತು ‘ರಾಷ್ಟ್ರ ಋಷಿ’ ! – ಡಾ. ಉಮೇರ ಅಹಮದ್ ಇಲಿಯಾಸಿ

ಸರಸಂಘಚಾಲಕ ಇವರ ಭೇಟಿಯ ಬಗ್ಗೆ ಡಾ. ಉಮೇರ ಇಲಯಾಸಿ ಇವರು, ಡಾ. ಮೋಹನ ಭಾಗವತ ನಮ್ಮ ಹತ್ತಿರ ಬರುವುದು, ಇದು ನಮ್ಮ ಭಾಗ್ಯವಾಗಿದೆ. ಅವರು ಇಮಾಮ್ ಹೌಸ್‌ನಲ್ಲಿ ಭೇಟಿಗಾಗಿ ಬಂದಿದ್ದರು. ಅವರು ನಮ್ಮ ‘ರಾಷ್ಟ್ರಪಿತಾ’ ಮತ್ತು ‘ರಾಷ್ಟ್ರ ಋಷಿ’ ಆಗಿದ್ದಾರೆ. ದೇಶದ ಏಕತೆ ಮತ್ತು ಅಖಂಡತೆ ಶಾಶ್ವತವಾಗಿ ಉಳಿಯಬೇಕು. ನಮ್ಮ ಪೂಜಾ ಪದ್ಧತಿ ಬೇರೆ ಆಗಿದ್ದರೂ ನಾವು ಎಲ್ಲಕ್ಕಿಂತ ಮೊದಲು ಮನುಷ್ಯರಾಗಿದ್ದೇವೆ ಮತ್ತು ನಮ್ಮಲ್ಲಿ ಮಾನವೀಯತೆ ಇರಬೇಕು. ಭಾರತ ವಿಶ್ವಗುರು ಆಗುವ ದಿಕ್ಕಿಗೆ ಮುನ್ನಡೆಯುತ್ತಿದೆ. ಅದಕ್ಕಾಗಿ ನಾವೆಲ್ಲರೂ ಪ್ರಯತ್ನ ಮಾಡುತ್ತಿರಬೇಕು, ಎಂದು ಸರಸಂಘಚಾಲಕರ ಭೇಟಿಯ ಬಗ್ಗೆ ಡಾ. ಉಮೇರಿ ಇಲಿಯಾಸಿ ಹೇಳಿದರು.