ಮಹಂತ ನರೇಂದ್ರ ಗಿರಿ ಇವರ ಕೋಣೆಯಲ್ಲಿ ೩ ಕೋಟಿ ರೂಪಾಯಿ ನಗದು ಮತ್ತು ೫೦ ಕಿಲೊ ಚಿನ್ನ ಪತ್ತೆ !

ಮಹಂತ ನರೇಂದ್ರ ಗಿರಿಯವರು ನಿಧನರಾಗಿ ೧ ವರ್ಷದನಂತರ ಅವರ ಕೋಣೆಯನ್ನು ಸಿ.ಬಿ.ಐನಿಂದ ತಪಾಸಣೆ

ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿನ ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಬಾಧಂಬರಿ ಮಠದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ತಂಡವು ಪರಿಷತ್ತಿನ ಮಾಜಿ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಇವರ ಸೀಲ್ ಮಾಡಲಾಗಿದ್ದ ಕೋಣೆಯನ್ನು ತೆರೆದು ತಪಾಸಣೆ ಮಾಡಿದಾಗ ಕೋಣೆಯಲ್ಲಿ ೩ ಕೋಟಿ ರೂಪಾಯಿ ನಗದು ಮತ್ತು ೫೦ ಕೆಜಿ ಚಿನ್ನ, ಹನುಮಂತನ ಚಿನ್ನದ ಕಿರೀಟ, ಕಡಗ ಮತ್ತು ಬಾಜೂಬಂದ ಪತ್ತೆಯಾಗಿದೆ. ಇವೆಲ್ಲವನ್ನೂ ಕಬ್ಬಿಣದ ಕಪಾಟಿನಲ್ಲಿಟ್ಟಿದ್ದರು. ಅದೇ ರೀತಿ ಕೋಟ್ಯಾವಧಿ ರೂಪಾಯಿಗಳ ಆಸ್ತಿಯ ದಾಖಲೆಗಳು ಮತ್ತು ೯ ಕ್ವಿಂಟಲ್ ದೇಶಿ ತುಪ್ಪ ಕೂಡ ಸಿಕ್ಕಿದೆ.

ನರೇಂದ್ರ ಗಿರಿ ಇವರ ನಿಧನವಾಗಿ ಒಂದು ವರ್ಷದ ನಂತರ ಸಿಬಿಐನವರು ಅವರ ಮೃತದೇಹವು ಯಾವ ಕೋಣೆಯಲ್ಲಿ ಸಿಕಿತ್ತೊ, ಅದರ ತಪಾಸಣೆ ಮಾಡಿದರು. ಮಹಂತ ನರೇಂದ್ರ ಗಿರಿ ಇವರ ಸಾವು ಹೇಗಾಯಿತು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಅವರ ಮೃತದೇಹ ಫ್ಯಾನ್‌ಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಹಾಗೂ ಒಂದು ಪತ್ರ ಕೂಡ ಸಿಕ್ಕಿತ್ತು. ಈ ಪ್ರಕರಣದಲ್ಲಿ ಮಹಂತ ನರೇಂದ್ರ ಗಿರಿಯವರ ಶಿಷ್ಯ ಆನಂದ ಗಿರಿ, ಆರಾಧ್ಯ ಪ್ರಸಾದ ತಿವಾರಿ ಮತ್ತು ಅವರ ಮಗ ಸಂದೀಪ ತಿವಾರಿ ಇವರನ್ನು ಬಂದಿಸಲಾಗಿದೆ. ಬಾಂಘಂಬರಿ ಮಠದ ಇಂದಿನ ಮಹಂತ ಬಲವೀರ ಗಿರಿ ಇವರು ಕೋಣೆಯನ್ನು ತೆರೆಯಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಅನಂತರ ಸಿಬಿಐ ಈ ಕೋಣೆಯನ್ನು ತೆರೆದರು.