ನವ ದೆಹಲಿ – ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಹಕ್ಕುಗಳ ಆಯೋಗದಿಂದ ‘ಅಮೆಜಾನ್ ಇಂಡಿಯಾ’ ಕಂಪನಿಗೆ ನೋಟಿಸ್ ಜಾರಿ ಮಾಡಿದೆ. ಮತಾಂತರಗೊಳಿಸುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ನೋಟಿಸ ಮೂಲಕ ಸ್ಪಷ್ಟೀಕರಣ ಕೇಳಲಾಗಿದೆ.
धर्मांतरण मामले में अमेजन इंडिया को नोटिस: NCPCR ने एनजीओ को धन देने को लेकर जवाब मांगा, अरुणाचल प्रदेश का मामलाhttps://t.co/se8cawPVTL@NCPCR_#Amazon pic.twitter.com/pCQ1SrimKx
— Dainik Bhaskar (@DainikBhaskar) September 17, 2022
೧. ಅಯೋಗವು, ಅರುಣಾಚಲ ಪ್ರದೇಶದಲ್ಲಿ ಸಾಮಾಜಿಕ ನ್ಯಾಯಪೀಠ ಈ ಸಂಸ್ಥೆಯಿಂದ ಆಯೋಗಕ್ಕೆ ದೂರು ದೊರೆಕಿದೆ. ಅಮೇರಿಕಾ ಮತ್ತು ಬ್ರಿಟನ್‌ನಲ್ಲಿ ನೋಂದಣಿಕೃತ ‘ಆಲ್ ಇಂಡಿಯಾ ಮಿಷನ್’ ಈ ಖಾಸಗಿ ಸಂಸ್ಥೆ ಕಾನೂನಬಾಹಿರ ಕೃತ್ಯದಲ್ಲಿ ಸಹಭಾಗಿಯಾಗಿರುವ ಆರೋಪ ಮಾಡಲಾಗಿದೆ. ಈ ಸಂಸ್ಥೆ ಭಾರತದಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಾರೆ. ಮೇಲಿನ ಸಂಸ್ಥೆಯ ಭಾರತಾದ್ಯಂತ ೧೦೦ ಕ್ಕೂ ಹೆಚ್ಚಿನ ಅನಾಥಾಶ್ರಮ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಸ್ಥೆಯ ಜಾಲತಾಣದಲ್ಲಿ ಮತ್ತು ಸಾಮಾಜಿಕ ಮಾಧ್ಯಮದ ಪೇಜ್‌ಗಳಲ್ಲಿ, ಅವರು ಭಾರತದಲ್ಲಿ ಮತಾಂತರಗೊಳಿಸುವ ಉದ್ದೇಶ ಇದೆ ಮತ್ತು ವಿಶೇಷವಾಗಿ ಈಶಾನ್ಯ ಭಾರತ ಮತ್ತು ಜಾರ್ಖಂಡ ರಾಜ್ಯದಲ್ಲಿ ಅನೇಕ ಜನರನ್ನು ಮತಾಂತರ ಮಾಡಲಾಗಿದೆ ಸ್ಪಷ್ಟವಾಗಿ ನಮೂದಿಸಲಾಗಿದೆ, ಎಂದು ಆಯೋಗ ಹೇಳಿದೆ.
೨. ಈ ಸಂಸ್ಥೆಗೆ ‘ಅಮೆಜಾನ್ ಇಂಡಿಯಾ’ದಿಂದ ದೇಣಿಗೆ ದೊರೆಯುತ್ತದೆ, ಎಂಬ ಆರೋಪ ಸಹ ಈ ದೂರಿನಲ್ಲಿ ಮಾಡಲಾಗಿದೆ. ‘ಅಮೆಜಾನ್ ಇಂಡಿಯಾ’ದಿಂದ, ಅದರ ಗ್ರಾಹಕರು ‘ಅಮೆಜಾನ್ ಸ್ಮೈಲ್’ ನಿಂದ ಖರೀದಿ ಮಾಡಿ ‘ಆಲ್ ಇಂಡಿಯಾ ಮಿಷನ್’ಗೆ ಬೆಂಬಲ ನೀಡಬಹುದು ಎಂದು ಸ್ಪಷ್ಟವಾಗಿ ನಮೂದಿಸಿದೆ.
ಸಂಪಾದಕೀಯ ನಿಲುವು
|