ಸೋನಭದ್ರ (ಉತ್ತರ ಪ್ರದೇಶ)ದಲ್ಲಿ ಓರ್ವ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಲೈಂಗಿಕ ಶೋಷಣೆ

ಸೋನಭದ್ರ – ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯ ಸರ್ಫರಾಜ್ ಎಂಬ ಮುಸಲ್ಮಾನ ಯುವಕನು ಓರ್ವ ೧೫ ವಯಸ್ಸಿನ ಹಿಂದೂ ಹುಡುಗಿಯನ್ನು ಫುಸಲಾಯಿಸಿ ಆಕೆಯ ಲೈಂಗಿಕ ಶೋಷಣೆ ಮಾಡಿದ್ದಾನೆ. ಸಂತ್ರಸ್ತೆಯು ಗರ್ಭಿಣಿಯಾದ ನಂತರ ಸರ್ಫರಾಜ್ ಆಕೆಗೆ ಇಸ್ಲಾಂ ಸ್ವೀಕರಿಸಿ ವಿವಾಹ ಮಾಡಿಕೊಳ್ಳುವುದಕ್ಕೆ ಒತ್ತಡ ಹೇರಿದನು. ಈ ಪ್ರಕರಣದಲ್ಲಿ ಪೊಲೀಸರು ಸರ್ಪರಾಜ್ ಇವನನ್ನು ಬಂಧಿಸಿದ್ದಾರೆ.

ಈ ಘಟನೆ ಸೋನಭದ್ರ ಜಿಲ್ಲೆಯ ಪನ್ನುಗಂಜ ಪೊಲೀಸ ಠಾಣೆ ವ್ಯಾಪ್ತಿಯ ಪಡರಿ ಕಲಾ ಗ್ರಾಮದಲ್ಲಿ ನಡೆದಿದೆ. ಸಂತ್ರಸ್ತ ಹುಡುಗಿ ಅಲ್ಲಿ ತನ್ನ ಅಜ್ಜನ ಮನೆಯಲ್ಲಿ ವಾಸವಾಗಿದ್ದಳು. ಸಂತ್ರಸ್ತ ಹುಡುಗಿಯ ಸೋದರ ಮಾವನ ಸ್ನೇಹಿತ ಸರ್ಫರಾಜ್ ಇವನು ಅವರ ಮನೆಗೆ ಬರುತ್ತಿದ್ದನು. ಅವನು ಸಂತ್ರಸ್ತ ಹುಡುಗಿಯನ್ನು ಫೂಸಲಾಯಿಸಿ ಆಕೆಯ ಜೊತೆಗೆ ಶಾರೀರಿಕ ಸಂಬಂಧ ಬೆಳೆಸಿದನು. ಸಂತ್ರಸ್ತ ಹುಡುಗಿ ಗರ್ಭಿಣಿಯಾದ ನಂತರ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿತು. ಅದರ ನಂತರ ಸಹ ಸರ್ಫರಾಜ್ ಸಂತ್ರಸ್ತ ಹುಡುಗಿಯ ಕುಟುಂಬದವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದನು; ಆದರೆ ಸಂತ್ರಸ್ತ ಹುಡುಗಿಯ ಕುಟುಂಬದವರು ಯಾವುದೇ ಒತ್ತಡಕ್ಕೆ ಮಣಿಯದೆ ಪನ್ನುಗಂಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಸರ್ಫರಾಜ್ ಇವನು ಸಂತ್ರಸ್ತ ಹುಡುಗಿಯ ಕುಟುಂಬದವರಿಗೆ ಜೀವ ಬೆದರಿಕೆ ನೀಡಿದನು.