ಪಾಟಲೀಪುತ್ರದಲ್ಲಿ ಗಂಗಾನದಿಯಲ್ಲಿ ದೋಣಿಗಳ ಡಿಕ್ಕಿಯಿಂದಾಗಿ ನೀರಿನಲ್ಲಿ ಬಿದ್ದ ೫೦ ಜನರಲ್ಲಿ ೧೨ ಜನರು ಕಾಣೆಯಾಗಿದ್ದಾರೆ

ಪಾಟಲೀಪುತ್ರ (ಬಿಹಾರ) – ಇಲ್ಲಿ ಗಂಗಾನದಿಯಲ್ಲಿ ೨ ದೋಣಿಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ದೋಣಿಗಳು ಮಗುಚಿ ಬಿದ್ದವು. ಇದರಿಂದಾಗಿ ದೋಣಿಯಲ್ಲಿದ್ದ ಸುಮಾರು ೫೦ ಜನರು ನೀರಿಗೆ ಬಿದ್ದು, ಅವರಲ್ಲಿ ೧೨ ಜನರು ಕಾಣೆಯಾಗಿದ್ದಾರೆ. ಉಳಿದವರನ್ನು ನದಿಯಿಂದ ಹೊರಗೆ ತೆಗೆಯಲಾಗಿದೆ. ನದಿಯ ಭಾರಿ ಪ್ರವಾಹದಿಂದಾಗಿ ೨ ದೋಣಿಗಳ ಸಮತೋಲನ ಹದಗೆಟ್ಟಿದ್ದರಿಂದ ಈ ಘಟನೆ ನಡೆದಿದೆ.