ಹೋಟೆಲಿನಲ್ಲಿ ನಡೆದ ಅಗ್ನಿದುರಂತದಿಂದಾಗಿ ೬ ಜನರ ಮೃತ್ಯು

ಲಕ್ಷ್ಮಣಪುರಿ – ನಗರದಲ್ಲಿನ ಹೋಟೇಲಿನಲ್ಲಿ ಸಪ್ಟೆಂಬರ್‌ ೫, ೨೦೨೨ರಂದು ನಡೆದ ಭಯಾನಕ ಅಗ್ನಿದುರಂತದಲ್ಲಿ ೬ ಜನರು ಮೃತರಾದರೆ ೧೦ ಜನರು ಗಾಯಗೊಂಡಿದ್ದಾರೆ. ಹಜರತಗಂಜದಲ್ಲಿನ ಹೋಟೆಲ್‌ ‘ಲೆವಾನಾ’ದಲ್ಲಿ ಬೆಳಿಗ್ಗೆ ೬ ಗಂಟೆಗೆ ಬೆಂಕಿ ತಗುಲಿತು. ಆಗ ಹೋಟೇಲಿನಲ್ಲಿ ಅನೇಕ ಜನರು ಉಪಸ್ಥಿತರಿದ್ದರು. ಬೆಂಕಿಯಿಂದಾಗಿ ಅಪಾರ ಪ್ರಮಾಣದಲ್ಲಿ ಹೊಗೆ ತುಂಬಿದ್ದರಿಂದ ಕಿಟಕಿಗಳ ಗಾಜನ್ನು ಒಡೆದು ಅನೇಕ ಜನರನ್ನು ಹೊರಗೆ ತೆಗೆಯಲಾಯಿತು. ಬೆಂಕಿ ತಗುಲಿರುವುದರ ಮಾಹಿತಿ ದೊರೆಯುತ್ತಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಘಟನಾಸ್ಥಳವನ್ನು ತಲುಪಿದರು.
ಬೆಂಕಿ ತಗುಲಿದ ಸ್ವಲ್ಪವೇ ಸಮಯದಲ್ಲಿ ಅಗ್ನಿಯು ರೌದ್ರ ರೂಪವನ್ನು ತಾಳಿತು. ಹೊಗೆಯಿಂದಾಗಿ ಹೋಟೇಲಿನಲ್ಲಿ ಅನೇಕ ಜನರಿಗೆ ಉಸುರುಗಟ್ಟಿತು. ಅಗ್ನಿಶಾಮಕದಳದ ಸೈನಿಕರು ಹರಸಾಹಸ ಮಾಡಿ ಒಳಗಡೆ ಸಿಲುಕಿದ್ದ ಅನೇಕ ಜನರನ್ನು ಸುಖರೂಪವಾಗಿ ಹೊರತಂದರು. ಈ ಅಗ್ನಿ ದುರಂತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಒಯ್ಯಲಾಯಿತು. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.