ಸನಾತನ ಧರ್ಮವು ಕೃತಕವಾಗಿದೆ, ಶಿವನು ಕಾಲ್ಪನಿಕನಾಗಿದ್ದಾನೆ ! – ಮೌಲಾನಾ ನವಾಬ ಶೇಖ

  • ರಾಜಮಹಲ (ಝಾರಖಂಡ) ಇಲ್ಲಿನ ಮತಾಂಧ ಮುಸಲ್ಮಾನನಿಂದ ಹಿಂದೂ ಧರ್ಮದ ಅಯೋಗ್ಯ ಅಪಮಾನ

  • ವಿಶ್ವಹಿಂದೂ ಪರಿಷತ್ತಿನ ನೇತಾರರು ದೂರು ನೀಡಿದ್ದರೂ ಮೌಲಾನಾನನ್ನು ಬಂಧಿಸಲಾಗಿಲ್ಲ !

(ಮೌಲಾನಾ ಅಂದರೆ ಇಸ್ಲಾಮೀ ಅಧ್ಯಯನಕಾರ)

ಸಾಹಿಬಂಗಜ (ಝಾರಖಂಡ) – ರಾಜ್ಯದಲ್ಲಿನ ರಾಜಮಹಲದಲ್ಲಿನ ಮೌಲಾನಾ ನವಾಬ ಶೇಖನು ಶ್ರೀಕೃಷ್ಣಜನ್ಮಾಷ್ಟಮಿಯ ದಿನ ಹಿಂದೂ ಧರ್ಮ ಹಾಗೂ ದೇವತೆಗಳನ್ನು ಅಯೋಗ್ಯ ಶಬ್ಧಗಳಲ್ಲಿ ನಿಂದಿಸಿರುವ ಸಂದೇಶವನ್ನು ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ನೇತಾರರಾದ ಕಾಲೀಚರಣ ಮಂಡಲರವರಿಗೆ ಕಳುಹಿಸಿದ್ದಾನೆ. ಇದರಲ್ಲಿ ಶೇಖನು ಹಿಂದೂಗಳಿಗೆ ಶ್ರೀಕೃಷ್ಣಜನ್ಮಾಷ್ಟಮಿಯಂದು ಅಲ್ಲಾಹನ ಉಪಾಸನೆ ಮಾಡಲು ಹೇಳಿದ್ದನು. ಹಾಗೆಯೇ ಯೋಗಿ ಆದಿತ್ಯನಾಥ, ಅಮಿತ ಶಾಹ, ಮೋಹನ ಭಾಗವತರವರು ಇಸ್ಲಾಮನ್ನು ಸ್ವೀಕರಿಸಬೇಕು; ಏಕೆಂದರೆ ಹಿಂದೂ ಧರ್ಮವು ಕೃತಕವಾಗಿದ್ದು ಹಿಂದೂ ಧರ್ಮದಲ್ಲಿರುವುದು ಅಧರ್ಮವಾಗಿದೆ. ಶಿವನು ಕಾಲ್ಪನಿಕವಾಗಿದ್ದಾನೆ ಎಂದು ಹೇಳಿದ್ದನು. ಇದರ ವಿರುದ್ಧ ಮಂಡಲರವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರೂ ಇಲ್ಲಿಯವರೆಗೂ ಶೇಖನನ್ನು ಬಂಧಿಸಲಾಗಿಲ್ಲ.

ಮಾಲಾನಾ ಶೇಖನು ಮಂಡಲರವರಿಗೆ ಕಳುಹಿಸಿದ ಸಂದೇಶದಲ್ಲಿ ಮುಂದುವರಿದು, ಕಾಳಿದಾಸ, ತುಳಸೀದಾಸ, ವಾಲ್ಮೀಕಿ ಮುಂತಾದವರು ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನು ಬರೆದು ಜನರನ್ನು ಆಧರ್ಮದ ಮಾರ್ಗಕ್ಕೆ ಒಯ್ದಿದ್ದಾರೆ. ಈ ಎಲ್ಲ ಪುಸ್ತಕಗಳು ಹಾಗೂ ಅವುಗಳಲ್ಲಿ ಬರೆಯಲಾದ ಮಾಹಿತಿಯನ್ನು ಇಸ್ಲಾಮಿನಿಂದ ತೆಗೆದುಕೊಳ್ಳಲಾಗಿದೆ, ಎಂದು ಹೇಳಿದ್ದಾನೆ. (ಈ ಮಾತಿನಲ್ಲಿ ತಥ್ಯವಿದ್ದರೆ ಅಧರ್ಮದ ಮಾರ್ಗದಲ್ಲಿ ಯಾರನ್ನು ಯಾರು ಒಯ್ದರು ಎಂಬುದನ್ನು ತಿಳುವಳಿಯುಳ್ಳ ವ್ಯಕ್ತಿಗೆ ಹೇಳಬೇಕಾಗಿಲ್ಲ ! – ಸಂಪಾದಕರು)

ಮಂಡಲರವರು ನೀಡಿರುವ ದೂರಿನಲ್ಲಿ ಈ ರೀತಿಯಲ್ಲಿ ಆರೋಪಿಸಲಾಗಿದೆ, ಒಟ್ಟಿನಲ್ಲಿ ಅವರು ಸಿಟ್ಟಿನ ಭರದಲ್ಲಿ ಪ್ರತಿಕ್ರಿಯಿಸುವರು. ಇದರಿಂದ ನಗರದ ವಾತಾವರಣವು ಕೆಡುವುದು, ಹಾಗೆಯೇ ಮಂಡಲರವರ ಮೇಲೆ ಆಕ್ರಮಣವಾಗುವುದು ! ಪ್ರತ್ಯಕ್ಷದಲ್ಲಿ ಮಂಡಲರವರು ಇದರ ಮೇಲೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಅವರು ಮೌಲಾನಾನನ್ನು ಬಂಧಿಸಬೇಕಾಗಿ ಮನವಿ ಮಾಡಿದ್ದಾರೆ.

೨೦೧೯ರಲ್ಲಿಯೂ ಮೌಲಾನಾ ಶೇಖನ ಹಿಂದೂ ಧರ್ಮದ ವಿಡಂಬನೆ ಮಾಡುವ ಇಂತಹದೇ ಒಂದು ವಿಡಿಯೋ ಪ್ರಸಾರಿತವಾಗಿತ್ತು.

ಸಂಪಾದಕೀಯ ಭೂಮಿಕೆ

ಓರ್ವ ಹಿಂದೂವು ಇದೇ ರೀತಿಯಲ್ಲಿ ಇಸ್ಲಾಮಿನ ವಿರುದ್ಧ ಟೀಕಿಸಿದ್ದರೆ ಇಲ್ಲಿಯ ವರೆಗೆ ಅವನ ರುಂಡ ಕತ್ತರಿಸಲಾಗುತ್ತಿತ್ತು ಅಥವಾ ಅವನಿಗೆ ಈ ರೀತಿಯ ಬೆದರಿಕೆಗಳನ್ನು ಹಾಕಲಾಗುತ್ತಿತ್ತು. ಹಿಂದೂಗಳು ಅತೀಸಹಿಷ್ಣುಗಳಾಗಿದ್ದರಿಂದಲೇ ಅವರು ತಮ್ಮ ಧರ್ಮದ ಮೇಲಿನ ಟೀಕೆಗಳನ್ನು ಸಹಿಸಿಕೊಳ್ಳುತ್ತಾರೆ ಹಾಗೂ ಅದರ ವಿರುದ್ಧ ಕಾನೂನುಬದ್ಧ ಮಾರ್ಗದಿಂದ ಹೋರಾಡುವುದೂ ಇಲ್ಲ. ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಇಂತಹ ಮೌಲಾನಾಗಳ ಹೆಡೆಮುರಿ ಕಟ್ಟಿ ಅವರಿಗೆ ಅತ್ಯಂತ ಕಠೋರ ಶಿಕ್ಷೆಯಾಗುವಂತೆ ಮಾಡಬೇಕು !

ಹಿಂದೂಗಳು ಇನ್ನೂ ಎಷ್ಟು ದಿನ ತಮ್ಮ ಧರ್ಮದ ಅಪಮಾನವಾಗುತ್ತಿರುವುದನ್ನು ನೋಡಬೇಕು ? ಹಿಂದೂಗಳ ಸಹನಶೀಲತೆಯ ಅಂತ್ಯವನ್ನು ಕಾಣದೇ ಕೇಂದ್ರದಲ್ಲಿರುವ ಭಾಜಪ ಸರಕಾರವು ಈಗಲಾದರೂ ಕಠೋರವಾದ ಈಶನಿಂದೆಯ ಕಾನೂನನ್ನು ರಚಿಸಬೇಕು !