ಶ್ರೀ ಗಣೇಶನ ಅವಮಾನಿಸುವ ಮೂರ್ತಿ !
ಮುಂಬಯಿ – ದಕ್ಷಿಣ ಭಾರತದ ಚಲನಚಿತ್ರ ‘ಪುಷ್ಪ : ದಿ ರೈಸ್’ ನಲ್ಲಿ ನಟ ಅಲ್ಲು ಅರ್ಜುನ್ ಇವರು ಒಂದು ವಿಶಿಷ್ಟ ರೀತಿಯಲ್ಲಿ ಗಡ್ಡಕ್ಕೆ ಕೈಯಾಡಿಸುವ ಕೃತಿ ಮಾಡಿರುವುದು ಜನರಿಗೆ ಇಷ್ಟವಾಗಿತ್ತು. ಅದೇ ರೀತಿಯಲ್ಲಿ ಈ ಸಲದ ಶ್ರೀ ಗಣೇಶೋತ್ಸವದಲ್ಲಿನ ಶ್ರೀ ಗಣೇಶನ ಒಂದು ಮೂರ್ತಿ ತಯಾರಿಸಲಾಗಿದ್ದು ಅದರ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ. ಇದರಲ್ಲಿ ಶ್ರೀ ಗಣೇಶ ತನ್ನ ಗಡ್ಡಕ್ಕೆ ಅದೇ ರೀತಿ ಕೈಯಾಡಿಸುತ್ತಿರುವುದು ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹೊಗಳುತ್ತಿದ್ದಾರೆ. ಆದರೂ ದೊಡ್ಡ ಪ್ರಮಾಣದಲ್ಲಿ ವಿರೋಧ ಕೂಡ ವ್ಯಕ್ತಪಡಿಸಿಲಾಗುತ್ತಿದೆ.
‘ಕಮ್ಯುನಿಸ್ಟರಿಂದ ಉದ್ದೇಶಪೂರ್ವಕವಾಗಿ ಈ ರೀತಿಯ ಮೂರ್ತಿಯ ಪ್ರಸಾರ ಮಾಡಲಾಗುತ್ತಿದೆಯೇ ?’, ಇದರ ಶೋಧ ನಡೆಸಬೇಕು ! – ಡಾ. ಸಚ್ಚಿದಾನಂದ ಶೇವಡೆ, ರಾಷ್ಟ್ರೀಯ ಪ್ರವಚನಕಾರರು ಮತ್ತು ಇತಿಹಾಸಕಾರರು
ಪ್ರಸ್ತುತ ವ್ಯಂಗ್ಯ ಅಥವಾ ಈಕೋ ಫ್ರೆಂಡ್ಲಿ ಎಂದು ಕಾಗದ, ಸಗಣಿ, ಸ್ಪಟಿಕ, ರಟ್ಟು ಮುಂತಾದವುಗಳಿಂದ ಶ್ರೀ ಗಣೇಶ ಮೂರ್ತಿ ತಯಾರಿಸಲಾಗುತ್ತದೆ. ಪಾರ್ಥಿವ ಮೂರ್ತಿಯ ಅರ್ಥ ಕಪ್ಪು ಮಣ್ಣು, ಕೆಂಪು ಮಣ್ಣು ಮತ್ತು ಆವೆ ಮಣ್ಣು ಎಂದಾಗುತ್ತದೆ. ಈ ಮಣ್ಣಿನಿಂದ ತಯಾರಿಸಿರುವ ಮೂರ್ತಿ ಇರಬೇಕು. ಗಣಪತಿ ಇದು ಗಣಪತಿಯ ಹಾಗೆ ಇರಬೇಕು. ಅವನು ಚಿತ್ರ ನಟ, ಗಗನಯಾತ್ರಿ, ಶಿವಾಜಿ ಮಹಾರಾಜ, ನೇತಾಜಿ ಸುಭಾಷ ಚಂದ್ರ ಬೋಸ, ನರೇಂದ್ರ ಮೋದಿ ಅಥವಾ ರಾಜಕೀಯ ನಾಯಕರು ರೂಪದಲ್ಲಿ ಇರಬಾರದು. ನರ್ತಿಸುವ, ತಬಲಾ ಬಾರಿಸುವವ ಅಥವಾ ‘ಸೈರಾಟ್’ ಚಲನಚಿತ್ರದಲ್ಲಿನ ‘ಆರ್ಚಿ-ಪರ್ಶ್ಯಾ’ ಈ ಪಾತ್ರದ ರೂಪದಲ್ಲಿನ, ‘ಬಾಹುಬಲಿ’, ‘ಛೋಟಾ ಭೀಮ’ ಈ ಚಲನಚಿತ್ರದ ಪಾತ್ರದಂತೆ ಶ್ರೀ ಗಣೇಶನ ಮೂರ್ತಿ ತಯಾರಿಸಬಾರದು. ಈಗ ನಟನ ರೂಪದಲ್ಲಿ ಗಣೇಶನ ಮೂರ್ತಿ ತಯಾರಿಸಲಾಗಿದೆ. ‘ಪುಷ್ಪಾ’ ಚಲನಚಿತ್ರದಲ್ಲಿನ ನಟ ಅಲ್ಲು ಅರ್ಜುನನ ರೂಪದಲ್ಲಿ ಶ್ರೀ ಗಣೇಶನನ್ನು ತೋರಿಸಿ ‘ಝುಕೆಗಾ ನಹಿ ಸಾಲಾ’ ಇದು ಈ ಚಲನಚಿತ್ರದ ವಾಕ್ಯ ಅಷ್ಟೇ ನೆನಪಿನಲ್ಲಿ ಉಳಿಯುವುದು ಮತ್ತು ಅದನ್ನು ನೆನಪಿಸುವುದು. ಕಮ್ಯುನಿಸ್ಟರಿಂದ ಇಂತಹ ಮೂರ್ತಿಗಳು ಉದ್ದೇಶಪೂರ್ವಕ ಪ್ರಸಾರ ಮಾಡಲಾಗುತ್ತಿದೆಯೇ, ಇದರ ಶೋಧ ನಡೆಸಬೇಕು. ದೇವರನ್ನು ದೇವರ ರೂಪದಲ್ಲಿ ತೋರಿಸಿರಿ.
ಇಲ್ಲಿ ಮೇಲೆ ಪ್ರಕಟಿಸಿದ ಚಿತ್ರ ಯಾರ ಭಾವನೆಗಳಿಗೆ ನೋವನ್ನು ತರುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ
ಸಂಪಾದಕೀಯ ನಿಲುವುಎಲ್ಲಿ ಮಹಮ್ಮದ್ ಪೈಗಂಬರರ ತಥಾಕಥಿತ ಅವಮಾನ ಆಗಿದೆ ಎಂದು ಶಿರಶ್ಚೇಧ ಮಾಡುವ ಮುಸಲ್ಮಾನರು ಹಾಗೂ ತಾವೇ ತಮ್ಮ ದೇವರನ್ನು ವಿವಿಧ ರೀತಿಯಲ್ಲಿ ಅವಮಾನಿಸುವ ಹಿಂದೂಗಳು ! ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರು ದೇವತೆಗಳನ್ನು ಈ ರೀತಿಯಾಗಿ ಮನುಷ್ಯನ ರೂಪದಲ್ಲಿ ತಯಾರಿಸಿ ಅವರನ್ನು ಅವಮಾನಿಸುತ್ತಾರೆ. ಹಿಂದೂಗಳ ಧಾರ್ಮಿಕ ಸಂಘಟನೆಯಿಂದ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡಲು ಮುಂದಾಳತ್ವ ವಹಿಸುವುದು ಅವಶ್ಯಕವಾಗಿದೆ ! |