
ಕರ್ಣಾವತಿ – ಗುಜರಾತದ ಬನಾಸ್ಕಾಂತಾ ಜಿಲ್ಲೆಯಲ್ಲಿ ಮತಾಂಧರು ಬ್ರೈನ್‌ವಾಶ ಮಾಡಿದ್ದರಿಂದ ಪತ್ನಿ ಹಾಗೂ ಮಕ್ಕಳು ಇಸ್ಲಾಂ ಸ್ವೀಕರಿಸಿರುವುದರಿಂದ ಹತಾಶರಾದ ಪತಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಪೀಡಿತ ಸೋಳಂಕಿ ಇವರು ಪೊಲೀಸರಲ್ಲಿ ನೀಡಿದ ದೂರಿನಲ್ಲಿ, ಅವರ ಪತ್ನಿ ಹಾಗೂ ಮಕ್ಕಳನ್ನು ಶೇಖ್ ಕುಟುಂಬದವರು ಬ್ರೈನ್‌ವಾಶ ಮಾಡಿ ಅವರು ಇಸ್ಲಾಂ ಸ್ವೀಕರಿಸುವಂತೆ ಅನಿವಾರ್ಯ ಮಾಡಿದರು. ಈ ಪ್ರಕರಣದಲ್ಲಿ ಸೋಹೇಲ ಶೇಖ್ ಮತ್ತು ಇತರ ೪ ಜನರ ವಿರುದ್ಧ ಅಪರಾಧವನ್ನು ನೊಂದಾಯಿಸಲಾಗಿದೆ, ಎಂದು ಪೊಲೀಸರು ಹೇಳಿದರು.
Gujarat: पत्नी और बच्चों को ‘ब्रेनवॉश’ करके करवाया गया इस्लाम कबूल, हताश पति ने की आत्महत्या की कोशिश#Gujarat #ReligiousConversion #Brainwash https://t.co/nqyTSUbS5r
— Amar Ujala (@AmarUjalaNews) August 29, 2022
೧. ಈ ವಿಷಯದಲ್ಲಿ ವಿಸ್ತಾರವಾದ ವಾರ್ತೆ ಹೇಗಿದೆಯೆಂದರೆ, ಸೋಳಂಕಿ ಇವರ ಮಗಳು ಅವಳ ಮಹಾವಿದ್ಯಾಲಯದ ಎಜಾಜ್ ಶೇಖ್ ಎಂಬ ಮುಸಲ್ಮಾನ ಯುವಕನ ಸಂಪರ್ಕದಲ್ಲಿದ್ದಳು. ಹುಡುಗಿಯ ಮನೆಯವರು ಅವಳ ಗೆಳೆತನವನ್ನು ಆಕ್ಷೇಪಿಸಿದಾಗ ಅವಳು ಅವನ ಜೊತೆಗೆ ಇರುವುದಾಗಿ ಹಟಹಿಡಿದಳು. ನಂತರ ಅವಳ ತಾಯಿ ಮತ್ತು ಸಹೊದರ ಇವರು ಕೂಡ ಅವಳಿಗೆ ಬೆಂಬಲ ನೀಡಿದರು. ಮೂವರೂ ಮನೆಯಲ್ಲಿ ನಮಾಜ ಮಾಡಲು ಆರಂಭಿಸಿದರು.
೨. ಇದನ್ನು ಅವರ ಅವಿಭಕ್ತ ಕುಟುಂಬದ ಕೆಲವು ಸದಸ್ಯರು ಆಕ್ಷೇಪಿದಾಗ ಸೋಳಂಕಿ ಇವರ ಪತ್ನಿ, ಮಗಳು ಮತ್ತು ಮಗ ಇವರು ಮನೆಯನ್ನು ತ್ಯಜಿಸಿದರು ಹಾಗೂ ಶೇಖ್ ಕುಟುಂಬದವರ ಸಹಾಯದಿಂದ ಬೇರೆಯೆ ವಾಸಿಸಲು ಆರಂಭಿಸಿದರು; ಆದರೆ ನಂತರ ಅವರು ಎಲ್ಲಿದ್ದಾರೆಂದು ಪತ್ತೆಯಾಗಲಿಲ್ಲ.
೩. ಸೋಳಂಕಿ ಇವರು ಶೇಖ್ ಕುಟುಂಬದವರೊಂದಿಗೆ ಮಾತನಾಡಿ ಅವರ ಪತ್ನಿ ಮತ್ತು ಮಕ್ಕಳನ್ನು ಹುಡುಕಲು ಪ್ರಯತ್ನಿಸಿದಾಗ, ಶೇಖ್ ಕುಟುಂಬದವರು ಅವರನ್ನು ಭೇಟಿ ಮಾಡಿಸಲು ೨೫ ಲಕ್ಷ ರೂಪಾಯಿಗಳನ್ನು ಕೇಳಿದರು. ಹತಾಶರಾದ ಸೋಳಂಕಿ ಇವರು ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಸದ್ಯ ಅವರಿಗೆ ಪಾಲನಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ, ಎಂದು ಪೊಲೀಸರು ಹೇಳಿದರು.
ಸಂಪಾದಕೀಯ ನಿಲುವುಮತಾಂತರದಿಂದಾಗಿ ಹಿಂದೂಗಳ ಕುಟುಂಬಗಳು ಒಡೆಯ ಬಾರದೆಂದು, ಹಿಂದೂಗಳ ಮತಾಂತರದ ಪ್ರಯತ್ನ ಮಾಡುವ ಮತಾಂಧರಿಗೆ ಕಠೋರವಾದ ಶಿಕ್ಷೆಯನ್ನು ನೀಡಲು ಸರಕಾರವೆ ಹೆಜ್ಜೆಯಿಡಬೇಕು ! ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದೇ ಇದ್ದರಿಂದ ಮತಾಂಧರ ಬ್ರೈನ್‌ವಾಶಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಆದ್ದರಿಂದ ಧರ್ಮಶಿಕ್ಷಣ ಸಿಗುವ ಹಾಗೆ ವ್ಯವಸ್ಥೆ ಮಾಡಬೇಕು ! |
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ