ಪಾಕಿಸ್ತಾನದಲ್ಲಿ ನೆರೆ ಸಂತ್ರಸ್ತರ ಸಹಾಯಕ್ಕಾಗಿ ತಲುಪಿರುವ ಸೈನಿಕರಿಗೆ ಜನರಿಂದ ಕೈ ಕೈ ಮಿಲಾಯಿಸಿದರು

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಅನೇಕ ಭಾಗಗಳಲ್ಲಿ ನೆರೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿ ಲಕ್ಷಾಂತರ ಜನರು ಮನೆಯನ್ನು ಕಳೆದುಕೊಂಡಿದ್ದಾರೆ ಹಾಗೂ ನೂರಾರು ಜನರು ಸಾವನ್ನಪ್ಪಿದ್ದಾರೆ. ಈ ನಾಗರಿಕರ ಸಹಾಯಕ್ಕಾಗಿ ಪಾಕಿಸ್ತಾನ ಸೈನ್ಯವನ್ನು ಕಳುಹಿಸಿತ್ತು; ಆದರೆ ಕೆಲವು ಸ್ಥಳಗಳಲ್ಲಿ ನಾಗರಿಕರಿಂದ ಸೈನಿಕರಿಗೆ ವಿರೋಧ ತಿರುಗಿಬಿದ್ದರು ಮತ್ತು ಕೈ ಕೈ ಮಿಲಾಯಿಸುತ್ತಿದ್ದಾರೆ.
ಸಿಂಧ ಪ್ರಾಂತದಲ್ಲಿ ಯಾವಾಗ ಪಾಕಿಸ್ತಾನದ ಸೈನ್ಯ ನೆರೆ ಸಂತ್ರಸ್ತರ ಸಹಾಯಕ್ಕಾಗಿ ತಲುಪಿದರೋ ಆಗ ಅಲ್ಲಿಯ ಜನರು ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದರು. ಜನರು, ಈ ಜನರು ಸಹಾಯಕ್ಕಾಗಿ ಅಲ್ಲ, ಛಾಯಾ ಚಿತ್ರ ತೆಗೆಯಲು ಬಂದಿದ್ದಾರೆ. ಈ ಘಟನೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ನೆರೆಹಾವಳಿಯಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈ ವಿಡಿಯೋ, ‘ಜೆಯಿ ಸಿಂಧ ಮುತ್ತಹಿದಾ ಮಹಜ್’ ಈ ಸಿಂಧ ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಪ್ರಸ್ತುತ ಅಧ್ಯಕ್ಷ ಶಫಿ ಮಹಮ್ಮದ್ ಬರ್ಫತ ಇವರು ‘ಶೇರ್’ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜನರು ‘ಫೌಜ ಕೊ ಮಾರೊ’ ಎಂದು ಕೂಗಾಡುತ್ತಿರುವುದು ಕಾಣುತ್ತಿದೆ. ಕೆಲವು ಜನರ ಸೈನಿಕರ ಜೊತೆಗೆ ಜಟಾಪಟಿ ಮಾಡುತ್ತಿರುವುದು ಕಾಣುತ್ತಿದೆ. ಶಫಿ ಮಹಮ್ಮದ್ ಇವರು, ‘ಸಿಂಧ ಪ್ರದೇಶದಲ್ಲಿ ಸೈನಿಕರು ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ಹೆಸರಿನಲ್ಲಿ ನಾಟಕ ಮಾಡುವ ಪ್ರಯತ್ನ ಮಾಡಿ, ಛಾಯಾ ಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಸೈನ್ಯ ಸಿಂಧ ಪ್ರಾಂತಕ್ಕೆ ಸಹಾಯ ಮಾಡುತ್ತಿದೆ ಎಂದು ಪ್ರಸಾರ ಮಾಧ್ಯಮದಲ್ಲಿ ಭ್ರಮೆ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲೆಲ್ಲಿ ಸೈನ್ಯ ಈ ರೀತಿಯ ನಾಟಕ ಮಾಡುತ್ತಿದೆ ಅಲ್ಲಿ ಸಿಂಧನ ಜನರು ಅವರಿಗೆ ಪ್ರತ್ಯುತ್ತರ ನೀಡುತ್ತಿದ್ದಾರೆ.’ ಎಂದು ಹೇಳಿದರು.