‘ಲಾಲ ಸಿಂಗ್‌ ಚಢ್ಢಾ’ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅವಮಾನ; ದೆಹಲಿಯಲ್ಲಿನ ನ್ಯಾಯವಾದಿಗಳಿಂದ ಪೊಲೀಸರಲ್ಲಿ ದೂರು ನೋಂದಣಿ

ನ್ಯಾಯವಾದಿ ವಿನೀತ ಜಿಂದಾಲ(ಎಡಬದಿಗೆ ) ಮತ್ತು ನಟ ಆಮೀರ ಖಾನ (ಬಲಬದಿಗೆ)

ದೆಹಲಿ – ಇತ್ತೀಚೆಗೆ ಪ್ರದರ್ಶಿತವಾದ ಆಮೀರ ಖಾನರ ‘ಲಾಲ ಸಿಂಗ ಚಢ್ಢಾ’ ಎಂಬ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅಪಮಾನ ಮಾಡಲಾಗಿರುವ ಬಗ್ಗೆ ನ್ಯಾಯವಾದಿ ವಿನೀತ ಜಿಂದಾಲರವರು ದೆಹಲಿಯ ಪೊಲೀಸ ಆಯುಕ್ತರಾದ ಸಂಜಯ ಅರೋರಾರವರ ಬಳಿ ದೂರು ದಾಖಲಿಸಿದ್ದಾರೆ. ಆಮೀರ ಖಾನ, ಚಲನಚಿತ್ರದ ವಿತರಕರಾಗಿರುವ ‘ಪ್ಯಾರಾಮೌಂಟ್‌ ಪಿಕ್ಚರ್ಸ’, ಮಾರ್ಗದರ್ಶಕ ಅದ್ವೈತ ಚಂದನ ಮುಂತಾದವರ ವಿರುದ್ಧ ದೂರನ್ನು ದಾಖಲಿಸಲಾಗಿದೆ.

ಈ ದೂರಿನಲ್ಲಿ ಹೀಗೆ ಹೇಳಲಾಗಿದೆ
೧. ಚಲನಚಿತ್ರದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಈ ಚಲನಚಿತ್ರದಲ್ಲಿ ‘ಮಾನಸಿಕವಾಗಿ ವಿಕಲಾಂಗ ವ್ಯಕ್ತಿಗೆ ಸೈನ್ಯದಲ್ಲಿ ಸೇರಿಸಲಾಯಿತು ಮತ್ತು ಆತನಿಗೆ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಲು ಅನುಮತಿ ನೀಡಲಾಯಿತು’.
ಸೈನ್ಯದಲ್ಲಿ ಸರ್ವೋತ್ತಮ ಸೈನಿಕರ ಆಯ್ಕೆ ಮಾಡಲಾಗುತ್ತದೆ ಹಾಗೂ ಯುದ್ಧದಲ್ಲಿ ಕಠೋರ ತರಬೇತಿಯನ್ನು ಪಡೆದವರಿಗೆ ಮಾತ್ರ ಹೋರಾಡಲು ಕಳಿಸಲಾಗುತ್ತದೆ, ಎಂಬುದು ಎಲ್ಲರಿಗೂ ತಿಳಿದಿದೆ. ಈ ಚಲನಚಿತ್ರದ ಮೂಲಕ ಭಾರತೀಯ ಸೈನ್ಯದ ಅವಹೇಳನ ಮಾಡಲು ನಿರ್ಮಾಪಕರು ಉದ್ದೇಶಪೂರ್ವಕವಾಗಿ ಈ ದೃಶ್ಯವನ್ನು ತೋರಿಸಿದ್ದಾರೆ.

೨. ಚಲನಚಿತ್ರದ ಇನ್ನೊಂದು ದೃಶ್ಯದಲ್ಲಿ ಪಾಕಿಸ್ತಾನಿ ಸೈನ್ಯದ ಸೈನಿಕನು ಲಾಲನಿಗೆ ‘ನಾನು ನಮಾಜು ಓದುತ್ತಿದ್ದೇನೆ ಲಾಲ, ನೀನೇಕೆ ಹೀಗೆ ಮಾಡುವುದಿಲ್ಲ ?’ ಎಂದು ಕೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ಲಾಲನು ‘ಎಲ್ಲ ಪೂಜೆ ಪುನಸ್ಕಾರಗಳು ಮಲೇರಿಯಾ ಆಗಿವೆ, ಅವುಗಳಿಂದ ದಂಗೆಗಳಾಗುತ್ತವೆ ಎಂದು ಅಮ್ಮ ಹೇಳುತ್ತಾಳೆ’, ಎಂದು ಹೇಳುತ್ತಾನೆ. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರೀಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ; ಆದರೆ ಅದರ ದುರ್ಬಳಕೆ ಮಾಡುವುದು ತಪ್ಪಾಗಿದೆ. ಈ ದೃಶ್ಯವು ಧರ್ಮದ ಆಧಾರದಲ್ಲಿ ನಾಗರೀಕರನ್ನು ಕೆರಳಿಸುತ್ತದೆ. ಇದು ಗಂಭೀರ ಅಪರಾಧವಾಗಿದೆ.

೩. ಆಮೀರ ಖಾನರ ಹೇಳಿಕೆಯಿಂದಾಗಿ ಹಿಂದೂ ಸಮಾಜಕ್ಕೆ ನೋವಾಗಿದೆ. ಆಮೀರ ಖಾನರಿಂದ ದೇಶದ ಸುರಕ್ಷೆ, ಶಾಂತತೆ ಹಾಗೂ ಬಂಧುತ್ವಕ್ಕೆ ಅಪಾಯವಿದೆ.

೪. ಇಂತಹ ಪರಿಸ್ಥಿತಿಯಲ್ಲಿ ಆಮೀರ ಖಾನ, ‘ಪ್ಯಾರಾಮೌಂಟ್‌ ಪಿಕ್ಚರ್ಸ, ಹಾಗೂ ಇತರರ ವಿರುದ್ಧ ಕಲಮು ೧೫೩, ೧೫೩ ಎ, ೨೯೮ ಹಾಗೂ ೫೦೫ರ ಅನ್ವಯ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲು ಮನವಿ ಮಾಡಲಾಗಿದೆ.

ಸಂಪಾದಕೀಯ ನಿಲುವು

  • ಚಲನಚಿತ್ರದಲ್ಲಿ ಸೈನ್ಯ ವಿರೋಧಿ ಹಾಗೂ ಹಿಂದೂ ವಿರೋಧಿ ವಾಕ್ಯಗಳಿರುವಾಗಲೂ ಕೇಂದ್ರೀಯ ಚಲನಚಿತ್ರ ಪರಿನಿರೀಕ್ಷಣ ಮಂಡಳಿಯು ಇದಕ್ಕೆ ಪ್ರಮಾಣಪತ್ರವನ್ನು ಹೇಗೆ ನೀಡಿತು ? ಇಂತಹ ಒಂದು ವಾಕ್ಯ ಮುಸಲ್ಮಾನರ ವಿರುದ್ಧ ಇದ್ದರೆ ಇಲ್ಲಿಯ ವರೆಗೆ ಏನಾಗುತ್ತಿತ್ತು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ !
  • ಈ ಚಲನಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಟರ ಮೇಲೆ ಕಠೋರ ಕಾರ್ಯಾಚರಣೆಯಾಗಬೇಕು, ಆಗಲೇ ಈ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ಅಪಮಾನ ಮಾಡುವ ರೂಢಿ ನಿಲ್ಲುವುದು !